* ೧೦೦ % ಕಡ್ಡಾಯ ಮತದಾನ ಅಭಿಯಾನ * – ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ

ಮುಂಬರುವ ಲೋಕಸಭೆ ಚುನಾವಣೆ ೨೦೧೯ರಲ್ಲಿ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘದ ವತಿಯಿಂದ ೧೦೦ % ಕಡ್ಡಾಯ ಮತದಾನ ಅಭಿಯಾನವನ್ನು ಆರಂಭಿಸಲಾಗಿದೆ . ಈ ಚುನಾವಣೆಯಲ್ಲಿ ರಾಷ್ಟ್ರಕಾರ್ಯದಲ್ಲಿ ಸಂವೇದನಶೀಲವಾಗಿರುವಂಥ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಹತ್ವವನ್ನು ಹೆಚ್ಚಿಸುವ ಕಾರ್ಯ ನಿರ್ವಹಿಸುವ ಹಾಗೂ ದೇಶವನ್ನು ಆರ್ಥಿಕ ಸಕ್ಷಮತೆ ಕಡೆಗೆ ಒಯುವಂಥ ಭ್ರಷ್ಟಾಚಾರ ವಿರಹಿತ ಸಮರ್ಥ ನೇತೃತ್ಯವನ್ನು ನೀಡುವಂತ , ತಮಗೆ ಯೋಗ್ಯವೆನುಸುವ ಪಕ್ಷಕ್ಕೆ ಹಾಗೂ ಅಭ್ಯರ್ಥಿಗಳಿಗೆ ಪ್ರತಿಯೊಬ್ಬರೂ ಕಡ್ಯಾಯವಾಗಿ ಮತದಾನವನ್ನು ಮಾಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ಆಗ್ರಹಿಸುತ್ತದೆ . ಕೈಚೀಲ , ಭಿತ್ತಿಪತ್ರಿಕೆ , ಬ್ಯಾನರ್ , ಚಿಕ್ಕ ಸಭೆಗಳ ಮುಖಾಂತರ ಹಾಗೂ ಚುನಾವಣೆಯ ದಿನ ಅಸಹಾಯಕ ಮತದಾರರಿಗೆ ಮಾತಕಟ್ಟೆಗಳವರೆಗೆ ಕೊಂಡೊಯುವಂತಹ ವ್ಯವಸ್ಥೆಗಳ ಮುಖಾಂತರ ಪತ್ರಿಕಾ ವರಧಿಗಳ ಮುಖಾಂತರ ಸಮಸ್ತ ಜನತೆಗೆ ಕಡ್ಯಾಯವಾಗಿ ಮತದಾನ ಮಾಡಲಿಕ್ಕೆ ಅನವು ಮಾಡಿಕೊಡಲಾಗುತ್ತದೆ . ಮಹಾರಾಷ್ಟ್ರ , ಕರ್ನಾಟಕ ದಿಲ್ಲಿ , ಮಧ್ಯಪ್ರದೇಶ , ಗುಜರಾತ್ , ಉತ್ತರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ೧೦೦ % ಕಡ್ಡಾಯ ಮತದಾನ ಅಭಿಯಾನವನ್ನು ನಡೆಸಲಾಗುತ್ತದೆ .

ಮಹಾಸಂಘದ ಅಧ್ಯಕ್ಷ ಡಾ | | ಗೋವಿಂದ ಕುಲಕರ್ಣಿ ಪುಣೆ , ಉಪಾಧ್ಯಕ್ಷರಾದ ಸುಭಾಷ್ ತಿವಾರಿ ದಿಲ್ಲಿ , ಡಾ | | ಸುಭಮಣ ಶರ್ಮ ಬೆಂಗಳೂರು , ರಮಣಾಚಾರ್ಯ ಹೈದರಾಬಾದ್ , ಸಿ ವಿ ಗೋಪಿನಾಥ್ ಮೈಸೂರು ಕರ್ನಾಟಕ ಪ್ರದೇಶ ಅಧ್ಯಕ್ಷ , ನರೇಂದ್ರ ದಧಿಚಿ ಲಕ್ಕೂ , ನರೇಂದ್ರ ತ್ರಿವೇದಿ ಅಹಮದಾಬಾದ್ ಹಾಗೂ ಅನುವ ಚೋಭೆ ಭೋಪಾಲ್ ಇವರುಗಳು ರಾಷ್ಟ್ರಾದ್ಯಂತ ಪ್ರವಾಸ ಮಾಡಿ ಈ ಅಭಿಯಾನವನ್ನು ಯಶಸ್ವಿಯಾಗಿಸಲಿಕ್ಕಾಗಿ ಪ್ರಯತ್ನಿಸುತ್ತಿದ್ದಾರೆ . ವಿಷೇಶತೆ : ಕರ್ನಾಟಕದಲ್ಲಿ ಗಿರೀಶ್ ನಿಲಗುಂದ ವಿಜಯಪುರ , ವಿಶ್ವನಾಥ ಜೋಶಿ ಬೆಂಗಳೂರು , ಗೋಪಾಲ್ ಕುಲಕರ್ಣಿ ಧಾರವಾಡ , ರವಿ ಲತುರ್ಕರ್ ಗುಲ್ಬರ್ಗ , ಗುರುರಾಜ ಕುಲಕರ್ಣಿ ಬೆಳಗಾವಿ , ವಸಂತ ನಾಡಿಗ ಶಿವಮೊಗ್ಯ , ಗೋಪಿನಾಥ ಬೆಲದೊಣೆ ಬಳ್ಳಾರಿ , ಇವರುಗಳಿಗೆ ಜವಾಬ್ದಾರಿ ಕೊಡಲಾಗಿದೆ . ರಾಷ್ಟ್ರ , ರಾಜ್ಯ , ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲ ಪದಾಧಿಕಾರಿಗಳನ್ನು ೧೦೦ % ಕಡ್ಡಾಯ ಮತದಾನ ಅಭಿಯಾನದ ಜವಾಬ್ದಾರಿಗಳನ್ನು ನೀಡಲಾಗಿದೆ ಹಾಗೂ ಪದಾಧಿಕಾರಿಗಳನ್ನು ಅಭಿಯಾನದಲ್ಲಿ ತೊಡಗಿಸಲಾಗಿದೆ . ರಾಷ್ಟ್ರದ ಸಮಸ್ತ ಮತದಾರರಲ್ಲಿ ಈ ಪ್ರಕಟಣೆಯ ಮೂಲಕ ೧೦೦ % ಜನತೆ ಕಡ್ರಾಯವಾಗಿ ಮತದಾನವನ್ನು ಮಾಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘವು ವಿನಂತಿಸಿಕೊಳ್ಳುತ್ತದೆ .

– ಡಾ | | ಸುಬ್ರಮಣ್ಯ ಶರ್ಮ

ಉಪಾಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s