. ವಿ . ಎಸ್ . ಶಬರೀಶ್ ಹಾಗೂ ಶ್ರೀ . ಹುಲ್ಲುರಯ್ಯ ರವರು ದೂರುದಾರರಿಂದ 17 ಲಕ್ಷ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ

ದಿನಾಂಕ : 09 . 04 . 2019

ಬೆಂಗಳೂರು ನಗರದ ರಿಯಲ್ ಎಸ್ಟೇಟ್ ಏಜೆಂಟ್‌ರೊಬ್ಬರು 2013ನೇ ಇಸವಿಯಲ್ಲಿ ಮಾಗಡಿಯಲ್ಲಿ ಕೆಲವರಿಗೆ ನಿವೇಶನಗಳನ್ನು ಮಾರಾಟ ಮಾಡಿರುತ್ತಾರೆ . ಸದರಿ ನಿವೇಶನಗಳ ವಿಚಾರದಲ್ಲಿ ತಕರಾರುಗಳಿದ್ದ ಕಾರಣ ಖರೀದಿಸಿದ್ದ ನಿವೇಶನದಾರರು ತಮ್ಮ ನಿವೇಶನವನ್ನು ಮರುಮಾರಾಟ ಮಾಡಿಕೊಡುವಂತೆ ದೂರುದಾರರಿಗೆ ಕೋರಿರುತ್ತಾರೆ . ನಂತರ ಈ ಹಿಂದೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ . ವಿ . ಎಸ್ . ಶಬರೀಶ್ , ಪೊಲೀಸ್ ಇನ್ಸ್ಪೆಕ್ಟರ್ ರವರನ್ನು ನಿವೇಶನದಾರರು ಸಂಪರ್ಕಿಸಿದ್ದರು . ವಿಚಾರಣೆ ನಡೆಸಿದ ಶ್ರೀ . ವಿ . ಎಸ್ . ಶಬರೀಶ್ , ಪೊಲೀಸ್ ಇನ್ಸ್ ಪೆಕ್ಟರ್ ರವರು ಕೆಂಗೇರಿ ಸಂಚಾರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿರುತ್ತಾರೆ . ಆದರೂ ಸಹ ಶ್ರೀ . ವಿ . ಎಸ್ . ಶಬರೀಶ್ , ಪೋಲೀಸ್ ಇನ್ಸ್‌ಪೆಕ್ಟರ್‌ ಬೆಂಗಳೂರು ಹಾಗೂ ಶ್ರೀ . ಹುಲ್ಲುರಯ್ಯ , ಖಾಸಗಿ ವ್ಯಕ್ತಿ ರವರುಗಳು ದೂರುದಾರರಿಂದ ಮರುನೊಂದಣಿ ಮಾಡಿ ನಿವೇಶನದಾರರಿಗೆ ಹಣವನ್ನು ಹಿಂದಿರುಗಿಸುವಂತೆ ಹಾಗೂ ಇದರ ಜೊತೆಗೆ ತಮ್ಮಿಬ್ಬರುಗಳಿಗೆ 7 15 ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 09 . 04 . 2019 ರಂದು ಶ್ರೀ . ವಿ . ಎಸ್ . ಶಬರೀಶ್ ಹಾಗೂ ಶ್ರೀ . ಹುಲ್ಲುರಯ್ಯ ರವರು ದೂರುದಾರರಿಂದ 17 ಲಕ್ಷ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ . ಇವರಿಬ್ಬರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ಪ್ರಕರಣದ ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.