*ನೋಟಾ ( NOTA ) ಬೇಡ* – ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

ಬೆಂಗಳೂರು : ರಾಷ್ಟ್ರದ ಬಗ್ಗೆ ಸಂವೇದನಾಶೀಲರಾಗಿರುವಂಥ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹತ್ವವನ್ನು ಹೆಚ್ಚಿಸುವ ಕರ್ತವ್ಯ ನಿರ್ವಹಿಸುವಂತಹ , ದೇಶವನ್ನು ಆರ್ಥಿಕ ಸಕ್ಷಮತೆ ಕಡೆಗೆ ಒಯ್ಯುವಂಥ , ಭ್ರಷ್ಟಾಚಾರ ರಹಿತ ಸರಕಾರವನ್ನು ನೀಡುವಂತಹ , ಸಮರ್ಥ ನೇತೃತ್ವವನ್ನು ನೀಡುವಂತಹ ಪಕ್ಷಕ್ಕೆ ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ಮತದಾನ ಮಾಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಆಗ್ರಹಿಸುತ್ತದೆ . ಪ್ರಸ್ತುತ ಸರಕಾರಗಳು ಬ್ರಾಹ್ಮಣ ಸಮಾಜಕ್ಕೆ ಸಮಾನ ನ್ಯಾಯ ನೀಡಿಲ್ಲ ಅದಕ್ಕಾಗಿ ಬ್ರಾಹ್ಮಣ ಸಮಾಜದಲ್ಲಿ ಅಸಮಾಧಾನವಿದೆ . ಈ ರಾಷ್ಟ್ರಕಲ್ಯಾಣ ಮಹಾಯಜ್ಯದಲ್ಲಿ ನಮ್ಮ ಅಸಮಾಧಾನ ಹೊರಗೆ ಆಕಲಿಕ್ಕೆ ಸರಿಯಾದ ಸಮಯವಿಲ್ಲ . ರಾಷ್ಟ್ರ , ಸುರಕ್ಷಿತವಾಗಿದ್ದಲ್ಲಿ ಮಾತ್ರ ನಾವು ನಮ್ಮಗಳ ಬೇಡಿಕೆಗಳ ಬಗ್ಗೆ ಮಾತನಾಡಬಹುದು ನಮ್ಮ ಅಸಮಾಧಾನ ಮುಂಬರುವ ಅಂತರ್ಗತ ಚುನಾವಣೆಗಳಾದ ವಿಧಾನಸಭೆ ಚುನಾವಣೆಗಳಲ್ಲಿ ವ್ಯಕ್ತ ಪಡಿಸಬಹುದು ಹೀಗಾಗಿ ಈ ಲೋಕಸಭೆ ಚುನಾವಣೆ ೨೦೧೯ರಲ್ಲಿ ನಮ್ಮ ಅಸಮಾಧಾನಗಳನ್ನು ಬದಿಗಿರಿಸಿ ನೋಟಾ ( NOTA ) ವೋಟು ಹಾಕದೆ ಉಪಲಭ್ಯವಿರುವ ಪರ್ಯಾಯಗಳಲ್ಲಿ ಒಳ್ಳೆಯ ಪರ್ಯಾಯದ ಹಾಗೂ ಬ್ರಾಹ್ಮಣ ಸಮಾಜದ ಬಗ್ಗೆ ಅನುಕಂಪ ಹೊಂದಿರುವಂಥ ಒಳ್ಳೆಯ ಅಭ್ಯರ್ಥಿಗೆ ತಮ್ಮ ಮತವನ್ನು ನೀಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಉಪಾಧ್ಯಕ್ಷರಾದಂತಹ ಡಾ | | ಸುಬ್ರಮಣ್ಯ ಶರ್ಮಯವರು ಆಹ್ವಾನಿಸಿದ್ಯಾರೆ .

ಈ ಬಗ್ಗೆ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಗುಜರಾತ್ , ಗೋವಾ , ಕರ್ನಾಟಕ , ಮಧ್ಯಪ್ರದೇಶ , ರಾಜಸ್ತಾನ , ಹಾಗೂ ಛತ್ತೀಸಘಡದ ವಿಧಾನಸಭೆಯ ಚುನಾವಣೆಗಳಲ್ಲಿ ನೋಟಾ ( NOTA ) ಮತವನ್ನು ಚಲಾಯಿಸಲು ಆಹ್ವಾನಿಸಲಾಗಿತ್ತು , ಅದರ ಪರಿಣಾಮ ವಿಪರೀತವಾಗಿತ್ತು . ಹಿಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜ್ಯದ ರಾಜ್ಯ ಸರ್ಕಾರಗಳು ಎಲ್ಲರಿಗು ಸಮಾನ ನ್ಯಾಯ ಕೊಡುವಲ್ಲಿ ವಿಫಲವಾಗಿದೆ . ಸಾಮಾನ ನ್ಯಾಯಕ್ಕಾಗಿ ಹೋರಾಟ ಮಾಡಿದರು ಅದರ ಬಗ್ಗೆ ಯಾವ ಸರ್ಕಾರಗಳು ಗಮನ ಹರಿಸಿಲ್ಲ . ಎಲ್ಲ ರಾಜಕೀಯ ಪಕ್ಷಗಳು ಕೇವಲ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿಸಿಕೊಂಡಿವೆ , ಹೀಗಾಗಿ ನಮ್ಮ ಎದುರಿಗೆ ಯೋಗ್ಯ ಪರ್ಯಾಯಗಳು ಇದಕ್ಕಾಗಿ ನಾವು ನೋಟಾ ( NOTA ) ಓಟನ್ನು ಚಲಾಯಿಸಲು ಆಖ್ಯಾನಿಸಿದೆವು . ಅದಕ್ಕೆ ಕೆಲ ಪ್ರಮಾಣದಲ್ಲಿ ಪ್ರತಿಸಾದ ದೊರಕಿದೆ ಹಾಗೂ ಬೇರೆತರನಾದ ಪರಿಣಾಮಗಳು ಕಂಡುಬಂದಿದೆ . ಬ್ರಾಹ್ಮಣ ಸಮಾಜವು ಸಂಖ್ಯಾತ್ಮಕ ದೃಷ್ಟಿಯಲ್ಲಿ ಕಡಿಮೆಯಾಗಿದೆಯೆಂದು ತಿಳಿದು ಈ ಸಮಾಜದ ಬಗ್ಗೆ ಬೇಧ , ಭಾವದಿಂದ ವ್ಯವಹರಿಸಲಾಗುತ್ತಿದೆ . ಇದನ್ನು ಅರಿತು ನಾವು ನಮ್ಮ ಅಸಮಾಧಾನವನ್ನು ನೋಟಾದ ಮೂಲಕ ವ್ಯಕ್ತಪಡಿಸಿದ್ದೇವೆ . ಆದರೆ ಮುಂಬರುವ ಲೋಕಸಭಾ ಚುನಾವಣೆ ೨೦೧೯ ರಾಷ್ಟ್ರದ ಭವಿಷ , ನಿರೂಪಿಸುವಂಥ ಚುನಾವಣಾ ನಮ್ಮ ಪೂರ್ವಜರು ಈ ದೇಶದ ರಾಷ್ಟ್ರಹಿತ ಹಾಗೂ ರಾಷ್ಟ್ರ ಕಲ್ಯಾಣದ ಕಾರ್ಯಕ್ಕಾಗಿ ಸಾಕಷ್ಟು ತ್ಯಾಗ ಹಾಗೂ ಬಲಿದಾನವನ್ನು ಮಾಡಿದ್ಯಾರೆ . ನಾವುಗಳು ಸಮಾಜದ ಹಾಗೂ ರಾಷ್ಟ್ರಕಲ್ಯಾಣದ ವಿಷಯ ಬಂದಾಗ ರಾಷ್ಟ್ರ ಕಲ್ಯಾಣಕ್ಕೆ ಹೆಚ್ಚಿನ ಮಹತ್ವ ಕೊಡುವಂತಹ ಸಮಾಜ ನಮ್ಮದು .

ನಮ್ಮ ಸಮಾಜದ ವ್ಯಕ್ತಿಗತ ಹಿತಾಶಕ್ತಿಗಿಂತ ರಾಷ್ಟ್ರ ಸನ್ಮಾನ ಹೆಚ್ಚಿನದು ಎಂದು ನಂಬಿದವರು ನಾವು . ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹಾಗೂ ಗರಿಮೆಯನ್ನು ಹೆಚ್ಚಿಸುವಂತಹ ಒಳ್ಳೆಯ ಪಕ್ಷಕ್ಕೆ ಹಾಗೂ ಒಳ್ಳೆಯ ಅಭ್ಯರ್ಥಿಗಳಿಗೆ ನಿಮ್ಮ ಮತವನ್ನು ನೀಡಿ . ಒಂದು ಸುಭದ್ರಾ ಸರ್ಕಾರವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವುಗಳು ಸಹಭಾಗಿಗಳು ಆಗಬೇಕು . ನಾವುಗಳು ನಮ್ಮ ಸಮಾಜಹಿತ ಹಾಗೂ ರಾಷ್ಟ್ರಕಲ್ಯಾಣ ವಿಷಯಗಳು ಒಂದೇ ಸಮಯದಲ್ಲಿ ಎದುರಾದರೆ ನಾವು ರಾಷ್ಟ್ರಕಲ್ಯಾಣ ಕಾರ್ಯವನ್ನೇ ಸ್ವೀಕರಿಸುತ್ತೇವೆ . ರಾಷ್ಟ್ರಹಿತದ ಕೆಲಸದಲ್ಲಿ ನಾವುಗಳು ಯಾವಾಗಲು ತತ್ಪರವಾಗಿರುತ್ತೇವೆ . ಇಡೀ ನಮ್ಮ ಪೂರ್ವಜರು ತೋರಿಸಿಕೊಟ್ಟಂತಹ ಮಾರ್ಗ , ಅದನ್ನೇ ನಾವು ನಿರ್ವಹಿಸಬೇಕೆಂದು ಎಲ್ಲಾ ಸಮಾಜ ಬಂಧುಗಳಲ್ಲಿ ಕಳಕಳಿಪೂರ್ವಕವಾಗಿ ಕೇಳಿಕೊಳ್ಳುತ್ತೇವೆ .

– ಡಾ | | ಸುಬ್ರಮಣ್ಯ ಶರ್ಮ

ಉಪಾಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.