ಸ್ನೇಹಿತನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಸ್ನೇಹಿತನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ , ಪಿರಾದುದಾರರಾದ ಲೋಕೇಶ್ ಎಂಬುವವರು ಲಗ್ಗೆರೆಯಲ್ಲಿ ಶೃಂಗಾರ್ ಇಂಟಿರೀಯರ್ಸ್ ಡೆಕೋರೆಟರ್ಸ್ ಎಂಬ ಅಂಗಡಿಯನ್ನು ಇಟ್ಟುಕೊಂಡಿದ್ದು , ಅವರ ಅಂಗಡಿಯಲ್ಲಿ ಈಗ್ಗೆ 3 ವರ್ಷಗಳಿಂದ ಉತ್ತರ ಪ್ರದೇಶ ರಾಜ್ಯದ ಗೋರಕ್‌ಪುರ್‌ದ ರಮೇಶ್ ಎಂಬುವವನು ಕೆಲವು ಹುಡುಗರನ್ನು ಇಟ್ಟುಕೊಂಡು ಪೇಂಟಿಂಗ್ ಕೆಲಸ ಮಾಡುತ್ತಿದ್ದನು . ಅವರುಗಳಿಗೆ ಉಳಿದು ಕೊಳ್ಳಲು ಲಗ್ಗೆರೆ , ಕೆಂಪೇಗೌಡಲೇಔಟ್‌ನಲ್ಲಿ ಪಿರಾದುದಾರರ ಕೆಲವು ಶೀಟ್ ಮನೆಗಳನ್ನು ನೀಡಿದ್ದರು . ದಿನಾಂಕ 15 – 01 – 2018 ರಂದು ಸಂಕ್ರಾಂತಿ ಹಬ್ಬವಿದ್ದು ಒಟ್ಟು 3 ದಿನ ರಜೆ ಇದ್ದರಿಂದ ಎಲ್ಲಾ ಕೆಲಸಗಾರರು ಮನೆಗಳಲ್ಲೇ ಇದ್ದರು .

ದಿನಾಂಕ 17 – 01 – 2019 ರಂದು ಪಿರಾದುದಾರರಾದ ಲೋಕೇಶ್ ರವರು ಕೆಲಸಗಾರರು ಉಳಿದುಕೊಂಡಿದ್ದ ಮನೆಯ ಹತ್ತಿರ ಹೋಗಿ ನೋಡಲಾಗಿ ಮನೆಗಳಿಗೆ ಬೀಗ ಹಾಕಿದ್ದು , ರಮೇಶ್ ಉಳಿದುಕೊಂಡಿದ್ದ ಮನೆಯ ಬಳಿ ಹೋದಾಗ ಕೆಟ್ಟ ವಾಸನೆ ಬರುತ್ತಿದ್ದು , ಬಾಗಿಲು ಹೊಡೆದು ನೋಡಿದಾಗ ರಮೇಶ್ ಸತ್ತು ಹೋಗಿದ್ದು , ಶವವು ಕೊಳೆತ ಸ್ಥಿತಿಯಲ್ಲಿತ್ತು . ಈ ಬಗ್ಗೆ ವಿದ್ಯಾದುದಾರರು ನೀಡಿದ ದೂರಿನ ಮೇರೆಗೆ ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯಲ್ಲಿ ಅನುಮಾಸ್ಪದ ಸಾವಿನ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಶ್ರೀ ಪ್ರಶಾಂತ್ ಎಂ . ತನಿಖೆಯನ್ನು ಕೈಗೊಂಡಿದ್ದು , ಮೃತ ರಮೇಶ್ ಜೊತೆಯಲ್ಲಿದ್ದ ಇತರೆ ಕೆಲಸಗಾರರಾದ ಗೌತಮ , ಕೃಷ್ಣ , ರಾಮು , ಮನೋಹರ್ ಪ್ರೇಮ್ ಚಂದ್ ವರ್ಮ ರವರು ತಲೆ ಮರೆಸಿಕೊಂಡಿದ್ದು , ಅವರುಗಳ ವಿಚಾರಣೆಗಾಗಿ ಪತ್ತೆ ಕಾರ್ಯದಲ್ಲಿದಾಗ ಸದರಿಯವರುಗಳನ್ನು ಕರೆ ತಂದು ವಿಚಾರಣೆ ಮಾಡಿದಾಗ ಆರೋಪಿಯಾದ ಮನೋಹರ್ ಪ್ರೇಮ್ ಚಂದ್ ವರ್ಮ , 33 ವರ್ಷ , ಕೋರಿಯಾ ಗ್ರಾಮ , ಲಾಲ್‌ಗಂಜ್ , ಬಸ್ತಿ ಜಿಲ್ಲೆ , ಉತ್ತರಪ್ರದೇಶ ರಾಜ್ಯ ಎಂಬುವನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ . ಸದರಿ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಮಹಾಲಕ್ಷ್ಮಿಲೇಔಟ್ ಪೊಲೀಸರು ಯಶಸ್ವಿಯಾಗಿರುತ್ತಾರೆ . ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೃತ ರಮೇಶ ಎಂಬುವನು ನನಗೆ ಮರ್ಯಾದೆ ಕೊಡುತ್ತಿರಲಿಲ್ಲ . ದಿನಾಂಕ 15 – 11 – 2019 ರಂದು ಎಲ್ಲಾ ಸ್ನೇಹಿತರು ಮೃತ ರಮೇಶ್ ಮನೆಯಲ್ಲಿ ಸೇರಿಸಿಕೊಂಡು ಕಂಠ ಪೂರ್ತಿ ಮದ್ಯ ಕುಡಿದ ಮೇಲೆ ಮೃತ ರಮೇಶ್‌ನನ್ನು ನಾನು ರಾಡಿನಿಂದ ಹೊಡೆದು ಮತ್ತು ಬಾಟಲಿಯಿಂದ ಚುಚ್ಚಿ ಕೊಲೆ ಮಾಡಿರುವುದಾಗಿ ತಿಳಿಸಿರುತ್ತಾನೆ . ಈ ಪ್ರಕರಣದಲ್ಲಿ ಶ್ರೀ ವಿ . ಧನಂಜಯ , ಎಸಿಪಿ , ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಎಂ . ಪ್ರಶಾಂತ್ , ಪೊಲೀಸ್ ಇನ್ಸ್ಪೆಕ್ಟರ್ , ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.