“ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು ” ಎಂಬ ವಿಚಾರ ಸಂಕಿರಣ

ಛಲವಾದಿ ಸಮುದಾಯವು ರಾಜ್ಯದಲ್ಲಿ ಸುಮಾರು 45 ರಿಂದ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು , ಸ್ವಾತಂತ್ರ್ಯ ಬಂದಾಗಿನಿಂದ ಇದುವರೆವಿಗೂ ಛಲವಾದಿ ಸಮುದಾಯಕ್ಕೆ ಲೋಕಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಮಾತ್ರ ನೀಡುತ್ತಾ ಬಂದಿದ್ದೀರಿ , ಅಧಿಕ ಸಂಖ್ಯೆ ಮತದಾರರನ್ನು ಹೊಂದಿರುವ ಸಮುದಾಯಕ್ಕೆ ಕನಿಷ್ಟ 4 ಸ್ಥಾನಗಳನ್ನಾದರೂ ಬಿಟ್ಟುಕೊಡಬೇಕೆಂದು ಈ ಮೂಲಕ ಒತ್ತಾಯ . ಈ ಸಮುದಾಯವು ಸ್ವಾತಂತ್ರ್ಯ ಬಂದಾಗಿನಿಂದಲೂ ಸುಮಾರು ಪ್ರತಿಶತ 80 ರಿಂದ 90 ರಷ್ಟು ಭಾಗ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿರುತ್ತಾರೆ . ಆದರೂ ಕೂಡ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ದೊರಕಿರುವುದಿಲ್ಲ . ಸಮುದಾಯದ ಪ್ರಶ್ನಾತೀತ ನಾಯಕರು , ಮಾಜಿ ಮಂತ್ರಿಗಳಾದ ಡಾ . ಹೆಚ್ . ಸಿ . ಮಹದೇವಪರವರ ನೇತೃತ್ವದಲ್ಲಿ ಕುಂಟಿತಗೊಂಡಿದ್ದ ಸಂಘಟನೆಯನ್ನು ಚುರುಕುಗೊಳಿಸಿ ಇಡೀ ರಾಜ್ಯದಾದ್ಯಂತ ಪ್ರವಾಸ ಮಾಡಿ , ಸಂಘಟನೆಯನ್ನು ಬಲಿಷ್ಟಗೊಳಿಸಿ ‘ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು ‘ ಎಂಬ ವಿಚಾರ ಸಂಕಿರಣವನ್ನು ದಿನಾಂಕ : 04 . 03 . 2019 ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿತ್ತು , ರಾಜ್ಯದ ಎಲ್ಲಾ ಮುಖಂಡರನ್ನು ಆಹ್ವಾನಿಸಿ ಕೋಮುವಾದ ಮತ್ತು ಮೂಲಭೂತವಾದವನ್ನು ನಿರ್ಮೂಲನೆ ಮಾಡಬೇಕು ಮತ್ತು ಅಪಾಯದ ಅಂಚಿನಲ್ಲಿರುವ ಸಂವಿಧಾನವನ್ನು ರಕ್ಷಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕು ಹಾಗಾಗಿ ಮತದಾರರು ಜಾಗರೂಕತೆಯಿಂದ ಮತ ನೀಡಬೇಕು ಎಂದು ಕರೆ ಕೊಟ್ಟಿರುತ್ತಾರೆ . ಅದರಂತೆ ಕೋಲಾರದಲ್ಲಿ ಸಮುದಾಯದವರು 4 . 5 ಲಕ್ಷಕ್ಕಿಂತ ಅಧಿಕ ಸಂಖ್ಯೆಯ ಮತದಾರರಿದ್ದಾರೆ . ಬಿಜಾಪುರದಲ್ಲಿ 3 . 5 ಲಕ್ಷಕ್ಕೂ ಅಧಿಕ ಸಮುದಾಯದ ಮತದಾರರಿದ್ದಾರೆ . ಆದ್ದರಿಂದ ಈ ಎರಡೂ ಸ್ಥಾನಗಳನ್ನು ಸಮುದಾಯದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿರುವವರಿಗೆ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಂದ ಟಿಕೇಟ್ ನೀಡಬೇಕೆಂದು ಛಲವಾದಿ ಮಹಾಸಭಾ ಈ ಮೂಲಕ ಒತ್ತಾಯಿಸುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.