ಹೊರರಾಜ್ಯ / ಜಿಲ್ಲೆಯಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳ ಬಂಧನ

ಹೊರರಾಜ್ಯ / ಜಿಲ್ಲೆಯಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಆರೋಪಿಗಳ ಬಂಧನ ಬೆಂಗಳೂರು ನಗರದ ಸೋಲದೇವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ಚಿಕ್ಕಸಂದ್ರ , ಹನುಮಂತೇಗೌಡ ರಸ್ತೆ , 6ನೇ ಕ್ರಾಸ್ , ಮನೆ ನಂ . 13 / 5 ರ 1ನೇ ಮಹಡಿಯಲ್ಲಿನ ಮನೆಯಲ್ಲಿ ಹೊರ ರಾಜ್ಯ / ಜಿಲ್ಲೆಯಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಣೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗದ ಪೊಲೀಸರು ದಿನಾಂಕ 30 . 03 . 2019 ರಂದು ಮೇಲ್ಕಂಡ ಸ್ಥಳದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ , ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳಾದ 1 . ದೀಪಕ್ @ ದೀಪಕ್‌ಗೌಡ ಬಿನ್ ಕರಿಯಪ್ಪ ವಯಸ್ಸು 30 ವರ್ಷ , ಶಿವಮರ , ಚನ್ನರಾಯಪಟ್ಟಣ , ಹಾಸನ ಜಿಲ್ಲೆ . 2 ಕಾಶೀ ಬಿನ್ ಸುರೇಶ ವಯಸ್ಸು 21 ವರ್ಷ , ಹೆಚ್ ಹಳ್ಳ , ಹಿಲವಾಲ , ಮೈಸೂರು 3 . ಪ್ರಜ್ವಲ್ ಬಿನ್ ರವಿಕುಮಾರ ವಯಸ್ಸು 21 ವರ್ಷ , ವಾಸ : 11ನೇ ಕ್ರಾಸ್ , ಹೇಮಾವತಿ ಬಡಾವಣೆ , ಕೆ . ಆರ್ . ಪೇಟೆ , ಮಂಡ್ಯ , ಎಂಬುವವರುಗಳನ್ನು ದಸ್ತಗಿರಿ ಮಾಡಿ , ವೇಶ್ಯಾವಾಟಿಕೆ ನಡೆಸಲು ಮಾನವ ಕಳ್ಳ ಸಾಗಣಿಕೆ ಮಾಡಿಕೊಂಡು ಕರೆತಂದಿದ್ದ ಹೊರ ರಾಜ್ಯ / ಜಿಲ್ಲೆಯ ನೊಂದ 3 ಜನ ಹುಡುಗಿಯರನ್ನು ವೇಶ್ಯಾವಾಟಿಕೆಯಿಂದ ಸಂರಕ್ಷಣೆ ಮಾಡಲಾಗಿರುತ್ತದೆ . ಆರೋಪಿಗಳ ವಶದಿಂದ 4 ಮೊಬೈಲ್ ಫೋನ್ , ನಗದು 3500 / – ರೂ , ಮತ್ತು 8 ಕಾಂಡೋಮುಗಳನ್ನು ವಶಕ್ಕೆ ಪಡೆದಿರುತ್ತದೆ . ಈ ಸಂಬಂಧ ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ . ಆರೋಪಿಗಳು ಹೊರ ರಾಜ್ಯ / ಜಿಲ್ಲೆಯಿಂದ ಹುಡುಗಿಯರನ್ನು ಮಾನವ ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು , ಹೆಚ್ಚು ಹಣ ನೀಡುವ ಆಮಿಷ ತೋರಿಸಿ ಗಿರಾಕಿಗಳನ್ನು ಮನೆಗೆ ಬರಮಾಡಿಕೊಂಡು ಬಲವಂತವಾಗಿ ವೇಶ್ಯಾವಾಟಿಕೆ ದಂಧೆ ನಡೆಸಿ ಅಕ್ರಮವಾಗಿ ಹಣ ಸಂಪಾದನೆ ಮಾಡಿ ಜೀವನ ಸಾಗಿಸುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ .

– ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಅಶೋಕ್ ಕುಮಾರ್ , ಐಪಿಎಸ್ & ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ . ಎಸ್ , ಐಪಿಎಸ್ ರವರ ನೇರ ಮಾರ್ಗದರ್ಶನದಲ್ಲಿ ಕೇಂದ್ರ ಅಪರಾಧ ವಿಭಾಗದ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಎ . ಸಿ . ಪಿ ರವರಾದ ಶ್ರೀಮತಿ . ಶೋಭಾ ಎಸ್ ಖಟಾವರ್ ರವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಶ್ರೀ ಲಕ್ಷ್ಮೀನರಸಿಂಹಯ್ಯ , ಎಎಸ್‌ಐ ರವರುಗಳಾದ ಶ್ರೀ . ದ್ವಾರಕನಾಥ್ , ಶ್ರೀಮತಿ . ಶಾಂತಶೆಟ್ಟಿ ಮತ್ತು ಸಿಬ್ಬಂದಿಯವರುಗಳಾದ ಶ್ರೀ . ಬಸವರಾಜು , ಶ್ರೀ . ಬಸಪ್ಪ ಜಿ ಡಾಂಗೆ , ಶ್ರೀ . ವಿ . ಶ್ರೀನಿವಾಸ ರವರ ತಂಡ ಯಶಸ್ವಿಗೊಳಿಸಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.