ಕಾಂಗ್ರೆಸ್ ಹಾಗು ಜೆ ಡಿ ಯಸ್ ಪಕ್ಷದ ಅಭ್ಯರ್ಥಿಗಳಿಗೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಬಲಿಸಲು ರಾಜ್ಯದ ಕ್ರೈಸ್ತರ ಒಮ್ಮತದಿಂದ ಕರ್ನಾಟಕ ರಾಜ್ಯ ಕ್ರೈಸ್ತರ ಸಂಯುಕ್ತ ರಂಗವು ಬೆಂಬಲಿಸುತ್ತದೆ

ಸಮಾನತೆಯ ಹರಿಕಾರ , ಸಂವಿಧಾನ ಶಿಲ್ಪಿ ಡಾ . ಬಾಬಾಸಾಹೇಬ ಅಂಬೇಡ್ಕರವರು ರಚಿಸಿದ ಭಾರತದ ಜಾತ್ಯಾತೀತ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿರುವ ಪ್ರಧಾನಮಂತ್ರಿಗಳಾದ , ಮಾನ್ಯ ಶ್ರೀ ನರೇಂದ್ರಮೋದಿ ಜೀ ನೇತೃತ್ವದ ಕೇಂದ್ರ ಬಿ ಜೆ ಪಿ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲವಾಗಿದ್ದು , ತನ್ನ ಹುಳುಕುಗಳನ್ನು ಮುಚ್ಚಿಡಲು ಭಾವನಾತ್ಮಕ ವಿಷಯಗಳಿಗೆ ಜೋತು ಬಿದಿರುವುದಲ್ಲದೆ ವಿನಾಕಾರಣ ಅಲ್ಪಸಂಖ್ಯಾತರ ಮೇಲೆ ದ್ವೇಷ ಕಕ್ಕುತ್ತಿರುವುದನ್ನು ಕರ್ನಾಟಕ ರಾಜ್ಯ ಕ್ರೈಸ್ತರ ಸಂಯುಕ್ತ ರಂಗ ತೀವ್ರವಾಗಿ ಖಂಡಿಸುತ್ತದೆ . ಖಂಡನೀಯ ವಿಷಯಗಳು :

1 , ಲೋಕಪಾಲ ಬಿಲ್ ಮಾಡುತ್ತೇವೆ ಎಂದು ಹೇಳಿ ಇದುವರೆವಿಗೂ ಜಾರಿಗೆ ತರದೇ ಇರುವುದು .

2 . ವಿದೇಶದಿಂದ ಕಪ್ಪುಹಣ ತರುತ್ತೇವೆಂದು ಆಶ್ವಾಸನೆ ನೀಡಿ ಇದುವರೆವಿಗೂ ತರದೇ ಇರುವ ಬಗ್ಗೆ .

3 , ಮಹಿಳಾ ಬಿಲ್ ಬಗ್ಗೆ ಯೋಚನೆ ಮೂಡದೇ ಇರುವುದು ,

4 , ರೂ : 15 . 00 ಲಕ್ಷ ಒಬ್ಬೊಬರ ಖಾತೆಗೆ ಹಣವನ್ನು ಹಾಕುತ್ತವೆಂದು ಆಶ್ವಾಸನೆ ನೀಡಿ ಅದನ್ನು ಕಾರ್ಯರೂಪಕ್ಕೆ ತರದೇ ಇರುವುದು .

5 , ಎರಡು ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆಂದು ಹೇಳಿಕೆ ನೀಡಿ ಉದ್ಯೋಗ ತರದೇ ಇರಿವುದು , ಹಾಗು ಉದ್ಯೋಗ ಇರುವರು ಕೂಡ ಉದ್ಯೋಗವನ್ನು ಕಳೆದುಕೊಂಡು ಈ ದೇಶದಲ್ಲಿ ನಿರುದ್ಯೋಗಿಯಾಗಿರುತ್ತಾರೆ .

6 . ದೇಶದಲ್ಲಿ ಧರ್ಮದ ಹೆಸರಿನಲ್ಲಿ ಕೋಮು ಗಲಭೆಗಳು ಸೃಷ್ಟಿಯಾಗಿ ಮಾರಣ ಹೋಮ ನಡೆಯುತ್ತಿರುವುದು ,

7 , ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೆ ಏರಿರುವುದು .

8 . ದಿನ ಬಳಕೆಯ ಅಡುಗೆ ಅನಿಲ ಗಗನಕ್ಕೆ ಏರಿರುವುದು .

9.ಉತ್ತರ ಭಾರತದಲ್ಲಿ ದಲಿತರ ಮೇಲೆ ಅನಾಮಾನುಷ ಕೃತ್ಯಗಳನ್ನು ಮಾಡುತ್ತಿರುವ ಬಹಳಷ್ಟು ಪ್ರಕರಣಗಳನ್ನು ನೋಡಿ ಭೀತಿಯನ್ನು ಉಂಟು ಮಾಡಿರುವುದು .

10 . ಸ್ವಚ್ಛ ಭಾರತದಡಿಯಲ್ಲಿ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳು , ವ್ಯಾಪಾರದ ಗಣ್ಯ ವ್ಯಕ್ತಿಗಳು ಮತ್ತು ಸ್ಥಳೀಯ ಕಾರ್ಪೊರೇಟರ್ಗಳು ಟಿ . ವಿ . ಮಾಧ್ಯಮಗಳಲ್ಲಿ ಪೊರಕೆಗಳನ್ನು ಹಿಡಿದುಕೊಂಡು ಪ್ರದರ್ಶನ ನೀಡಿರುವುದು .

11 . ಜಿ ಯಸ್ ಟಿ ಇಂದ ಹಲವಾರು ದೊಡ್ಡ ದೊಡ್ಡ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳು ತುಂಬಾ ಕಷ್ಟ – ನಷ್ಟಗಳಿಗೆ ಸಿಲುಕಿ ಜೀವನ ಸಾಗಿಸುತಿದ್ದಾರೆ . ಅವರು ಹೇಳಿರುವ 11 ಹೇಳಿಕೆಗಳು ಕಾರ್ಯರೂಪಕ್ಕೆ ಬಾರದೆ ಇದ್ದು ಬರಿ ಆಶ್ವಾಸನೆಗಳಿಗೆ ಸೀಮಿತವಾಗಿದೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ . ಜಾತ್ಯಾತೀತತೆ ಕೋಮು ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ಕಾಂಗ್ರೆಸ್ ಪಕ್ಷವು ಕ್ರೈಸ್ತರಿಗೆ ಸೂಕ್ತ ಸ್ಥಾನಮಾನ ಒದಗಿಸಿರುವುದಲ್ಲದೆ , ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಮತ್ತು ಜನತಾದಳ ಜಾತ್ಯಾತೀತ ಪಕ್ಷಗಳ ಮೈತ್ರಿ ಸರ್ಕಾರವು ಈ ಬಾರಿಯ ಬಜೆಟಿನಲ್ಲಿ ಕೈಸ ಅಭಿರುದ್ದಿ ನಿಗಮ ” ಘೋಷಿಸಿ 200 ಕೋಟಿ ರೂಪಾಯಿ ಅನುದಾನ ಒದಗಿಸಿರುವುದನ್ನು ರಂಗವು ಸ್ವಾಗತಿಸುತದ್ದೆ . . ಈ ಬಾರಿಯ ಸಂಸತ್ ಚುನಾವಣೆಯಲ್ಲಿ ಬಿ ಜೆ ಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಇರುವುದರಿಂದ , ಸಂವಿಧಾನ ವಿರೋಧಿ ಬಿ ಜೆ ಪಿ ಯನ್ನು ಸೋಲಿಸಲು ಜಾತ್ಯಾತೀತ ಮತಗಳ ಕ್ರೂಡೀಕರಣ ಅನಿವಾರ್ಯವಾಗಿರುವುದರಿಂದ ಪಕ್ಷೇತರ ಅಭ್ಯರ್ಥಿಗಳು ಶ್ರೀ . ಪ್ರಕಾಶ್ ರಾಜ್ ಮತ್ತು ಶ್ರೀಮತಿ . ಸುಮಲತಾ , ಒಳಗೊಂಡಂತೆ ಯಾವುದೇ ಪಕ್ಷೇತರ ಅಭ್ಯರ್ಥಿಗಳಿಗೆ ಮತ ಹಾಕದಿರಲು ಮತ್ತು ಕಾಂಗ್ರೆಸ್ ಹಾಗು ಜೆ ಡಿ ಯಸ್ ಪಕ್ಷದ ಅಭ್ಯರ್ಥಿಗಳಿಗೆ ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಬಲಿಸಲು ರಾಜ್ಯದ ಕ್ರೈಸ್ತರು ಒಮ್ಮತದಿಂದ ಕರ್ನಾಟಕ ರಾಜ್ಯ ಕ್ರೈಸ್ತರ ಸಂಯುಕ್ತ ರಂಗವು ಬೆಂಬಲಿಸುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.