ಡಾ . ವಿ . ರಾಘವೇಂದ್ರ ರಾವ್ , ರಾಜ್ಯ ವಕ್ತಾರ , ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) ರವರು ವಕ್ತಾರ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ

ಡಾ . ವಿ . ರಾಘವೇಂದ್ರ ರಾವ್ , ರಾಜ್ಯ ವಕ್ತಾರ , ಕರ್ನಾಟಕ ಪ್ರದೇಶ ಜನತಾದಳ ( ಜಾತ್ಯತೀತ ) , ರಾಜ್ಯ ವಕ್ತಾರ ಸ್ಥಾನಕ್ಕೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ನಾನು ನನ್ನ ಹದಿಹರೆಯದಿಂದಲೂ ಜನತಾ ಪಕ್ಷದ ಕಾರ್ಯಕರ್ತನಾಗಿ , ಸಮಾಜವಾದಿ ಜನತಾಪಕ್ಷದ ಕಾರ್ಯಕರ್ತನಾಗಿ , ಸಮಾಜವಾದಿ ಜನತಾಪಕ್ಷ , ಜನತಾದಳ ಹಾಗೂ ಜನತಾದಳ ( ಜಾತ್ಯತೀತ ) ಪಕ್ಷದಲ್ಲಿ , ತಮ್ಮ ನೇತೃತ್ವದಲ್ಲಿ ಕೆಲಸ ಮಾಡುತ್ತಾ ಬಂದಿರುತ್ತೇನೆ . | 1996ರಿಂದಲೂ ಬೇಗೂರು ಹೋಬಳಿ ಪ್ರಧಾನ ಕಾರ್ಯದರ್ಶಿಯಾಗಿ , ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿಯಾಗಿ , ಬೆಂಗಳೂರು ನಗರ ಮಾಧ್ಯಮ ಕಾರ್ಯದರ್ಶಿಯಾಗಿ , ವಕ್ತಾರವಾಗಿ , ಬೆಂಗಳೂರು ನಗರ ಉಪಾಧ್ಯಕ್ಷನಾಗಿ ಹಾಗೂ ರಾಜ್ಯ ವಕ್ತಾರನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿರುತ್ತೀರಿ . ಇದಕ್ಕಾಗಿ ತಮಗೆ ಧನ್ಯವಾದಗಳನ್ನು ಸಲ್ಲಿಸುತ್ತೇನ .

ಆದರೆ 2018ರ ಮೇ ತಿಂಗಳಲ್ಲಿ ಪಕ್ಷವು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದ ನಂತರ ಕಾರ್ಯಕರ್ತರ ಕಡೆಗಣನೆ ಹಾಗೂ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ನೀಡದೆ ಇರುವುದು ಹಲವಾರು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ . ಇಷ್ಟು ವರ್ಷಗಳು ಅಂದರೆ 1985ರಿಂದ ಇಲ್ಲಿಯವರೆಗೂ ಪಕ್ಷ ಬದಲಾವಣೆ ಮಾಡದ ತಮಗೆ ನಿಷ್ಠನಾಗಿ , ಕಾಯಾ , ವಾಚಾ , ಮನಸಾ , ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಬಂದ ನನಗೆ ಹಾಗೂ ಕಾರ್ಯಕರ್ತರಿಗೂ ಗೌರವ ದೊರೆಯದಿರುವುದರಿಂದ ಬೇಸರಗೊಂಡು ಪಕ್ಕದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ವಕ್ತಾರ ಸ್ಥಾನಕ್ಕೆ ಈ ದಿನ ರಾಜಿನಾಮೆ ನೀಡುತ್ತಿದ್ದೇನೆ . ಇಷ್ಟು ವರ್ಷಗಳು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪಕ್ಷಕ್ಕೂ ಹಾಗೂ ತಮಗೂ ಅನಂತಾನಂತೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ , ನನ್ನ ರಾಜಿನಾಮೆಯನ್ನು ಅಂಗೀಕರಿಸಬೇಕಾಗಿ ಕೋರುತ್ತೇನೆ ಎಂದು ಸನ್ಮಾನ್ಯ ಶ್ರೀ ಹೆಚ್ . ಡಿ . ದೇವೇಗೌಡರವರಿಗೆ , ರಾಷ್ಟ್ರೀಯ ಅಧ್ಯಕ್ಷರು , ಜನತಾದಳ ( ಜಾತ್ಯತೀತ ) ರವರಿಗೆ ಪತ್ರದ ಮೂಲಕ ತಿಳಿಸಿರುತ್ತಾರೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.