ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಮೂರು ಆಸಾಮಿಗಳ ಬಂಧನ – ನಗದು ರೂ . 5 , 60 , 000 / – ರೂ ಹಾಗೂ ಆರು ಮೊಬೈಲ್ ಫೋನ್ಗ ಳ ವಶ

ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಮೂರು ಆಸಾಮಿಗಳ ಬಂಧನ – ನಗದು ರೂ . 5 , 60 , 000 / – ರೂ ಹಾಗೂ ಆರು ಮೊಬೈಲ್ ಫೋನ್ಗ ಳ ವಶ ಬೆಂಗಳೂರು ನಗರದ ವಿ . ವಿ . ಪುರಂ ಪೊಲೀಸ್ ಠಾಣಾ ಸರಹದ್ದಿನ ವಿ . ವಿ . ಪುರ , ಭುರಗಲ್ ಮಠ ರಸೆ , ಬಿ . ಆರ್ . ರಾಮು ಬಿಲಿಂಗ್ , 1ನೇ ಮಹಡಿಯಲಿರುವ ಸಾಂಬಾ ಇಂಪಕ್ ಕಛೇರಿಯಲ್ಲಿ ಮ ಬುಕ್ಕಿಗಳು ದಿನಾಂಕ : 16 – 03 – 2019 ರಂದು ನಡೆದ ಶ್ರೀಲಂಕಾ ಮತ್ತು ಸೌತ್‌ಆಪ್ರಿಕಾ ತಂಡಗಳ ನಡುವೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಸದರಿ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಇದಕ್ಕೆ ಸಂಬಂಧಿಸಿದ ಕ್ರಿಕೆಟ್ ಬೆಟ್ಟಿಂಗ್ ಹಣವನ್ನು ಬೆಟ್ಟಿಂಗ್ ಆಡುವ ಪಂಟರ್‌ಗಳಿಂದ ಸಂಗ್ರಹಿಸುತ್ತಿರುವುದಾಗಿ ಹಾಗೂ ಸದರಿ ಬುಕ್ಕಿಗಳು ಹಲವಾರು ಜನ ಸಾರ್ವಜನಿಕರಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಹಣವನ್ನು ಪಣವಾಗಿ ಮೊಬೈಲ್ ಆಪ್ ಮೂಲಕ ಕಟ್ಟಿಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ

ಕೇಂದ್ರ ಅಪರಾಧ ವಿಭಾಗ ( ಸಿಸಿಬಿ ) ವಿಶೇಷ ವಿಚಾರಣಾ ದಳದ ಪೊಲೀಸರು ದಿನಾಂಕ 18 . 03 . 2019 ರಂದು ಮೇಲ್ಕಂಡ ಸ್ಥಳದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ 1 . ಹೇಮಂತ್ ಜೈನ್ ಬಿನ್ ಪಾರಸ್ , 41ವರ್ಷ , 2 . ಮುಕೇಶ್ ಕುಮಾರ್ ಬಿನ್ ಮನೋಹರ್‌ಲಾಲ್ , 40ವರ್ಷ , 3 . ಪ್ರವೀಣ್ ಕುಮಾರ್ ಬಿನ್ ಜಿ . ಸಿ . ಜೈನ್ , 41ವರ್ಷ , ಇವರುಗಳನ್ನು ವಶಕ್ಕೆ ಪಡೆದು ಇವರುಗಳ ವಶದಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಿಸಿದ ಒಟ್ಟು ನಗದು ಹಣ ರೂ . 5 , 60 , 000 / – , ಕ್ರಿಕೆಟ್ ಬೆಟ್ಟಿಂಗ್ ವಿವರ ಬರೆದಿರುವ 11 ಹಾಳೆಗಳು ಹಾಗೂ ಆರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿರುತ್ತದೆ . ಈ ಸಂಬಂಧ ಆಸಾಮಿಗಳ ವಿರುದ್ದ ವಿ . ವಿ . ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ . – ಈ ಕಾರ್ಯಚರಣೆಯನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಆಲೋಕ್ ಕುಮಾರ್ , ಐಪಿಎಸ್ & ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ . ಎಸ್ , ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ , ಸಿಸಿಬಿ ಘಟಕದ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಎನ್ . ಹೆಚ್ , ರಾಮಚಂದ್ರಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ . ಎ . ಪಿ . ಕುಮಾರ್ ಮತ್ತು ಸಿಬ್ಬಂದಿಗಳಾದ ಶ್ರೀ ಜಾನ್‌ಕೆನ್ನಿ ಮತ್ತು ಶ್ರೀ ನಾಗರಾಜು ರವರುಗಳು ಯಶಸ್ವಿಗೊಳಿಸಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.