ಉತ್ತರ ವಿಭಾಗ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪಿಯ ಮೇಲೆ ಆತ್ಮರಕ್ಷಣೆಗಾಗಿ ಪೋಲೀಸರಿಂದ ಗುಂಡಿನ ದಾಳಿ

ಉತ್ತರ ವಿಭಾಗ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಆರೋಪಿಯ ಮೇಲೆ ಆತ್ಮರಕ್ಷಣೆಗಾಗಿ ಪೋಲೀಸರಿಂದ ಗುಂಡಿನ ದಾಳಿ ಆರೋಪಿ ಮುನಿರಾಜನಿಂದ ಹಲ್ಲೆಗೊಳಗಾದ ಗಾಯಗೊಂಡ ಆಸಾಮಿಗಳು ಪೊಲೀಸರು ಸಂತೋಷ್ ಸುದೀಪ್ ಮುನಿರಾಜ ( @ ಮುನ್ನ | ಬಸವರಾಜ್‌ ಬಿ . ಎನ್ . ಲೋಹಿತ್ ಪೊಲೀಸ್ ಇನ್ಸ್ಪೆಕ್ಟರ್ ಪಿರಾದುದಾರರಾದ ಸಂತೋಷ ಮತ್ತು ಆತನ ಸ್ನೇಹಿತರು

ದಿನಾಂಕ 26 – 03 – 2019 ರಂದು ರಾತ್ರಿ 7 – 30 . ಗಂಟೆ ಸಮಯದಲ್ಲಿ ನಂದಿನಿಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಸರ್ಕಾರಿ ಆಟದ ಮೈದಾನ , ಮುನೇಶ್ವರ ಬ್ಲಾಕ್ , ಲಗ್ಗೆರೆ ಬೆಂಗಳೂರು ರಲ್ಲಿ ಆಟವಾಡಿ ಕುಳಿತ್ತಿರುವಾಗ 4 ಜನ ಆಸಾಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಸಂತೋಷ್ ಮತ್ತು ಸುದೀಪ್ ಮೇಲೆ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಂದಿನಲೇಔಟ್ ಪೊಲೀಸ್ ಠಾಣೆಯಲ್ಲಿ ಹಲ್ಲೆ , ಕೊಲೆ ಯತ್ನ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಗಳ ಪತ್ತೆ ಕಾರ್ಯದಲ್ಲಿದಾಗ ಈ ಪ್ರಕರಣದಲ್ಲಿ ಮುನಿರಾಜ @ ಮುನ್ನ ಮತ್ತು ಆತನ ಸಹಚರರು ಭಾಗಿಯಾಗಿರುವುದಾಗಿ ತಿಳಿದು ಬಂದಿರುತ್ತದೆ . ಈ ಮಾಹಿತಿ ಮೇರೆಗೆ ಶ್ರೀ ಜಿ . ಎನ್ . ಲೋಹಿತ , ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಶ್ರೀ ಕುಮಾರ್ ಎಂ . ಪಿಎಸ್‌ಐ ಮತ್ತು ಅವರ ಸಿಬ್ಬಂದಿಯವರುಗಳು ಆರೋಪಿಯು ಕೂಲಿನಗರದ ಪಕ್ಕದಲ್ಲಿರುವ ಬುದ್ದನಗರದಲ್ಲಿ ಇರುವುದಾಗಿ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ದಿನಾಂಕ 28 – 03 – 2019 ರಂದು ಬೆಳಗಿನ ಜಾವ ಸುಮಾರು 6 – 00 ಗಂಟೆ ಸಮಯದಲ್ಲಿ ಬಂಧಿಸಲು ಹೋದಾಗ ಆರೋಪಿ ಮುನಿರಾಜ ( @ ಮುನ್ನ ಎಂಬುವನು ಶ್ರೀ ಬಸವರಾಜ್ ಪಿಸಿ ರವರ ಮೇಲೆ ಚಾಕಿನಿಂದ ಏಕಾಏಕಿ ಹಲ್ಲೆ ಮಾಡಿರುತ್ತಾನೆ . ತಕ್ಷಣ ಪೊಲೀಸ್ ಇನ್ಸ್‌ಪೆಕ್ಟರ್‌ , ಲೋಹಿತ್ ರವರು ಗಾಳಿಯಲ್ಲಿ 1 ಸುತ್ತು ಗುಂಡು ಹಾರಿ ಆರೋಪಿಯನ್ನು ಶರಣಾಗುವಂತೆ ಸೂಚಿಸಿದ್ದರೂ ಕೂಡ ಆರೋಪಿಯು ಪೊಲೀಸರ ಮೇಲೆ ಹಲ್ಲೆ ಮುಂದುವರಿಸಲು ಪ್ರಯತ್ನಿಸಿದಾಗ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಯವರ ಆತ್ಮರಕ್ಷಣೆಗಾಗಿ ಆರೋಪಿ ಮುನಿರಾಜ ( @ ಮುನ್ನ ಎಂಬುವನ ಎಡಗಾಲಿಗೆ 1 ಸುತ್ತು ಗುಂಡಿನ ದಾಳಿ ನಡೆಸಿರುತ್ತಾರೆ . ತಕ್ಷಣ ಆರೋಪಿ ಮುನಿರಾಜ @ ಮುನ್ನ ಮತ್ತು ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯವರನ್ನು ಚಿಕಿತ್ಸೆಗಾಗಿ ಕಣ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ .

ಈ ಪ್ರಕರಣದಲ್ಲಿ ಆರೋಪಿಯಾದ ಮುನಿರಾಜ ( @ ಮುನ್ನ ಮತ್ತು ಆತನ ಸಹಚರರು ಲಗ್ಗೆರೆ ಸ್ಲಂ ಪ್ರದೇಶದಲ್ಲಿ ತನ್ನದೇ ಅಧಿಪತ್ಯ ಹೊಂದಲು ಈ ರೀತಿಯ ಕೃತ್ಯಗಳನ್ನು ಮಾಡುತ್ತಿರುವುದಾಗಿ ತಿಳಿದು ಬಂದಿರುತ್ತದೆ . ಈ ಆರೋಪಿಯ ವಿರುದ್ದ ನಂದಿನಿಲೇಔಟ್ , ರಾಜಗೋಪಾಲನಗರ , ಮಹಾಲಕ್ಷ್ಮಿಲೇಔಟ್ , ಸುಬ್ರಮಣ್ಯನಗರ ಪೊಲೀಸ್ ಠಾಣೆಯ ಕಾವೇರಿ ಗಲಾಟೆಯಲ್ಲಿನ ದೊಂಬಿ ಪ್ರಕರಣ , ಹಲ್ಲೆ , ಕೊಲೆಯತ್ನ , ವಾಹನಗಳಿಗೆ ಬೆಂಕಿ ಹಚ್ಚುವ ಒಟ್ಟು 9 ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ . ಆರೋಪಿ ಮತ್ತು ಆತನ ಸಹಚರರು ಇನ್ನು ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.