ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವುದು ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ , ಘನತೆ ಹೆಚ್ಚಾಗಲು ಕಾರಣವಾಗಲಿದೆ . ಹಾಗಾಗಿ ಕಡ್ಡಾಯ ಮತದಾನ ಮಾಡಿರಿ

ಈ ದೇಶದಲ್ಲಿ ಬಹುತೇಕ ವಿದ್ಯಾವಂತರು , ಉದ್ಯಮಿಗಳು , ಶ್ರೀಮಂತ ವರ್ಗದವರುಗಳೇ ಹೆಚ್ಚು ಮತದಾನ ಮಾಡಲು ಮುಂದೆ ಬರುತ್ತಿಲ್ಲ ! ಗ್ರಾಮಾಂತರ ಪ್ರದೇಶದಲ್ಲಿಯೇ ರೈತರು , ಬಡ ವರ್ಗ , ಅವಿದ್ಯಾವಂತರೇ ಹೆಚ್ಚಾಗಿ ಮತದಾನ ಮಾಡುತ್ತಿದ್ದಾರೆ . ನಮ್ಮ ಭಾರತೀಯ ಪ್ರಜೆಗಳಾದ ಪ್ರತಿಯೊಬ್ಬರೂ ಕಡ್ಡಾಯ ಮತದಾನ ಮಾಡುವುದು ಪ್ರಜಾಪ್ರಭುತ್ವಕ್ಕೆ ಸಲ್ಲುವ ಗೌರವ , ಘನತೆ ಹೆಚ್ಚಾಗಲು ಕಾರಣವಾಗಲಿದೆ . ಹಾಗಾಗಿ ಕಡ್ಡಾಯ ಮತದಾನ ಮಾಡಿರಿ , ವಿದ್ಯಾವಂತರು , ಉದ್ಯಮಿಗಳು , ಶ್ರೀಮಂತ ವರ್ಗದವರುಗಳು ಸರ್ಕಾರದ ಸೌಲತ್ತುಗಳನ್ನು ಹೆಚ್ಚಾಗಿ ಬಳಸುತ್ತಿದ್ದು ಇಂಥವರೇ ಮತದಾನಕ್ಕೆ ಮುಂದಾಗದಿರುವುದು , ನಮ್ಮ ದೇಶದ ದುರಂತವೆಂದರೆ ತಪ್ಪಾಗಲಾರದು . ಪ್ರಜೆಗಳೇ ಪ್ರಭುಗಳು . ಪ್ರಜಾ ಪ್ರತಿನಿಧಿಗಳು ಸೇವಕರು ಇದ್ದಂತೆ . ನಾಯಿ ಬಾಲ ಅಲ್ಲಾಡಿಸಬೇಕೇ ವಿನಃ , ಬಾಲವೇ ನಾಯಿಯನ್ನು ಅಲ್ಲಾಡಿಸಿದಂತಾಗುತ್ತಿದೆ , ಈ ನಮ್ಮ ಪ್ರಜಾಪ್ರತಿನಿಧಿಗಳ ಆಡಳಿತ ವೈಖರಿ . ಈ ನಮ್ಮ ದೇಶದಲ್ಲಿ ಈಗ 134 ಕೋಟಿ ಜನರಿದ್ದು , ಈ ನಾಡಿನಲ್ಲಿ 7 ಕೋಟಿ ಜನರದ್ದು , ಒಬ್ಬ ಪ್ರಧಾನಮಂತ್ರಿ ಒಬ್ಬ ಮುಖ್ಯಮಂತ್ರಿ , ಕೋಟ್ಯಾಂತರ ಜನರನ್ನು ನಿತ್ಯ ಜೀವನದಲ್ಲಿ , ಒಂದಲ್ಲಾ ಒಂದು ರೀತಿ ಅಲ್ಲಾಡಿಸಿದ್ದಾರೆ , ಅಲ್ಲಾಡಿಸುತ್ತಲೇ ಇದ್ದಾರೆ . ಅಂತಹ ನಿಯಮಗಳನ್ನ ಏಕಾಏಕಿ ಜಾರಿ ಮಾಡುತ್ತಿದ್ದಾರೆ ! ಕೇಂದ್ರಾಡಳಿತದಲ್ಲಿ ಭ್ರಷ್ಟಾಚಾರ ಇಲ್ಲದಿರಬಹುದು . ಆದರೆ ರಾಷ್ಟ್ರದ ರಾಜ್ಯಗಳ , ಸಾರ್ವಜನಿಕರ ಕಛೇರಿಗಳಲ್ಲಿ ಭ್ರಷ್ಟಾಚಾರ ಹೇಳತೀರದಂತಾಗಿ ಸಾಗಿದೆ . ನಮ್ಮ ಕಡೆ ತಿರುಗಿ ನೋಡುವುದಕ್ಕೂ ಲಂಚ ನೀಡಲೇಬೇಕಾದ ಅನಿವಾರ್ಯವಾಗಿದೆ . ಇದಕ್ಕೆಲ್ಲ ನಾವೆಲ್ಲ ಆಯ್ಕೆ ಮಾಡಿ ಕಳಿಸುವ ಪ್ರಜಾಪ್ರತಿನಿಧಿಗಳೇ ಪ್ರತ್ಯಕ್ಷ ಸಾಕ್ಷಿಯಾಗಿದ್ದು , ನಾಳೆಯಿಂದ ನಡೆಯುವ ಲೋಕಸಭಾ ಚುನಾವಣೆಗಳಲ್ಲಿ ಸೂಕ್ತ , ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ನಮ್ಮ ನಿಮ್ಮೆಲ್ಲರ ಹೊಣೆಗಾರಿಕೆಯಾಗಿದೆ . ಯಾವ ಅಭ್ಯರ್ಥಿಗೆ ಕಿಂಚಿತ್ತಾದರೂ ಸಾಮಾಜಿಕ ಕಾಳಜಿ ಕಳಕಳಿ ಇದೆ . ಯಾರು ಚಿಂತಿಸಿದ್ದಾರೆ , ಮಾತಾಡಿದ್ದಾರೆ . ಹೋರಾಡಿದ್ದಾರೆಂಬುದನ್ನು ಗಂಭೀರವಾಗಿ ಪರಿಶೀಲಿಸಿರಿ . ಇದನ್ನು ಹೊರತು ಜಾತಿ , ಭಾಷೆ , ಮತ ಧರ್ಮ , ಅನುವಂಶೀಯತೆ , ಕುಟುಂಬ ರಾಜಕಾರಣಿಗಳನ್ನು ತಿರಸ್ಕರಿಸಿರಿ , ಯಾರು ಜನರಿಗೆ ಹೆಚ್ಚು ಕೈಗೆ ನಿಲುಕುತ್ತಾರೆ , ಸ್ಪಂಧಿಸುತ್ತಾರೆ , ಸದನದಲ್ಲಿ ಭಾಗಿಯಾಗಿ ಜನರ ಬಗ್ಗೆ ಧ್ವನಿ ಎತ್ತುತ್ತಾರೋ ಅಂಥವರನ್ನೇ ಈ ಲೋಕಸಭೆಗೆ ಆಯ್ಕೆ ಮಾಡಿರೆಂದು ನಮ್ಮ ದೇಶದ ಮತದಾರರಲ್ಲಿ ಈ ನಮ್ಮ ರಂಗದ ಸಾಮಾಜಿಕ ಕಾಳಜಿ ಕಳಕಳಿಯಾಗಿದೆ .

— ಟಿ . ಎಲ್ . ರಂಗನಾಥ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.