ಅಕ್ರಮ ಸಂಬಂಧಕಾಗಿ ಪ್ರಿಯಕರನೊಂದಿಗೆ ಸೇರಿ , ತನ್ನ ಪತಿಯನ್ನು ಕೊಲೆ ಮಾಡಿದ ಪತ್ನಿ ಮತ್ತು ಪ್ರಿಯಕರನ ಬಂಧನ

ಅಕ್ರಮ ಸಂಬಂಧಕಾಗಿ ಪ್ರಿಯಕರನೊಂದಿಗೆ ಸೇರಿ , ತನ್ನ ಪತಿಯನ್ನು ಕೊಲೆ ಮಾಡಿದ ಪತ್ನಿ ಮತ್ತು ಪ್ರಿಯಕರನ ಬಂಧನ ದಿನಾಂಕ 26 / 02 / 2018 ರಂದು ಪಿರಾದುದಾರರಾದ ಶ್ರೀ ಅಶ್ವಥಪ್ಪ ರವರು ಸೋಲದೇವನಹಳ್ಳಿ ಠಾಣೆಗೆ ಹಾಜರಾಗಿ ತನ್ನ ಅಣ್ಣನ ಮಗನಾದ ಶ್ರೀ ಉಮಾಶಂಕರ್ ಎಂಬುವನು ದಿನಾಂಕ 25 / 02 / 2018 ರಂದು ರಾತ್ರಿ ಸುಮಾರು 12 – 00 ಗಂಟೆಯ ಸಮಯದಲ್ಲಿ ಮನೆಯಲ್ಲಿ ಮೃತಪಟ್ಟಿರುವುದಾಗಿ ವಿಷಯ ತಿಳಿಸಿದ್ದು , ಆತನ ಸಾವಿನ ಬಗ್ಗೆ ಸಂಶಯವಿರುತ್ತದೆಂದು ನೀಡಿದ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದಲ್ಲಿ ತನಿಖಾಧಿಕಾರಿಯವರು ತನಿಖೆಯನ್ನು ಕೈಗೊಂಡು ಶವ ಪರೀಕ್ಷೆ ಮಾಡಿಸಿ , ವೈದ್ಯರ ಸಲಹೆ ಮೇರೆಗೆ ಮೃತನೆ ಎಸೆರಾವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು , ಅವರಿಂದ ವರದಿಯನ್ನು ಪಡೆದುಕೊಂಡು ಪರಿಶೀಲಿಸಿದಾಗ ಮೃತ ಉಮಾಶಂಕರ್ ರವರು ಸಂಶಯಾಸ್ಪದವಾಗಿ ಮೃತಪಟ್ಟಿರುವುದಾಗಿ ವರದಿ ನೀಡಿದ್ದು , ಸದರಿ ವರದಿಯನ್ನು ಆಧರಿಸಿ ತನಿಖಾಧಿಯವರು ತನಿಖೆಯ ಚುರುಕುಗೊಳಿಸಿ ಮೃತನ ಪತ್ನಿಯಾದ ಸುಖಿತಾಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆಕೆಯು ತನ್ನ ಪ್ರಿಯಕರ ಶ್ರೀನಿವಾಸ ಜೊತೆ ಸೇರಿಸಿಕೊಂಡು ಉರುಗಟ್ಟಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾಳೆ . ಈ ಪ್ರಕರಣದಲ್ಲಿ ಆರೋಪಿಗಳಾದ 1 ) ಸುಖಿತಾ 30 ವರ್ಷ , ದಾಸೇನಹಳ್ಳಿ ಗ್ರಾಮ , ಹೆಸರಘಟ್ಟ , ಬೆಂಗಳೂರು . 2 ) ಶ್ರೀನಿವಾಸ 31 ವರ್ಷ , ದಾಸೇನಹಳ್ಳಿ ಗ್ರಾಮ , ಹೆಸರಘಟ್ಟ , ಬೆಂಗಳೂರು ಎಂಬುವವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ . ಈ ಪ್ರಕರಣದಲ್ಲಿ ಆರೋಪಿತೆ ಸುಖಿತಾಳನ್ನು ಹೆಚ್ಚಿನ ವಿಚಾರಣೆ ಮಾಡಿದಾಗ ತನ್ನ ಪ್ರಿಯಕರ ಶ್ರೀನಿವಾಸ್‌ನೊಂದಿಗೆ ಅನೈತಿಕ ಸಂಬಂಧವಿರುವುದು ತನ್ನ ಗಂಡನಿಗೆ ತಿಳಿದಿದ್ದರಿಂದ , ತನ್ನ ಪ್ರಿಯಕರನನ್ನು ತನ್ನ ಮನೆಗೆ ಕರೆಸಿಕೊಂಡು ತನ್ನ ಪತಿಯನ್ನು ಉರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾರೆ . – ಈ ಪ್ರಕರಣದಲ್ಲಿ ಶ್ರೀ ಎನ್ . ಶಶಿ ಕುಮಾರ್ , ಉಪ ಪೊಲೀಸ್ ಆಯುಕ್ತರು , ಉತ್ತರ ವಿಭಾಗ ರವರ ಮಾರ್ಗದರ್ಶನದಲ್ಲಿ ಯಶವಂತಪುರ ಉಪ ವಿಭಾಗದ ಎಸಿಪಿ , ಶ್ರೀ ಪಿ . ರವಿಪ್ರಸಾದ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ರವರಾದ ಶ್ರೀ ವೆಂಕಟೇಗೌಡ ಹಾಗೂ ಪಿಎಸ್‌ಐ ಶ್ರೀ ಸೋಮಶೇಖರ್ ಮತ್ತು ಸಿಬ್ಬಂದಿಯವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.