ಸಿಸಿಬಿ ಕಾರ್ಯಾಚರಣೆ- ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಓರ್ವನ ಬಂಧನ

ದಿನಾಂಕ : 06 . 04 . 2019

ಸಿಸಿಬಿ ಕಾರ್ಯಾಚರಣೆ ಮಾದಕ ವಸ್ತು ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ನೈಜೀರಿಯಾ ದೇಶದ ಓರ್ವನ ಬಂಧನ – 5 ಲಕ್ಷ ಮೌಲ್ಯದ 10 ಕೆ . ಜಿ . ಗಾಂಜಾ ವಶ ಬೆಂಗಳೂರು ನಗರದ ರಾಮಮೂರ್ತಿನಗರ ಬೋಸ್ ಠಾಣಾ ಸರಹದ್ದಿನ ಹೊರಮಾವು , ಕಲ್ಲೆರೆ , ಪೂಜಾ ಗಾರ್ಡನ್ , ಮುನಿತಾಯಪ್ಪ ಲೇಔಟ್ , 2ನೇ ಮೈನ್ , 1ನೇ ಕ್ರಾಸ್‌ನಲ್ಲಿರುವ ಮನೆ ನಂ . 6 ರ 2ನೇ ಮಹಡಿಯ ಮನೆಯಲ್ಲಿ ಒಬ್ಬ ನೈಸಿರಿಯಾ ದೇಶದ Yusuf Ahrhulahi ಎಂಬ ಹೆಸರಿನ ಆಸಾಮಿ , ಮೇಲ್ಕಂಡ ವಿಳಾಸದ ಮನೆಯನ್ನು ಬಾಡಿಗೆಗೆ ಪಡೆದುಕೊಂಡು , ಆ ಮನೆಯಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡಲು ಸಂಗ್ರಹಿಸಿ ತನ್ನ ವಶದಲ್ಲಿಟ್ಟುಕೊಂಡಿರುತ್ತಾನೆ ಎಂಬುದಾಗಿ ಬಂದ ಖಚಿತ ಮಾಹಿತಿ ಮೇರೆಗೆ , ಮಹಿಳಾ ಮತ್ತು ಮಾದಕ ದ್ರವ್ಯ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ದಿನಾಂಕ 05 – 04 2019 ರಂದು ಮೇಲ್ಕಂಡ ಸ್ಥಳದ ಮೇಲೆ ಕ್ಲಿಪ ಕಾರ್ಯಚರಣೆ ನಡೆಸಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಸಾಮಿಯಾದ Yusuf Abdulabi S / o Abdulahi , 32 Years , Anambra , Nigeria . Present address : No . 6 27 Floor , Munithayappa Layout , Pooja Garden , 1 Cross , 27 Main , Kalkere , Horamavu , Bengaluru – 560043 ಎಂಬಾತನನ್ನು ವಶಕ್ಕೆ ಪಡೆದು ಈತನ ವಶದಲ್ಲಿದ್ದ ಮಾದಕ ವಸ್ತು 10 ಕೆ . ಜಿ ತೂಕದ ಗಾಂಜಾ , ಎರಡು ಮೊಬೈಲ್ ಫೋನನ್ನು ಪ್ಲಾಸ್ಟಿಕ್ ಕವರ್ , ಒಂದು ಪಾಸ್‌ಪೋರ್ಟ್ , ಪೋರ್ಟೇಬಲ್‌ ಚಾಲಿತ ತೂಕದ ಯಂತ್ರ ಮತ್ತು ನಗದು ರೂ . 2 . 000 – ಅನ್ನು ವಶಪಡಿಸಿಕೊಂಡಿದ್ದು , ವಶಪಡಿಸಿಕೊಂಡ ಮಾಅನ ಮೌಲ್ಯ ರೂ . 5 ಲಕ್ಷ ಗಳೆಂದು ಅಂದಾಜಿಸಲಾಗಿದೆ . ಈ ಸಂಬಂಧ ರಾಮಮೂರ್ತಿನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ . ಆರೋಪಿಯು ನೈಜೀರಿಯಾ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಭಾರತಕ್ಕೆ ಬಂದು ಕಲ್ಲೆರೆಯಲ್ಲಿ ವಾಸ್ತವ್ಯ ಹೂಡಿ , ತಮಿಳುನಾಡು ಮೂಲದ ಆಸಾಮಿಯಿಂದ ಕೆ . ಜಿ . ಗಟ್ಟಲೆ ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು ತನ್ನ ವಶದಲ್ಲಿಟ್ಟುಕೊಂಡು ತನ್ನದೇ ವ್ಯವಸ್ಥಿತ ರೀತಿಯಲ್ಲಿ ಜಾಲವನ್ನು ಸಂಘಟಿಸಿಕೊಂಡು , ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡುತ್ತಿರುವ ಅಂಶ ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿರುತ್ತದೆ . ಈತನಿಗೆ ಸರಬರಾಜು ಮಾಡುತ್ತಿದ್ದ ಆಸಾಮಿಗಳ ಶೋಧ ಕಾರ್ಯ ಮುಂದುವರಿದಿದೆ .

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಶ್ರೀ ಆಲೋಕ್ ಕುಮಾರ್ ಐ . ಪಿ . ಎಸ್ ಮತ್ತು ಉಪ ಪೊಲೀಸ್ ಆಯುಕ್ತರಾದ ಶ್ರೀ ಎಸ್ . ಗಿರೀಶ್ , ಐ . ಪಿ . ಎಸ್ ರವರ ನೇರ ಮಾರ್ಗದರ್ಶನದಲ್ಲಿ ಸಿಸಿಬಿಯ ಮಹಿಳೆ ಮತ್ತು ಮಾದಕ ದ್ರವ್ಯ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ಶೋಭ ಎಸ್ . ಖಟಾವರ್ ರವರ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಕೆ . ನಾರಾಯಣಗೌಡ ಹಾಗೂ ಸಿಬ್ಬಂದಿಗಳಾದ ಶ್ರೀ ವಿನಯ್ , ಶ್ರೀ ಶಶಿಧರ್ , ಶ್ರೀ ನಂದೀಶ್ ಮತ್ತು ಹಸ್ಕತ್ ಪಾಷಾ ರವರುಗಳ ತಂಡ ಪಾಲ್ಗೊಂಡಿರುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.