ಸಿಸಿಬಿ ಕಾರ್ಯಾಚರಣೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ , ನಗದು ರೂ . 25 ಲಕ್ಷ , 18 ಮೊಬೈಲ್ ಹಾಗೂ ಇತರೆ ಪರಿಕರಗಳ ವಶ

ದಿನಾಂಕ : 29 . 03 . 2019 ರಂದು ಬೆಂಗಳೂರು ನಗರದ , ಕೊಡಿಗೆಹಳ್ಳಿ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಲೋಟ್ಟೆಗೊಲ್ಲಹಳ್ಳಿ . 16ನೇ ಕ್ರಾಸ್ , ಜಲಗೇರಮ್ಮ ದೇವಸ್ಥಾನದ ಹತ್ತಿರವಿರುವ ಮನೆ ನಂ . 14 , ನಂಜುಂಡೇಶ್ವರ ನಿಲಯದ 1ನೇ ಮಹಡಿಯ ವಾಸದ ಮನೆಯಲ್ಲಿ ವ್ಯಕ್ತಿಯೊಬ್ಬ ದಿನಾಂಕ : 28 – 03 – 2019 ರಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು ತಂಡಗಳ ನಡುವೆ ನಡೆಯುತ್ತಿರುವ ಐಪಿಎಲ್ ಟಿ – 20 ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಸದರಿ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ರೇಶೂವನ್ನು ನೋಡಿಕೊಂಡು ಮೊಬೈಲ್ ಪೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಾ , ಕ್ರಿಕೆಟ್ ಬೆಟ್ಟಿಂಗ್ ಹಣವನ್ನು ಬೆಟ್ಟಿಂಗ್ ಆಡುವ ಪಂಟರ್‌ಗಳಿಂದ ಸಂಗ್ರಹಿಸುತ್ತಿರುವುದಾಗಿ ಮತ್ತು ಹಲವಾರು ಸಾರ್ವಜನಿಕರಿಂದ ಕ್ರಿಕೆಟ್ ಬೆಟ್ಟಿಂಗ್‌ಗೆ ಹಣವನ್ನು ಕಟ್ಟಿಸಿಕೊಂಡು ಮೋಸ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ ( ಸಿಸಿಬಿ ) ವಿಶೇಷ ವಿಚಾರಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ

ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಶೇಖ್ ಶಫಿ ಬಿನ್ ಉಸ್ಮಾನ್ ಗನಿ , 32ವರ್ಷ , # . 14 , 1ನೇ ಮಹಡಿ , 16ನೇ ಕ್ರಾಸ್ , ಜಲಗೇರಮ್ಮ ದೇವಸ್ಥಾನದ ಹತ್ತಿರ , ಲೊಟ್ಟಿಗೊಲ್ಲಹಳ್ಳಿ , ಬೆಂಗಳೂರು . ಎಂಬ ಆಸಾಮಿಯನ್ನು ವಶಕ್ಕೆ ಪಡೆದು ಈತನ ವಶದಿಂದ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿದ ನಗದು ರೂ . 25 ಲಕ್ಷ , 18 ಮೊಬೈಲ್ ಫೋನ್‌ಗಳು ಹಾಗೂ ಕ್ರಿಕೆಟ್ ಬೆಟ್ಟಿಂಗ್ ವಿವರ ಬರೆದಿರುವ 93 ಚೀಟಿಗಳನ್ನು ವಶಪಡಿಸಿಕೊಂಡಿದ್ದು , ಈ ಸಂಬಂಧ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತದೆ . ಈ ಆಸಾಮಿಯು ದಿನಾಂಕ : 28 – 03 – 2019ರಂದು ಮುಂಬೈ ಇಂಡಿಯನ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು ತಂಡಗಳ ನಡುವೆ ನಡೆದ ಐಪಿಎಲ್ ಟಿ – 20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಮೊಬೈಲ್ ಫೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಟದ ಜೂಜಾಟ ಆಡಿಸಿದ್ದು , ಸದರಿ ಪಂದ್ಯಗಳಿಗೆ ಸಂಬಂಧಪಟ್ಟಂತೆ ಈ ದಿನ ಜೂಜಾಟದಲ್ಲಿ ಗೆದ್ದವರಿಗೆ ಹಣ ಕೊಡುವುದು ಮತ್ತು ಸೋತವರಿಂದ ಹಣವನ್ನು ಪಡೆಯುತ್ತಿದ್ದಾಗಿ ಇದುವರೆಗಿನ ವಿಚಾರಣೆಯಿಂದ ತಿಳಿದು ಬಂದಿರುತ್ತದೆ . ಅಲ್ಲದೆ ಹೀಗೆ ಕ್ರಿಕೆಟ್ ಬೆಟ್ಟಿಂಗ್‌ಗೆ ಕಟ್ಟಿಸಿಕೊಂಡ ಹಣವನ್ನು ಪ್ರಮುಖ ಬುಕ್ತಿಯಾದ ಮುಕೇಶ್ ( ಮೊ . ನಂ . 9108888887 ) ಎಂಬುವರ ಹತ್ತಿರ ಕಟ್ಟುತ್ತಿದ್ದಾಗಿಯೂ ಸಹ ತಿಳಿದು ಬಂದಿರುತ್ತದೆ . ತಲೆಮರೆಸಿಕೊಂಡಿರುವ ಬುಕ್ತಿ ಮುಕೇಶ್ ಎಂಬುವನ ಪತ್ತೆ ಕಾರ್ಯ ಮುಂದುವರಿದಿದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಅಶೋಕ್ ಕುಮಾರ್ ಐ . ಪಿ . ಎಸ್ ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಎಸ್ . ಗಿರೀಶ್ , ಐ . ಪಿ . ಎಸ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೋಲೀಸ್ ಆಯುಕ್ತರಾದ ಶ್ರೀ ಎನ್ . ಹೆಚ್ . ರಾಮಚಂದ್ರಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ . ಶರಣಪ್ಪ ಐ ಹದ್ದಿ ಮತ್ತು ಸಿಬ್ಬಂದಿಗಳಾದ ಶ್ರೀ . ಶ್ರೀನಿವಾಸ್ ಮತ್ತು ಶ್ರೀ . ನಾಗರಾಜು ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s