ಎಸಿಬಿಯಿಂದ ಭ್ರಷ್ಟಾಚಾರ ಆರೋಪಿತ 04 ಅಧಿಕಾರಿಗಳ ವಿರುದ್ಧ ದಾಳಿ ಎಸಿಬಿ ಬೆಂಗಳೂರು ನಗರದ ವಿಭಾಗ & ಉತ್ತರ ವಲಯದ ತಂಡಗಳಿಂದ 10 ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ

ದಿನಾಂಕ : 19 . 03 . 2019 ರಂದು ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಯದ 4 ವಿವಿಧ ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಿಗಿಂತ ಅಸಮತೋಲನ ಆಸ್ತಿ – ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 10 ಸ್ಥಳಗಳ ಮೇಲೆ ದಾಳಿ ನಡೆಸಿರುತ್ತದೆ . ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಈವರೆಗೆ ಪತ್ತೆಯಾದ ಆರೋಪಿತ ಸರ್ಕಾರಿ ನೌಕರರ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತಿರುತ್ತವೆ .

1 . ಶ್ರೀ . ಸತೀಶ್ ಐ . ಸಿ , ಸಹಕಾರ ಸಂಘಗಳ ಅಪರ ನಿಬಂಧಕರು , ಸಹಕಾರ ಇಲಾಖೆ , ಕೇಂದ್ರ ಕಛೇರಿ , ಅಅ ಅಸ್ತರ್‌ ರಸ್ತೆ , ಬೆಂಗಳೂರು . ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 1 ಮನೆ , 2 ನಿವೇಶನ , ಚಿನ್ನ 1 ಕೆಜಿ , ಬೆಳ್ಳಿ 20 ಕೆಜಿ 900 ಗ್ರಾಂ , 1 ಕಾರ್ , 1 ದ್ವಿಚಕ್ರ ವಾಹನ , ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ 1 3 . 84 ಲಕ್ಷ , 1 34 . 16 ಲಕ್ಷ ಗೃಹೋಪಯೋಗಿ ವಸ್ತುಗಳು ಹಾಗೂ ಇನ್ನು ಪರಿಶೀಲಿಸಬೇಕಾಗಿರುವ 1 ಲಾಕರ್ ಪತ್ತೆಯಾಗಿರುತ್ತದೆ .

2 ಶ್ರೀ . ಶರದ್ ಗಂಗಪ್ಪ ಇಜ್ರ , ಉಪ ನಿರ್ದೇಶಕರು , ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ , ವಿಜಯಪುರ ( ಕೆ . ಆರ್ . ಐ . ಡಿ . ಎಲ್ ) ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ , 1 ಫ್ಲಾಟ್ , ವಿವಿಧ ಸರ್ವೆ ನಂಬರ್‌ಗಳಲ್ಲಿ 32 ಎಕರೆ 24 ಗುಂಟೆ ಕೃಷಿ ಜಮೀನು , ಚಿನ್ನ 675 ಗ್ರಾಂ , ಬೆಳ್ಳಿ 12 . 5 ಕೆಜಿ , 3 ಕಾರ್ , 3 ದ್ವಿಚಕ್ರ ವಾಹನಗಳು , 7 42 . 66 ಲಕ್ಷ ನಗದು ಹಾಗೂ ಬ್ಯಾಂಕ್ ಖಾತೆಯಲ್ಲಿ 1 3 . 97 ಲಕ್ಷ , ಠೇವಣಿಗಳು 1 2 . 6 ಲಕ್ಷ ಹಾಗೂ 6 . 37 ಲಕ್ಷ ಮೊತ್ತದ ವಿಮೆ ಪಾಲಿಸಿಗಳು ಹಾಗೂ 1 ಲಾಕರ್ ಕಂಡು ಬಂದಿರುತ್ತದೆ .

3 . ಶ್ರೀ . ಪ್ರಕಾಶ್ ಗೌಡ ಕುದರಿಮೋಟ , ಕೃಷಿ ಅಧಿಕಾರಿ , ರೈತ ಸಂಪರ್ಕ ಕೇಂದ್ರ ಮುಂಡರಗಿ , ಗದಗ ಜಿಲ್ಲೆ . ತಮ್ಮ ಹೆಸರಿನಲ್ಲಿ ಮುಂಡರಗಿಯಲ್ಲಿ 2 ಮನೆ , 3 ನಿವೇಶನ , ಕುಕನೂರಿನಲ್ಲಿ 5 ಎಕರೆ ಮತ್ತು ಹರಲಾಪುರದಲ್ಲಿ 4 . 29 ಎಕರೆ ಮತ್ತು ಹಳ್ಳಿಗುಡ್ಡಿ ಗ್ರಾಮದಲ್ಲಿ 7 . 31 ಕೃಷಿ ಜಮೀನು , ಚಿನ್ನ 570 ಗ್ರಾಂ , ಬೆಳ್ಳಿ 2 ಕೆಜಿ 290 ಗ್ರಾಂ , 1 ಕಾರ್ . 2 ದ್ವಿಚಕ್ರ ವಾಹನ ಕಂಡು ಬಂದಿರುತ್ತದೆ .

4 . ಶ್ರೀ . ಮಂಜುನಾಥ್ ಎಸ್ . ಐ , ಸಹಾಯಕ ಕಂದಾಯ ಅಧಿಕಾರಿ , ಜೆ . ಬಿ . ನಗರ ಉಪ ವಿಭಾಗ , ಬಿಬಿಎಂಪಿ , ಬೆಂಗಳೂರು . ತಮ್ಮ ಮತ್ತು ಕುಟುಂಬಸ್ಥರ ಹೆಸರಿನಲ್ಲಿ 2 ಮನೆ , 4 ನಿವೇಶನ , ಚನ್ನರಾಯಪಟ್ಟಣದ ಬಿ . ಎಂ ರಸ್ತೆಯಲ್ಲಿ 1 ಮನೆಯೊಂದಿಗೆ ವಾಣಿಜ್ಯ ಸಂಕೀರ್ಣ , ಹಾಸನದಲ್ಲಿ 13 ಗುಂಟೆ ಜಮೀನು , ಚಿನ್ನ 453 ಗ್ರಾಂ , ಬೆಳ್ಳಿ 1 ಕೆಜಿ 230 ಗ್ರಾಂ , 1 ಕಾರ್ , 1 ದ್ವಿಚಕ್ರ ವಾಹನ , ನಗದು { 4 . 26 ಲಕ್ಷ ಮತ್ತು { 19 ಲಕ್ಷ ಗೃಹೋಪಯೋಗಿ ವಸ್ತುಗಳು , 2 ಲಾಕರ್‌ಗಳು ಪತ್ತೆಯಾಗಿರುತ್ತದೆ . ಸದರಿ ಸರ್ಕಾರಿ ನೌಕರರು ಹೊಂದಿರುವ ಆಸ್ತಿ – ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ಈಗಾಗಲೇ ದೊರೆತಿರುವ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.