ಕೃಷಿ ವಿಶ್ವವಿದ್ಯಾನಿಲಯ , ಬೆಂಗಳೂರು, “ಕೃಷಿ ವಿಶ್ವವಿದ್ಯಾನಿಲಯದ 53ನೇ ಘಟಿಕೋತ್ಸವ ಸಮಾರಂಭವನ್ನು ಮಾರ್ಚ್ 25 , 2019ನೇ  ಸೋಮವಾರ ಬೆಳಿಗ್ಗೆ 11 . 00 ಘಂಟೆಗೆ ಜಿ . ಕೆ . ವಿ . ಕೆ . ಆವರಣದ ಡಾ . ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ”

ಕೃಷಿ ವಿಶ್ವವಿದ್ಯಾನಿಲಯ , ಬೆಂಗಳೂರು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ 53ನೇ ಘಟಿಕೋತ್ಸವ ಸಮಾರಂಭವನ್ನು ಮಾರ್ಚ್ 25 , 2019ನೇ ಸೋಮವಾರ ಬೆಳಿಗ್ಗೆ 11 . 00 ಘಂಟೆಗೆ ಜಿ . ಕೆ . ವಿ . ಕೆ . ಆವರಣದ ಡಾ . ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ . ಈ ಸಮಾರಂಭದಲ್ಲಿ ಪ್ರೊ ಬಲದೇವ್ ಸಿಂಗ್ ದಿಲ್ಲಾನ್ , ಪದ್ಮಶ್ರೀ ಪುರಸ್ಕೃತರು ಮತ್ತು ಕುಲಪತಿಗಳು , ಪಂಜಾಬ್ ಕೃಷಿ ವಿಶ್ವವಿದ್ಯಾನಿಲಯ , ಲೂಧಿಯಾನ , ಪಂಜಾಬ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ . ಕರ್ನಾಟಕ ರಾಜ್ಯದ ಸನ್ಮಾನ್ಯ ರಾಜ್ಯಪಾಲರಾದ ಶ್ರೀ . ವಜುಭಾಯಿ ವಾಲ ರವರು ಉಪಸ್ಥಿತರಿದ್ದು ಅಭ್ಯರ್ಥಿಗಳಿಗೆ ಪದವಿ ಹಾಗೂ ಚಿನ್ನದ ಪದಕಗಳನ್ನು ಪ್ರಧಾನ ಮಾಡಲಿದ್ದಾರೆ .

ಶೈಕ್ಷಣಿಕ ವರ್ಷ – 2017 – 18ರಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಈ 53ನೇ ಘಟಿಕೋತ್ಸವದಲ್ಲಿ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ವಿಷಯಗಳಲ್ಲಿ ಪದವಿ ಪ್ರಧಾನ ಮಾಡಲಾಗುತ್ತಿದೆ . ಒಟ್ಟು 661 ವಿದ್ಯಾರ್ಥಿಗಳು ವಿವಿಧ ಸ್ನಾತಕ ಪದವಿಗಳನ್ನು , 309 ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹಾಗೂ 72 ವಿದ್ಯಾರ್ಥಿಗಳು ಡಾಕ್ಟೋರಲ್ ಪದವಿಗಳನ್ನು ಪಡೆಯಲಿದ್ದಾರೆ . ಒಟ್ಟಾರೆ 1042 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರಧಾನ ಮಾಡಲಾಗುತ್ತಿದ . ಇದೇ ಸಮಾರಂಭದಂದು ಡಾಕ್ಟರ್ ಆಫ್ ಫಿಲಾಸೋಪಿ ಪದವಿಯಲ್ಲಿ ಒಟ್ಟು 08 ವಿದ್ಯಾರ್ಥಿನಿಯರು ಹಾಗೂ 06 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯದ 12 ಚಿನ್ನದ ಪದಕಗಳನ್ನು , 08 ದಾನಿಗಳ ಚಿನ್ನದ ಪದಕಗಳು ಹಾಗೂ 04 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ . ಮಾಸ್ಟರ್ ಪದವಿಯಲ್ಲಿ 21 ವಿದ್ಯಾರ್ಥಿನಿಯರು ಹಾಗೂ 08 ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾನಿಲಯ ವೀಡುವ 20 ಚಿನ್ನದ ಪದಕಗಳು ಹಾಗೂ 04 ಆವರಣದ ಚಿನ್ನದ ಪದಕಗಳನ್ನು , 33 ದಾನಿಗಳ ಚಿನ್ನದ ಪದಕಗಳು ಹಾಗೂ 08 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ಹಂಚಿಕೊಂಡಿರುತ್ತಾರೆ . ಇದಲ್ಲದೆ , ಸ್ನಾತಕ ಪದವಿಯಲ್ಲಿ ಒಟ್ಟು 51 ಚಿನ್ನದ ಪದಕಗಳನ್ನು ಪ್ರಧಾನ ಮಾಡಲಿದ್ದು , ಒಟ್ಟು 11 ವಿದ್ಯಾರ್ಥಿನಿಯರು ಹಾಗೂ 07 ವಿದ್ಯಾರ್ಥಿಗಳು ಹಂಚಿಕೊಳ್ಳಲಿದ್ದಾರೆ , ಈ 51 ಚಿನ್ನದ ಪದಕಗಳಲ್ಲಿ ಕೃಷಿ ವಿಶ್ವವಿದ್ಯಾನಿಲಯ ನೀಡುವ 17 ಚಿನ್ನದ ಪದಕಗಳು , 03 ಆವರಣದ ಚಿನ್ನದ ಪದಕಗಳು , 33 ದಾನಿಗಳ ಚಿನ್ನದ ಪದಕಗಳು , ಹಾಗೂ 08 ದಾನಿಗಳ ಚಿನ್ನದ ಪದಕ ಪ್ರಶಸ್ತಿ ಪ್ರಮಾಣ ಪತ್ರಗಳು ಸೇರಿವೆ . ಒಟ್ಟಾರೆ ಈ 53 ನೇ ಘಟಿಕೋತ್ಸವ ಸಮಾರಂಭದಲ್ಲಿ 40 ವಿಧ್ಯಾರ್ಥಿನಿಯರು 81 ಚಿನ್ನದ ಪದಕಗಳನ್ನು ಹಾಗೂ 21 ವಿಧ್ಯಾರ್ಥಿಗಳು 39 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ .

2018 – 19ರ ಸಾಲಿನಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಾಧನೆಯ ಮುಖ್ಯಾಂಶಗಳು :

* ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ಸೇರಿದ ಒಟ್ಟು ಐದು ಜೋಡನಾ ಆವರಣಗಳಲ್ಲಿ ( ಬೆಂಗಳೂರು , ಮಂಡ್ಯ ಹಾಸನ ಚಿಂತಾಮಣಿ ಮತ್ತು ಚಾಮರಾಜನಗರ ) ಆರು ಸಾತಕ ಪದವಿ ಕಾರ್ಯಕ್ರಮಗಳನ್ನು . 22 ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ 15 ವಿಷಯಗಳಲ್ಲಿ ಡಾಕೋರಲ್ ಪದವಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ .

* 2018 – 19ನೇ ಸಾಲಿನಲ್ಲಿ ಒಟ್ಟು 926 ವಿದ್ಯಾರ್ಥಿಗಳು ಸ್ನಾತಕ ಪದವಿಗಳಿಗೆ , 206 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಳಿಗೆ ಹಾಗೂ 117 ವಿದ್ಯಾರ್ಥಿಗಳು ಡಾಕ್ಟೋರಲ್ ಪದವಿಗಳಿಗೆ ಪ್ರವೇಶ ಪಡೆದಿರುತ್ತಾರೆ .

* ಇದಲ್ಲದೆ , 2018 – 19 ಶೈಕ್ಷಣಿಕ ಸಾಲಿನಲ್ಲಿ ಒಟ್ಟು 48 ವಿದ್ಯಾರ್ಥಿಗಳು ಮಂಡ್ಯ ಆವರಣದಲ್ಲಿ ಎರಡು ವರ್ಷಗಳ ಡಿಪ್ಲೊಮಾ ( ಕೃಷಿ ) ಕಾರ್ಯಕ್ರಮದಡಿಯಲ್ಲಿ ಸೇರ್ಪಡೆಯಾಗಿದ್ದಾರೆ .

ವಿದ್ಯಾರ್ಥಿವೇತನಗಳು

– ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಸ್ನಾತಕ ಪದವಿ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 74 ವಿದ್ಯಾರ್ಥಿಗಳಿಗೆ ರೆಸಿಡೆಂಟ್ ಮೆರಿಟ್ ವಿದ್ಯಾರ್ಥಿವೇತನ , 371 ವಿದ್ಯಾರ್ಥಿಗಳಿಗೆ ಸಾಮಾನ್ಯ ಅರ್ಹತಾ ವಿದ್ಯಾರ್ಥಿವೇತನಗಳನ್ನು ಹಾಗೂ 07 ವಿದ್ಯಾರ್ಥಿಗಳಿಗೆ ದಾನಿಗಳು ಕೊಡಮಾಡುವ ವಿದ್ಯಾರ್ಥಿವೇತನಗಳನ್ನು ನೀಡಿದೆ .

– ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 60 ವಿದ್ಯಾರ್ಥಿಗಳಿಗೆ ಕೃಷಿ ವಿಶ್ವವಿದ್ಯಾಲಯದ ಸ್ಥಾನಿಕ ಅರ್ಹತಾ ವಿದ್ಯಾರ್ಥಿವೇತನಗಳನ್ನು ಹಾಗೂ 06 ವಿದ್ಯಾರ್ಥಿಗಳಿಗೆ ದಾನಿಗಳು ಕೊಡುವ ಶಿಷ್ಯವೇತನಗಳನ್ನು ನೀಡಿದೆ .

– ಅದೇ ರೀತಿ ಮಂಡ್ಯ ಕೃಷಿ ಕಾಲೇಜಿನ ಆವರಣದಲ್ಲಿ ಒಟ್ಟು 10 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದ ಸ್ಥಾನಿಕ ಅರ್ಹತಾ ವಿದ್ಯಾರ್ಥಿವೇತನವನ್ನು ನೀಡಲಾಗಿದೆ .

– ಜಿ . ಕೆ . ವಿ . ಕೆ . ಆವರಣದಲ್ಲಿ ಒಟ್ಟು 22 ಪಿಎಚ್ . ಡಿ . ಪದವಿ ವಿದ್ಯಾರ್ಥಿಗಳಿಗೆ ಕೃಷಿ ವಿಶ್ವವಿದ್ಯಾಲಯದ ಸ್ಥಾನಿಕ ಆರ್ಹತಾ ವಿದ್ಯಾರ್ಥಿ ವೇತನವನ್ನು ನೀಡಲಾಗಿದೆ .

– ಪ್ರಸ್ತುತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಹಾಗೂ ಇತರ ಸಹಯೋಗ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 20 ಶಿಕ್ಷಕರು / ವಿಜ್ಞಾನಿಗಳನ್ನು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿ ಶಿಕ್ಷಕರೆಂದು ಗುರುತಿಸಲಾಗಿದೆ .

ಕೃಷಿ ವಿಶ್ವವಿದ್ಯಾನಿಲಯದ ಸಾಧನೆಗಳು : > ಕ ವಿಜ್ಞಾನದಡಿಯಲ್ಲಿ ಅಖಿಲ ಭಾರತ ಕೃಷಿ ಅನುಸಂಧಾನ ಪರಿಷತ್ ನಡೆಸುವ JRF ಪರೀಕ್ಷೆ 2017 – 18ರಲ್ಲಿ | ಒಟ್ಟು 56 ವಿದ್ಯಾರ್ಥಿಗಳು ಸ್ನಾತಕೋತ್ತರ ವಿದ್ಯಾರ್ಥಿ ವೇತನವನ್ನು ಪಡೆದು ಪ್ರಥಮ ಸ್ಥಾನದಲ್ಲಿರುತ್ತಾರೆ .

> ಇದಲ್ಲದೆ , ಇಂಜಿನೀಯರಿಂಗ್ ಮತ್ತು ತಂತ್ರಜ್ಞಾನ ವಿಭಾಗದಲ್ಲಿ , 07 ವಿದ್ಯಾರ್ಥಿಗಳು JRF ವಿದ್ಯಾರ್ಥಿವೇತನವನ್ನು ತಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ .

>ಜನವರಿ 30 ಮತ್ತು 31ರಂದು ಹೊಸದಿಲ್ಲಿಯಲ್ಲಿ ನಡೆಸಿದ ಕುಲಪತಿಗಳ ವಾರ್ಷಕ ಸಮ್ಮೇಳನದಲ್ಲಿ ಗೌರವಾನಿತ ವ್ಯವಸಾಯ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ರಾಧಾ ಮೋಹನ್ ಸಿಂಗ್ ಅವರು ಈ ಮೇಲಿನ ಪ್ರಶಸ್ತಿಗಳನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯಕ್ಕೆ ನೀಡಿ ಗೌರಿವಿಸಿರುತ್ತಾರೆ ,

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿಗಳು ಈ ಗಮನಾರ್ಹ ಸಾಧನೆಗಳಿಗಾಗಿ ಎಲ್ಲಾ ಅಧಿಕಾರಿಗಳು , ಶಿಕ್ಷಕರು , ಸಿಬ್ಬಂದಿ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ.

— ಕುಲಪತಿಗಳು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.