ಬೆಂಗಳೂರಿನಲ್ಲಿ ಕೃತಿ ಖರಬಂದ ಅವರಿಂದ ಅಶ್ಯೂರ್ ಕ್ಲಿನಿಕ್ ಉದ್ಘಾಟನೆ

ಬೆಂಗಳೂರು , ಮಾರ್ಚ್ ೨೦೧೮ : ಡಾ . ಅಭಿಷೇಕ್ ಪಿಳನಿ ಮತ್ತು ಡಾ . ಪ್ರಿಯಾಂಕ ದೇಸಾಯಿ ಪಿಳನಿ ಅವರು ಅತ್ಯುತ್ತಮವಾದ ಕೂದಲು , ಚರ್ಮ ಮತ್ತು ದೇಹದ ಆರೋಗ್ಯ ರಕ್ಷಣೆ ವಿಧಾನಗಳನ್ನು ನೀಡುವ ಅಶ್ಯೂರ್ ಕ್ಲಿನಿಕ್‌ನ ಸಂಸ್ಥಾಪಕರಾಗಿದ್ದಾರೆ . ಮುಂಬೈ , ಸೂರತ್ ಮತ್ತು ರಾಂರುರದಲ್ಲಿ ಯಶಸ್ವಿಯಾಗಿ ಐದು ಕ್ಲಿನಿಕ್‌ಗಳನ್ನು ಆರಂಭಿಸಿ ಜನಪ್ರಿಯಗೊಳಿಸಿದ ನಂತರ ಇದೀಗ ಬೆಂಗಳೂರಿನಲ್ಲಿ ಭಾನುವಾರ ಮತ್ತೊಂದು ಹೊಸ ಕ್ಲಿನಿಕ್ ಅನ್ನು ಆರಂಭಿಸಿದರು .

ಈ ಕ್ಲಿನಿಕ್ ಬೆಂಗಳೂರಿನ ಇಂದಿರಾನಗರದ ಎಚ್ ಎಎಲ್ ೨ ನೇ ಹಂತದ ೮೦ ಅಡಿ ರಸ್ತೆಯಲ್ಲಿನ ಸಂಖ್ಯೆ ೩೦೪೯ ರಲ್ಲಿ ಆರಂಭವಾಗಿದೆ . ಈ ಕ್ಲಿನಿಕ್ ಅನ್ನು ಬಾಲಿವುಡ್ ನಟಿ ಕೃತಿ ಖರಬಂದ ಅವರು ಉದ್ಘಾಟಿಸಿದರು . ಕ್ಲಿನಿಕ್ ಅನ್ನು ಉದ್ಘಾಟನೆ ಮಾಡಿ ಮಾತನಾಡಿದ ಕೃತಿ ಖರಬಂದ ಅವರು , ‘ ‘ ಬೆಂಗಳೂರಿನಲ್ಲಿ ನಾನು ಅಶ್ಯೂರ್ ಕ್ಲಿನಿಕ್ ಅನ್ನು ಉದ್ಘಾಟನೆ ಮಾಡಿರುವುದಕ್ಕೆ ಸಂತಸವೆನಿಸುತ್ತಿದೆ . ನಗರದಿಂದ ನಗರಕ್ಕೆ ಈ ಜೀವನಶೈಲಿ ಕ್ಲಿನಿಕ್ ಬೆಳೆಯುತ್ತಿರುವುದನ್ನು ಕಾಣುತ್ತಿರುವುದಕ್ಕೆ ಸಂತೋಷವಾಗುತ್ತಿದೆ . ಅಶ್ಯೂರ್ ಕ್ಲಿನಿಕ್ ಭಾರತದಲ್ಲಿ ಅತ್ಯುತ್ತಮವಾದ ರೀತಿಯಲ್ಲಿ ಚರ್ಮದ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡುತ್ತದೆ ಮತ್ತು ಕೂದಲು ಕಸಿ ವಿಧಾನಗಳನ್ನು ನೀಡುತ್ತಿದೆ . ಇಲ್ಲಿರುವ ಸಿಬ್ಬಂದಿಯು ವೃತ್ತಿಪರರಾಗಿದ್ದಾರೆ ಮತ್ತು ಅತ್ಯುತ್ತಮವಾದ ರೀತಿಯಲ್ಲಿ ವಿದ್ಯಾರ್ಹತೆಯುಳ್ಳ ವೈದ್ಯರಿದ್ದಾರೆ . ಈ ವೈದ್ಯರ ತಂಡಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತಿದ್ದೇನೆ ” ಎಂದು ತಿಳಿಸಿದರು . ಕ್ಲಿನಿಕ್‌ಗೆ ಬರುವ ಪ್ರತಿಯೊಬ್ಬರಿಗೂ ವ್ಯಕ್ತಿಗತವಾದ ಆದ್ಯತೆ ಮತ್ತು ಆರೈಕೆಯನ್ನು ಅರ್ಹ ವೈದ್ಯಕೀಯ ವೃತ್ತಿಪರರಿಂದ ನೀಡುವ ತತ್ತ್ವವನ್ನು ಅಶ್ಯೂರ್ ಕ್ಕ್ಲಿನಿಕ್ ಹೊಂದಿದೆ . ಈ ಮೂಲಕ ಚಿಕಿತ್ಸೆ ಪಡೆಯುವ ಆಕೆ ಅಥವಾ ಆತ ಜೀವನಪರ್ಯಂತ ಸಂಪೂರ್ಣವಾಗಿ ಪ್ರಾಕೃತಿಕವಾದ ರೀತಿಯಲ್ಲಿ ಕೂದಲನ್ನು ಹೊಂದುವಂತೆ ಮಾಡಲಾಗುತ್ತದೆ .

ಡಾ . ಅಭಿಷೇಕ್ ಪಿಳನಿ ಅವರು ಭಾರತದಲ್ಲಿ ಮುಂಚೂಣಿಯಲ್ಲಿರುವ ಅಪಾರ ಅನುಭವವುಳ್ಳ ಕೂದಲು ಕಸಿ ಸರ್ಜನ್‌ರಲ್ಲಿ ಒಬ್ಬರಾಗಿದ್ದಾರೆ . ಈ ಆಶೂರ್ ಕ್ಲಿನಿಕ್ ‘ ನಲ್ಲಿ ವ್ಯಕ್ತಿಗತವಾಗಿ ಉತ್ತಮ ರೀತಿಯ ತರಬೇತಿವುಳ್ಳ ತಂಡವನ್ನು ಅವರು ಕಟ್ಟಿದ್ದಾರೆ . ಅಶೂರ್ ಕ್ಲಿನಿಕ್ ಭಾರತದಲ್ಲಿ ಫಾಲಿಕ್ಯುಲರ್ ಯೂನಿಟ್ ಎಕ್ಸ್ಟ್ರಾಕ್ಷನ್ ( ಎಫ್ ಯು ) ಅನ್ನು ಹೊಂದುವ ಮೂಲಕ ಖ್ಯಾತವಾಗಿದೆ . ಈ ಎಫ್‌ಯುಇ ವಿಧಾನದ ಮೂಲಕ ಪುರುಷ ಮತ್ತು ಮಹಿಳೆಯರಿಗೆ ಕ್ಲಿನಿಕ್ ಅತ್ಯುತ್ಕೃಷ್ಟವಾದ , ಪ್ರಾಕೃತಿಕ ಮತ್ತು ಫಲಿತಾಂಶ ಆಧಾರಿತ ಚಿಕಿತ್ಸೆಗಳನ್ನು ನೀಡುತ್ತಿದೆ . ಈ ವಿಧಾನಗಳನ್ನು ನಮ್ಮ ಹಿರಿಯ ಎಂಡಿ ಪದವಿ ಹೊಂದಿದ ಚರ್ಮರೋಗ ತಜ್ಞರು ನೆರವೇರಿಸುತ್ತಾರೆ . ಈ ಅಕ್ಕೂರ್ ಕ್ಲಿನಿಕ್‌ನಲ್ಲಿನ ತಜ್ಞ ವೈದ್ಯರು ಪ್ರತಿಯೊಬ್ಬ ರೋಗಿಗೂ ಅತ್ಯುತ್ತಮವಾದ ಫಲಿತಾಂಶ ಆಧಾರಿತ ಚಿಕಿತ್ಸೆಯನ್ನು ನೀಡುವಲ್ಲಿ ನಿಷ್ಣಾತರಾಗಿದ್ದಾರೆ . ಹೆಚ್ಚಿನ ಮಾಹಿತಿಗಾಗಿ : http : / / assureclinic . com / about . html

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.