ಸಿಸಿಬಿ ಕಾರ್ಯಾಚರಣೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ – ನಗದು 6 ಲಕ್ಷ ಮತ್ತು 02 ಮೊಬೈಲ್ ಫೋನ್ ಮತ್ತು ಇತರೆ ಪರಿಕರಗಳ ವಶ

ದಿನಾಂಕ : 06 . 04 . 2019

ಸಿಸಿಬಿ ಕಾರ್ಯಾಚರಣೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಓರ್ವನ ಬಂಧನ – ನಗದು 6 ಲಕ್ಷ ಮತ್ತು 02 ಮೊಬೈಲ್ ಫೋನ್ ಮತ್ತು ಇತರೆ ಪರಿಕರಗಳ ವಶ ದಿನಾಂಕ 05 . 04 . 2019 ರಂದು ಬೆಂಗಳೂರು ನಗರದ , ಕೆ . ಆರ್ . ಪುರ ಪೊಲೀಸ್ ಠಾಣೆ ಸರಹದ್ದಿಗೆ ಸೇರಿದ ಹಳೇ ಮದ್ರಾಸ್ ರಸ್ತೆ , ಕೆ . ಆರ್ . ಪುರಂನ ಎ2ಬಿ ಹೋಟೆಲ್ ಮುಂಭಾಗ ಪಾರ್ಕಿಂಗ್ ಸ್ಥಳದಲ್ಲಿ ವ್ಯಕ್ತಿಯೊಬ್ಬ ದಿನಾಂಕ : 04 – 04 – 2019 ರಂದು ನಡೆದ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ಸನ್ ರೈಸ್ ಹೈದರಬಾದ್ ತಂಡಗಳ ನಡುವೆ ನಡೆಯುತ್ತಿರುವ ಐಪಿಎಲ್ ಟಿ – 20 ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಸದರಿ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಆಪ್ ಮೂಲಕ ಬೆಟ್ಟಿಂಗ್ ರೇಶೂವನ್ನು ನೋಡಿಕೊಂಡು , ಮೊಬೈಲ್ ಫೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಾ , ಕ್ರಿಕೆಟ್ ಬೆಟ್ಟಿಂಗ್ ಹಣವನ್ನು ಬೆಟ್ಟಿಂಗ್ ಆಡುವ ಪಂಟರ್‌ಗಳಿಂದ ಸಂಗ್ರಹಿಸುತ್ತಿರುವುದಾಗಿ ಮತ್ತು ಹಲವಾರು ಸಾರ್ವಜನಿಕರಿಂದ ಕ್ರಿಕೆಟ್ ಬೆಟ್ಟಿಂಗ್‌ಗೆ ಹಣವನ್ನು ಕಟ್ಟಿಸಿಕೊಂಡು ಮೋಸ ಮಾಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ ( ಸಿಸಿಬಿ ) ವಿಶೇಷ ವಿಚಾರಣಾ ದಳದ ಅಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಈ ಕೆಳಕಂಡ ಆಸಾಮಿಯಾದ ಹೆಚ್ . ವಿ . ಚೌಡೇಗೌಡ ಬಿನ್ ಲೇ . ವೆಂಕಟಸ್ವಾಮಿ ಗೌಡ , 38 ವರ್ಷ , ನಂ . 101 , 1ನೇ ಮಹಡಿ , ಕುವೆಂಪು ರಸ್ತೆ , ಕಿತಕನೂರು ಗ್ರಾಮ , ಬೆಂಗಳೂರು . ಈತನನ್ನು ವಶಕ್ಕೆ ಪಡೆದು ಈತನ ವಶದಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಿಸಿದ ನಗದು 6 ಲಕ್ಷ ರೂ . ಗಳನ್ನು ಮತ್ತು ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದು , ಈ ಸಂಬಂಧ ಕೆ . ಆರ್ . ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಆಸಾಮಿಯು ಕೃಷ್ಣಪ್ಪ ಎಂಬ ಬುಕ್ತಿಯೊಂದಿಗೆ ಸೇರಿಕೊಂಡು ಐಪಿಎಲ್ ಟಿ – 20 ಕ್ರಿಕೆಟ್ ಪಂದ್ಯಕ್ಕೆ ಸಂಬಂಧಪಟ್ಟಂತೆ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ನಡೆಸುತ್ತಿರುವುದು ತಿಳಿದು ಬಂದಿದ್ದು , ತಲೆಮರೆಸಿಕೊಂಡಿರುವ ಬುಕ್ತಿ ಕೃಷ್ಣಪ್ಪ ಎಂಬುವನ ಪತ್ತೆ ಕಾರ್ಯ ಮುಂದುವರಿದಿದೆ .

ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಅಶೋಕ್ ಕುಮಾರ್ ಐ . ಪಿ . ಎಸ್ ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಎಸ್ . ಗಿರೀಶ್ , ಐ . ಪಿ . ಎಸ್ ರವರ ಮಾರ್ಗದರ್ಶನದಲ್ಲಿ ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಎನ್ . ಹೆಚ್ . ರಾಮಚಂದ್ರಯ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ವಿ . ನಾರಾಯಣಸ್ವಾಮಿ ಮತ್ತು ಸಿಬ್ಬಂದಿಗಳಾದ ಶ್ರೀ . ಜಾನ್‌ಕೆನ್ನಿ ಮತ್ತು ಶ್ರೀ . ನಾಗರಾಜು ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.