ಭಾರತದ ಮೊಟ್ಟಮೊದಲ ಲೈವ್ ಲೈನ್ ರೀಕಂಡಕ್ಟಿಂಗ್ ಯೋಜನೆಯನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ ಸ್ಟೆರ್‌ಲೈಟ್ ಪವರ್

• ಇಲೆಕ್ಟ್ರಾನಿಕ್ ಸಿಟಿಯಲ್ಲಿ ಶೂನ್ಯ ಶಟ್‌ಡೌನ್ ವ್ಯವಸ್ಥೆಯೊಂದಿಗೆ ಲೈನ್‌ಗಳ ಸಾಮರ್ಥ್ಯವನ್ನು ದ್ವಿಗುಣಗೊಳಿಸಿದ ಸಂಸ್ಥೆ

• 66ಕೆವಿ ಲೈನ್‌ನಲ್ಲಿ ಶಿಕಂಡಕ್ಷರಿಂಗ್ ಪ್ರಕ್ರಿಯೆ ನಡೆಸುವಾಗ ವಿದ್ಯುತ್‌ ಲೋಡ್ ಅನ್ನು ಬೈಪಾಸ್ ಮಾಡಲು ಟವರ್‌ನಲ್ಲಿ ಸಹಾಯಕ ಹಂತಗಳ ಅನುಸರಣೆ

ಬೆಂಗಳೂರು , ಮಂಗಳವಾರ , ಏಪ್ರಿಲ್ 2 , 2019 : ಜಾಗತಿಕ ವಿದ್ಯುತ್ ಪ್ರಸರಣ ( ಪವರ್ ಟ್ರಾನ್ಸ್‌ಮಿಷನ್ ) ಕಂಪನಿಯಾಗಿರುವ ಸ್ಟೆರ್‌ಲೈಟ್ ಪವರ್‌ ಸಂಸ್ಥೆಯು , ಭಾರತದ ಮೊಟ್ಟ ಮೊದಲ ಲೈವ್ – ಲೈನ್ ಯೋಜನೆಯನ್ನು ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ . ಲೈವ್ – ಲೈನ್ ಸ್ಥಿತಿಗಳ ಅಡಿಯಲ್ಲಿ ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿಯಲ್ಲಿ 66 ಕೆವಿ ಟ್ರಾನ್ಸ್‌ಮಿಷನ್ ಲೈನ್ ಅನ್ನು ಸಂಪರ್ಕಿಸುವ ರೀಕಂಡಕ್ಷರಿಂಗ್ ಕಾರ್ಯವನ್ನು ಕಂಪನಿಯು ಯಶಸ್ವಿಯಾಗಿ ನಿರ್ವಹಿಸಿದೆ . ಈ ಮೂಲಕ ಹಾಲಿ ಇರುವ ಲೈನ್ನ ವಿದ್ಯುತ್ ಪ್ರಸರಣ ಸಾಮರ್ಥ್ಯವು ದುಪ್ಪಟ್ಟಾಗಿದೆ . ಈ ಲೈನ್‌ಗಳಲ್ಲಿ ಹೈ – ಪರ್ಫಾರ್ಮೆನ್ಸ್ ಕಂಡಕ್ಟರ್‌ಗಳನ್ನು ಅಳವಡಿಸಲಾಗಿದ್ದು , ಅವುಗಳು ಗೌಂಡ್‌ನಿಂದ ಮತ್ತು ಸಮೀಪದ ಕಟ್ಟಡಗಳಿಂದ ಅತ್ಯುತ್ತಮವಾದ ಸ್ಪಷ್ಟತೆಯನ್ನು ನೀಡುತ್ತವೆ . ಭಾರತದ ಬಹುತೇಕ ನಗರಗಳು ಕ್ಷಿಪ್ರ ಬೆಳವಣಿಗೆ ಅಥವಾ ವಿಸ್ತರಣೆಗೆ ಸಾಕ್ಷಿಯಾಗಿದ್ದು , ಇಂತಹ ಸಂದರ್ಭಗಳಲ್ಲಿ ವಿದ್ಯುತ್‌ನ ಬೇಡಿಕೆ ಅತಿ ಹೆಚ್ಚಾಗಿರುತ್ತದೆ . ಇಂತಹ ಬೇಡಿಕೆಗೆ ಪೂರಕವಾಗಿ , ದಿನದ 24 ಗಂಟೆಗಳ ಕಾಲ , ಎಲ್ಲರಿಗೂ ನಿರಂತರವಾಗಿ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಅತ್ಯಂತ ಹಳೆಯದಾದ ಮೂಲಸೌಲಭ್ಯ , ಗ್ರೀನ್ ಫೀಲ್ಡ್ ಟ್ರಾನ್ಸ್‌ಮಿಷನ್ ಯೋಜನೆಗಳನ್ನು ಸ್ಥಾಪಿಸಲು ಅಗತ್ಯವಿರುವ ಸ್ಥಳಾವಕಾಶದ ಕೊರತೆ ರೀತಿಯ ಹಲವಾರು ಪರಮುಖ ಸವಾಲುಗಳು ಎದುರಾಗುತ್ತವೆ . ಇದೇ ರೀತಿಯ ಸಮಸ್ಯೆಗಳು ಬೆಂಗಳೂರಿನಲ್ಲೂ ಸ್ವರ್‌ಲೈಟ್ ಪವರ್‌ ಸಂಸ್ಥೆಗೆ ಎದುರಾಗಿದ್ದವು . ಇದೇ ವೇಳೆ ವಿದ್ಯುತ್ ಪ್ರಸರಣ ಸಮಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳಲು ಮತ್ತು ಅತ್ಯಂತ ಕಡಿಮೆ ಅವಧಿಯಲ್ಲಿ , ಯಾವುದೇ ರೀತಿಯ ವಿದ್ಯುತ್ ಕಡಿತವಿಲ್ಲದೆಯೇ ವಿದ್ಯುತ್ ಪ್ರಸರಣ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಇಟ್ಟಿನಲ್ಲಿ ರಾಜ್ಯವು ತನ್ನ ವಿದ್ಯುತ್ ಪರಸರಣ ವ್ಯವಸ್ಥೆಗೆ ಸಂಬಂಧಿಸಿದಂತೆ ಅಗತ್ಯ ಅಪ್‌ಗ್ರೇಡ್ ಅಥವಾ ಅಪ್‌ಡೇಟ್ ಹೊಂದಬೇಕಾದ್ದು ಅಗತ್ಯವಾಗಿದೆ .

ಈ ಯೋಜನೆಯನ್ನು ಪೂರ್ಣಗೊಳಿಸಿದ ಸುಸಂದರ್ಭದಲ್ಲಿ ಮಾತನಾಡಿದ ಸ್ಟೆರ್‌ಲೈಟ್ ಪವರ್‌ ಸಂಸ್ಥೆಯ ಸಲ್ಯೂಷನ್ ಬ್ಯುಸಿನೆಸ್ ವಿಭಾಗದ ಸಿಇಒ ಶ್ರೀ ಮನೀಶ್ ಅಗರ್ವಾಲ್ ಅವರು , “ ಸ್ಟೆರ್‌ಲೈಟ್ ಪವರ್‌ ಸಂಸ್ಥೆಯು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿರುವ ವಿಷಯವನ್ನು ಘೋಷಿಸುತ್ತಿರುವುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ . ಪ್ರಸ್ತುತ ನಾವು ಬೆಂಗಳೂರಿನಲ್ಲಿ ಮೊಟ್ಟಮೊದಲ ಲೈವ್ – ಲೈನ್ ಯೋಜನೆಯನ್ನು ಪೂರ್ಣಗೊಳಿಸಿದ್ದೇವೆ . ವಿದ್ಯುತ್ ಪೂರೈಕೆ ಅಥವಾ ವಿದ್ಯುತ್ ತಲುಪಿಸುವಿಕೆಗೆ ಸಂಬಂಧಿಸಿದಂತೆ ಇರುವ ಅತ್ಯಂತ ಕಠಿಣವಾದ ಸವಾಲುಗಳನ್ನು ಪರಿಹರಿಸುವ ಮೂಲಕ ಮಾನವ ಸಂಕುಲವನ್ನು ಉನ್ನತಿಯ ಹಾದಿಯಲ್ಲಿ ಕಒಂಡೊಯ್ಯುವ ಅತಿ ಶ್ರೇಷ್ಠ ಮಹತ್ವಾಕಾಂಕ್ಷೆಯೊಂದಿಗೆ ಸೆರ್‌ಲೈಟ್ ಪವರ್‌ ಸಂಸ್ಥೆಯು ಮುನ್ನಡೆಯುತ್ತಿದೆ . ಸಲ್ಯೂಷನ್ ವ್ಯವಹಾರವು ಹಲವಾರು ವಿನೂತನವಾದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುತ್ತಲಿದ್ದು ,ನಮ್ಮ ಎಲ್ಲ ಯೋಜನೆಗಳ ಜಾರಿ ಸಂದರ್ಭದಲ್ಲಿ , ಯೋಜನೆಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವ ಭರವಸೆಗಾಗಿ ಈ ಅತ್ಯಾಧುನಿಕ ಪರಿಹಾರ ತಂತ್ರಜ್ಞಾನಗಳನ್ನು ಬಳಸಬಹುದಾಗಿದೆ . ಈ ಸಂದರ್ಭದಲ್ಲಿ , ಯೋಜನೆಯನ್ನು ನಿಗದಿತ ಸಮಯದ ಒಳಗಾಗಿ ಯಶಸ್ವಿಯಾಗಿ ಪೂರ್ಣಗೊಳಿಸಲು ನಮಗೆ ಅಗತ್ಯವಿದ್ದ ಎಲ್ಲ ರೀತಿಯ ಸಹಕಾರವನ್ನು ನೀಡಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ( ಕೆಪಿಟಿಸಿಎಲ್ ) ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಲು ನಾನು ಬಯಸುತ್ತೇನೆ , ” ಎಂದು ಹೇಳಿದರು .

ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ಸೆಕ್ಟರ್ 2 , ಪೇಸ್2ಕ್ಕೆ ( ಮಾಲ್ಗುಡಿ ) ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಜೈಲ್ ರಸ್ತೆಯಲ್ಲಿನ ಜಂಕ್ಷನ್‌ನಿಂದ ನಾಗನಾಥಪುರದ ರಿಸೀವಿಂಗ್ ಸ್ಟೇಷನ್ ಮಾರ್ಗದ ಎರಡೂ ಬದಿಯಲ್ಲಿ ಅತ್ಯಂತ ಇಕ್ಕಟ್ಟಾಗಿರುವ ಅಥವಾ ಕಿರಿದಾಗಿರು ವಸತಿ ಪ್ರದೇಶ ಹಾಗೂ ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ಹೊಂದಿದೆ . ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲೂ , ಅಕ್ಕಪಕ್ಕದ ಪ್ರದೇಶಗಳ ವಿದ್ಯುತ್ ಸಂಪರ್ಕ ಮತ್ತು ಪ್ರಸರಣದಲ್ಲಿ ಯಾವುದೇ ವ್ಯತ್ಯಯ ಆಗದ ರೀತಿಯಲ್ಲಿ , ಸಂಪೂರ್ಣ ಶೂನ್ಯ ಶಟ್ ಡೌನ್ ಕಂಡೀಷನ್‌ನಲ್ಲಿ ಈ ರೀಕಂಡೆಕ್ಟರಿಂಗ್ ಕಾರ್ಯವನ್ನು ನಿರ್ವಹಿಸಿರುವುದು ಒಂದು ಪರಿಣಾಮಕಾರಿ ಹಾಗೂ ಗಮನಾರ್ಹ ಕಾರ್ಯವಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.