ಡಿ – ಪಾರ್ಮ್‌ ಕೋರ್ಸಿಗೆ ಸೀಟ್ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡುತಿದ ಆರೋಪಿಯ ಬಂಧನ

ಡಿ – ಪಾರ್ಮ್‌ ಕೋರ್ಸಿಗೆ ಸೀಟ್ ಕೊಡಿಸುವುದಾಗಿ ಹಣ ಪಡೆದು ಮೋಸ ಮಾಡುತಿದ ಆರೋಪಿಯ ಬಂಧನ , ಪಿರಾದುದಾರರಾದ ಶ್ರೀ ಸೈಯ್ಯದ್ ಎಸ್ತಕಿ , ಇರಾನ್ ದೇಶ ರವರು ದಿನಾಂಕ 10 – 12 – 2018 ರಂದು ಸಂಜಯನಗರ ಪೊಲೀಸ್ ಠಾಣೆಗೆ ಹಾಜರಾಗಿ ಸೈಯ್ಯದ್ ಮಹಮ್ಮದ್ ಹುಸೈನಿ , 56 ವರ್ಷ ಎಂಬುವವರು ಭೂಪಸಂದ್ರ , ಆರ್‌ ಎಂವಿ 2ನೇ ಹಂತ , ವಿನಾಯಕ ಲೇಔಟ್‌ನಲ್ಲಿ BAQIR EXIM ಎಂಬ ಮೆಡಿಕಲ್ ಸೀಟ್ ಕನ್ಸಲ್ಟೆಂಟ್ ಕಚೇರಿಯನ್ನು ಇಟ್ಟುಕೊಂಡಿದ್ದು , 2018 – ಫೆಬ್ರವರಿಯಲ್ಲಿ ಆಂಧ್ರ ಪ್ರದೇಶದ ವೈಜಾಕ್‌ನಲ್ಲಿರುವ ಶ್ರೀನಿವಾಸ ರಾವ್ ಕಾಲೇಜ್ ಆಫ್ ಪಾರ್ಮಸಿ ಕಾಲೇಜಿನಲ್ಲಿ ಡಿ – ಫಾರ್ಮ್ ಕೋರ್ಸಿಗೆ ಸೀಟ್ ಕೊಡಿಸುವುದಾಗಿ ನಂಬಿಸಿ ಪಿರಾದುದಾರರಿಂದ 8 . 5 ಲಕ್ಷ ರೂ ಹಣವನ್ನು ಪಡೆದುಕೊಂಡು ಡಿ – ಫಾರ್ಮ್ ಕೋರ್ಸಿಗೆ ಸೀಟ್ ಕೊಡಿಸದೆ , ಹಣವನ್ನು ವಾಪಸ್ ನೀಡದೆ ಮೋಸ ಮಾಡಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದ ಆರೋಪಿಯಾದ ಸೈಯ್ಯದ್ ಮಹಮ್ಮದ್ ಹುಸೈನಿ , 56 ವರ್ಷ , ಬಾಗಲೂರು , ಬೆಂಗಳೂರು ಗ್ರಾಮಾಂತರ ಜಿಲ್ಲೆ . ಸ್ವಂತ ವಿಳಾಸ ವಿಜಯನಗರ , ಮೈಸೂರು ಎಂಬುವನನ್ನು ದಸ್ತಗಿರಿ ಮಾಡಲಾಗಿದೆ . ಸದರಿ ಆರೋಪಿಯು ಈ ರೀತಿ ಡಿ – ಫಾರ್ಮ್ ಕೋರ್ಸಿಗೆ ಸೀಟ್ ಕೊಡಿಸುವುದಾಗಿ ಸಾರ್ವಜನಿಕರಿಗೆ ಮೋಸ ಮಾಡಿದ್ದ ದೂರುಗಳಿದ್ದರೆ ಸಂಜಯನಗರ ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಲಾಗಿದೆ . ಈ ಪ್ರಕರಣದಲ್ಲಿ ಶ್ರೀ . ಎಂ . ಶಿವಶಂಕರ್ , ಎಸಿಪಿ , ಜೆ . ಸಿ . ನಗರ ವಿಭಾಗ ರವರ ನೇತೃತ್ವದಲ್ಲಿ ಸಂಜಯನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಶ್ರೀ ಎನ್ . ಗೋಪಾಲ ನಾಯಕ್ ಮತ್ತು ಕು ರೂಪ ಕೆ . ಎಸ್ . ಮ . ಪಿ . ಎಸ್ . ಐ . ಶ್ರೀ ಮೇಸ್ತಿನಾಯಕ್ , ಕೆ . ಆರ್ . ಪಿ . ಎಸ್ . ಐ ಹಾಗೂ ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.