ಎಸಿಬಿಯಿಂದ ಭ್ರಷ್ಟಾಚಾರ ಆರೋಪಿತ 4 ಅಧಿಕಾರಿಗಳ ವಿರುದ್ಧ ದಾಳಿ ಇಂದು ರಾಜ್ಯಾದ್ಯಂತ 10 ಸಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಕಾರ್ಯಾಚರಣೆ

ಎಸಿಬಿಯಿಂದ ಭ್ರಷ್ಟಾಚಾರ ಆರೋಪಿತ 4 ಅಧಿಕಾರಿಗಳ ವಿರುದ್ಧ ದಾಳಿ ಇಂದು ರಾಜ್ಯಾದ್ಯಂತ 10 ಸಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಕಾರ್ಯಾಚರಣೆ ದಿನಾಂಕ : 19 . 03 . 2019 ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಯದ 4 ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ – ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ಇಂದು ದಾಳಿ ನಡೆಸಿರುತ್ತದೆ , ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಜಾಗಗಳ ಮತ್ತು ಸರ್ಕಾರಿ ಅಧಿಕಾರಿಗಳ ಮಾಹಿತಿ ಈ ಕೆಳಕಂಡಂತಿರುತ್ತವೆ . 1 ಶ್ರೀ . ಸತೀಶ್ ಐ . ಸಿ , ಸಹಕಾರ ಸಂಘಗಳ ಅಪರ ನಿಬಂಧಕರು , ಸಹಕಾರ ಇಲಾಖೆ , ಕೇಂದ್ರ ಕಛೇರಿ , ಅಅ ಅಸ್ತರ್ ರಸ್ತೆ , ಬೆಂಗಳೂರು . ಇವರ ಬೆಂಗಳೂರು ನಗರದ ವಾಸದ ಮನೆ , ಹಾಗೂ ಇವರ ಸಂಬಂಧಿಕರ ಬೆಂಗಳೂರು ನಗರದಲ್ಲಿನ ವಾಸದ ಮನೆ . 2 ಶ್ರೀ . ಶರದ್ ಗಂಗಪ್ಪ ಇಜ್ರ , ಉಪ ನಿರ್ದೇಶಕರು , ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ , ವಿಜಯಪುರ ( ಕೆ . ಆರ್ . ಐ . ಡಿ . ಎಲ್ ) ಇವರ ವಿಜಯಪುರ ನಗರದಲ್ಲಿನ ನಿವಾಸ , ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಉಪ ನಿರ್ದೇಶಕರ ಕಛೇರಿ , ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ , ವಿಜಯಪುರ , 3 , ಶ್ರೀ . ಪ್ರಕಾಶ್ ಗೌಡ ಕುದರಿಮೋಟ , ಕೃಷಿ ಅಧಿಕಾರಿ , ರೈತ ಸಂಪರ್ಕ ಕೇಂದ್ರ ಮುಂಡರಗಿ , ಗದಗ ಜಿಲ್ಲೆ . ಇವರ ಮುಂಡರಗಿಯಲ್ಲಿನ ಎರಡು ವಾಸದ ಮನೆ , ಹಾಗು ಇವರು ಕಾರ್ಯನಿರ್ವಹಿಸುತ್ತಿರುವ ರೈತ ಸಂಪರ್ಕ ಕೇಂದ್ರ , ಮಂಡರಗಿ ವಿಜಯಪುರ ಜಿಲ್ಲೆ . ಶ್ರೀ . ಮಂಜುನಾಥ್ ಎಸ್ . ಐ , ಸಹಾಯಕ ಕಂದಾಯ ಅಧಿಕಾರಿ , ಕೆ . ಬಿ . ನಗರ ಉಪ ವಿಭಾಗ , ಬಿಬಿಎಂಪಿ , ಬೆಂಗಳೂರು . ಇವರ ಬೆಂಗಳೂರು ನಗರದಲ್ಲಿನ ನಿವಾಸ ಮತ್ತು ಚೆನ್ನರಾಯಪಟ್ಟಣದಲ್ಲಿನ ಇವರ ಸಂಬಂಧಿಕರ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿ , ಜೆ . . ನಗರ ಉಪ ವಿಭಾಗ , ಬಿಬಿಎಂಪಿ , ಬೆಂಗಳೂರು . ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ವಿವಿಧ ತಂಡಗಳಿಂದ ಮೇಲ್ಕಂಡ ಆರೋಪಿತ ಸರ್ಕಾರಿ ನೌಕರರ ವಿರುದ್ಧ ದಾಳಿ ಮುಂದುವರೆದಿದ್ದು , ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ – ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.