ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ – ವಿಜಯಪುರ

ದಿನಾಂಕ : 19 – 3 – 2019

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ವಿಜಯಪುರ – ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ದಾನಮ್ಮದೇವಿ ಪ್ರಸಾದ ಸೇವಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮವನ್ನು ಶ್ರೀ ಸಿದ್ದೇಶ್ವರ ದೇವಸ್ಥಾನದ ಎದುರಿಗೆ ನಡೆಸಲಾಯಿತು . 5ನೇ ವರ್ಷದ ವಿಶೇಷವಾಗಿ 15 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು . ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮ . ಘ . ಚ . ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿ ಶಿವಾದೈತ ಸಿದ್ದಾಂತ ಪ್ರತಿಪಾದಿಸಿದ ಮಹಾಗುರು ಹಾಗೂ ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದವರು ಶ್ರೀ ಜಗದ್ಗುರು ರೇಣುಕಾಚಾರ್ಯರು ಎಂದರು . ಮತ್ತು ಗುರು ಶಿಷ್ಯರು ಒಂದಾಗಿ ಜಯಂತಿ ಆಚರಿಸಬೇಕೆಂದು ವೀರಶೈವ ಲಿಂಗಾಯತ ಸಮಾಜಕ್ಕೆ ಕರೆ ಕೊಟ್ಟರು . ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಪಂಚಾಕ್ಷರಿ ಹಿರೇಮಠ ಹೇಳಿದರು . ಅತಿಥಿಗಳಾದ ಗುರು ಗಚ್ಚಿನಮಠ ಇವರು ಎಲ್ಲ ಯುವಕರಿಗೆ ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಧರ್ಮದ ಜಾಗೃತಿಗಾಗಿ ಯುವಕರಿಗೆ ಸ್ಫೂರ್ತಿ ನೀಡಿದರು . ಕಾರ್ಯಕ್ರಮದ ಚಿದಾನಂದ ಹಿರೇಮಠ ವಂದಿಸಿದರು . ಸಿದ್ದರಾಮೇಶ್ವರ ಹಿರೇಮಠ ನಿರೂಪಿಸಿದರು .

ಕಾರ್ಯಕ್ರಮದಲ್ಲಿ ಬಸಯ್ಯ ಹಿರೇಮಠ , ಸಚಿನ ಮಠಪತಿ , ಸೋಮು ಅಂಗಡಿ , ಅಜಯ ಮಠಪತಿ , ಅಭಿಷೇಕ ಪಾಟೀಲ , ಅಶೋಕ ತಿಮ್ಮಶೆಟ್ಟಿ , ಅರವಿಂದ ಜಿರಲಿಮಠ , ಮಹೇಶ ಬಿದನೂರ , ದಾನಯ್ಯ ಗಚ್ಚಿನಮಠ , ಭಾಗಪ್ಪ ಕನ್ನೊಳ್ಳಿ , ಸದಾನಂದ ಹಿರೇಮಠ , ಸಚೀನ ಬೂದಿಹಾಳಮಠ , ಉಮೇಶ ಕುಂಬಾರ , ರವಿ ಗುಣಿ , ಆನಂದ ಮದಭಾವಿ , ಪ್ರಸಾದ ಯಡಹಳ್ಳಿ , ಅಪ್ಪು ಸಿಂದಗಿ , ಪ್ರೇಮಾನಂದ ಹತ್ತಿ , ಮಹೇಶ ಮಹಾಂತಮಠ , ಸದಾನಂದ ಪೂಜಾರಿ , ಮುತ್ತು ಮಹಾಲಿಂಗಪುರ , ಸೋಮಯ ತೆಗ್ಗಿನಮಠ ಹಾಗೂ ಜಗದ್ಗುರು ಪಂಚಾಚಾರ್ಯ ಸಹಕಾರಿ ಪತ್ತಿನ ಬ್ಯಾಂಕಿನ ಸಿಬ್ಬಂದಿ ಶ್ರೀ ಪವಾಡ ಬಸವೇಶ್ವರ ಸೇವಾ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತ ಸಮೂಹ ಉಪಸ್ಥಿತರಿದ್ದರು .

-ಅಶೋಕ ತಿಮ್ಮಶೆಟ್ಟಿ

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.