ಅಭಿವೃದ್ಧಿಯ ದೃಷ್ಟಿಯಿಂದ ಮಂಡ್ಯ ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾದ ಶ್ರೀ ನಿಖಿಲ್ ಕುಮಾರ ಸ್ವಾಮಿಯವರಿಗೆ ಬೆಂಬಲ–ಕರ್ನಾಟಕ ರಾಜ್ಯ ರೈತ ಸಂಘ

ರಾಜ್ಯ ಸಮಿತಿಯ ನಿರ್ಣಯದಂತೆ , ಪ್ರಸ್ತುತ ದೇಶದಲ್ಲಿಯೇ ಲೋಕ ಸಭಾ ಚುನಾವಣೆಯಲ್ಲಿ ಮುಂಚೂಣಿಯಲ್ಲಿರುವ ಸದ್ದು – ಗದ್ದಲ ಮಾಡುತ್ತಿರುವ ಕ್ಷೇತ್ರಗಳಲ್ಲಿ ಮಂಡ್ಯ ಲೋಕ ಸಭಾ ಕ್ಷೇತ್ರವು ಒಂದು , ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದೆ . ರಾಷ್ಟ್ರದ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಯಾರು ಬೇಕಾದರೂ ರಚಿಸಬಹುದು . ದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳಿವೆ . ಆದರೆ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ 19ಜೆಪಿ ಸ್ಪರ್ಧಿಸಿಲ್ಲ , ಉಳಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ . ಜೊತೆಗೆ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ . ಮಂಡ್ಯ ಲೋಕ ಸಭಾ ಕ್ಷೇತ್ರವು ರಾಜ್ಯದಲ್ಲಿಯೇ ಹೆಚ್ಚು ಕೃಷಿ ಆಧಾರಿತ ನೀರಾವರಿ ಪ್ರದೇಶವಾಗಿದೆ . ಮಂಡ್ಯ ಜಿಲ್ಲೆಯಲ್ಲಿ ಮುಖ್ಯವಾಗಿ ಭತ್ತ , ಕಬ್ಬು ಇನ್ನಿತರೆ ಬೆಳೆಗಳು ಬೆಳೆಯುವ ಜಿಲ್ಲೆಯಾಗಿದೆ . ಜೊತೆಗೆ ಮಂಡ್ಯ ಜಿಲ್ಲೆಯು ಲಕ್ಷಾಂತರ ಹೆಕ್ಟೇರ್ ಕೃಷಿಗೆ ಹಾಗೂ ಕುಡಿಯುವ ನೀರನ್ನು ಒದಗಿಸುವ ಕೃಷ್ಣ ರಾಜ ಸಾಗರ ಅಣೆಕಟ್ಟನ್ನು ಒಳಗೊಂಡಿದೆ ಹಾಗೂ ರೈತ ಚಳುವಳಿಯ ಪ್ರಮುಖ ಜಿಲ್ಲೆಯಾಗಿ ಹೊರಹೊಮ್ಮಿದೆ . ಬಂಧುಗಳೇ , ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದರೆ , ಕ್ಷೇತ್ರದ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ . ಆದ್ದರಿಂದ ಸಂಘದ ರಾಜ್ಯ ಸಮಿತಿಯಿಂದ ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ನಡೆಸುತ್ತಿರುವ ಆಡಳಿತದ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ . ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾದ ಶ್ರೀ ನಿಖಿಲ್ ಕುಮಾರಸ್ವಾಮಿಯವರಿಗೆ ಬೆಂಬಲಿಸಲು ರಾಜ್ಯ ಸಮಿತಿಯಿಂದ ನಿರ್ಧರಿಸಲಾಗಿದೆ . ಬಂಧುಗಳೇ , ಪ್ರಸ್ತುತ ಸಂಘವು 17 ಜಿಲ್ಲೆಗಳಲ್ಲಿ ಜಿಲ್ಲಾಧ್ಯಕ್ಷರನ್ನು ಒಳಗೊಂಡಿದೆ . ಕೂಡಲೇ ಜಾರಿಗೆ ಬರುವಂತೆ ಸಂಘದ ರಾಜ್ಯ , ಜಿಲ್ಲೆ , ತಾಲ್ಲೂಕು ಪಾದಾಧಿಕಾರಿಗಳು ಹಾಗೂ ಸದ್ಯಸರು ದಿನಾಂಕ 15 . 04 . 2019ರ ಸಂಜೆಯಿಂದ 16 , 17 , 04 . 2019ನೇ ದಿನಾಂಕದವರೆಗೆ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಮನೆ ಮನೆಗೂ ತೆರಳಿ ಮೈತ್ರಿ ಅಭ್ಯರ್ಥಿಯಾದ ಶ್ರೀ ನಿಲ್ ಕುಮಾರಸ್ವಾಮಿಯವರ ಪರವಾಗಿ ಪ್ರಚಾರ ನಡೆಸಲು ಆದೇಶಿಸಲಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.