ಶ್ರೀ ರಮೇಶ್ ಮಂಜುನಾಥ ವರ್ಣೇಕರ್ , ಪ್ರಭಾರ ಉಪ ಸಾರಿಗೆ ಆಯುಕ್ತರು , ಪ್ರಾದೇಶಿಕ ಸಾರಿಗೆ ಕಛೇರಿ , ಉಡುಪಿ, ಅವರ ಕುಟುಂಬದವರು ವಾಸವಿರುವ ಮಂಗಳೂರಿನಲ್ಲಿರುವ ವಾಸ್ತವ್ಯದ ಮನೆ ಆಪಾದಿತರ ಕಚೇರಿ , ಕಾರವಾರದಲ್ಲಿರುವ ಆಪಾದಿತರ ಮೂಲ ಮನೆಗಳ ಮೇಲೆ ದಾಳಿ ನಡೆಸಲಾಗಿರುತ್ತದೆ

ದಿನಾಂಕ : 22 . 03 . 2019

ದಿನಾಂಕ : 20 . 03 . 2019 ರಂದು ಶ್ರೀ ರಮೇಶ್ ಮಂಜುನಾಥ ವರ್ಣೇಕರ್ , ಪ್ರಭಾರ ಉಪ ಸಾರಿಗೆ ಆಯುಕ್ತರು , ಪ್ರಾದೇಶಿಕ ಸಾರಿಗೆ ಕಛೇರಿ , ಉಡುಪಿ ಎಂಬುವವರು ತಮ್ಮ ಬಲ್ಲ ಮೂಲಗಳಿಂದ ಅಸಮತೋಲನ ಆಸ್ತಿ ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ ಅವರ ಕುಟುಂಬದವರು ವಾಸವಿರುವ ಮಂಗಳೂರಿನಲ್ಲಿರುವ ವಾಸ್ತವ್ಯದ ಮನೆ ಆಪಾದಿತರ ಕಚೇರಿ , ಕಾರವಾರದಲ್ಲಿರುವ ಆಪಾದಿತರ ಮೂಲ ಮನೆಗಳ ಮೇಲೆ ದಾಳಿ ನಡೆಸಲಾಗಿರುತ್ತದೆ . ಶೋಧನಾ ಕಾರ್ಯವು ಮುಂದುವರೆದಿದ್ದು ಈವರೆಗೆ ಶೋಧನೆ ನಡೆಸಲಾದ ಸ್ಥಳಗಳಲ್ಲಿ ತನಿಖೆಯಲ್ಲಿ ಪತ್ತೆಯಾದ ಆರೋಪಿತ ಸರ್ಕಾರಿ ನೌಕರನ ಚರ ಮತ್ತು ಸ್ಥಿರ ಆಸ್ತಿಗಳ ವಿವರ ಈ ಕೆಳಕಂಡಂತಿರುತ್ತವೆ . ಮಂಗಳೂರಿನಲ್ಲಿ 1 ಮನೆ & ವಿವಿಧ ಸರ್ವೆ ನಂಬರಗಳಲ್ಲಿ 9 ನಿವೇಶನ , ( ಒಟ್ಟು 1 ಎಕರೆ 95 ಸೆಂಟ್ಸ್ ಜಮೀನು ) ಪುತ್ತೂರಿನಲ್ಲಿ 1 ಮನೆ , 2 ನಿವೇಶನ , ಬೆಂಗಳೂರಿನಲ್ಲಿ 3 ನಿವೇಶನ , ಮೈಸೂರಿನಲ್ಲಿ 1 ಮನೆ , 1 ನಿವೇಶನ ಹಾಗೂ 26 ಗುಂಟೆ ಜಮೀನು , ಬೆಳಗಾವಿಯಲ್ಲಿ 2 ಪ್ಲಾಟ್ ಹಾಗೂ 8 ಗುಂಟೆ ಜಮೀನು , ಚಿನ್ನ 30 ಗ್ರಾಂ , ಬೆಳ್ಳಿ 1 ಕೆಜಿ , 2 ಕಾರ್ , 3 ದ್ವಿಚಕ್ರ ವಾಹನ , ( 50 ಲಕ್ಷ ರೇವಣೆಗಳು ಮತ್ತು ಕ 22 . 80 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡು ಬಂದಿರುತ್ತದೆ . ತನಿಖೆ ಮುಂದುವರೆದಿದ್ದು , ಆರೋಪಿತ ಸರ್ಕಾರಿ ನೌಕರನು ಹೊಂದಿರುವ 2 ಬ್ಯಾಂಕ್ ಲಾಕರ್‌ಗಳು , ಆಸ್ತಿ – ಪಾಸ್ತಿಗಳ ಮೂಲದ ಬಗ್ಗೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಹಾಗೂ ಸಂಬಂಧಪಟ್ಟ ಇನ್ನು ಹೆಚ್ಚಿನ ಸ್ಥಳಗಳ ಮಾಹಿತಿ ಸಂಗ್ರಹಣೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.