ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಬೆಂಗಳೂರು ಕರಗ ಹಬ್ಬ ನಡೆಯುವ ಪ್ರಯುಕ್ತ , ಕರಗ ವೀಕ್ಷಿಸಲು ಸುಗಮ ವಾಹನ ಸಂಚಾರ ಮತ್ತು ಪಾದಾಚಾರಿಗಳ ಹಿತದೃಷ್ಟಿಯಿಂದ ಸಂಚಾರ ಮಾರ್ಗ ಬದಲವಣೆ

19 / 04 / 2019 ರಂದು ಬೆಂಗಳೂರು ನಗರ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಬೆಂಗಳೂರು ಕರಗ ಹಬ್ಬ ನಡೆಯುವ ಪ್ರಯುಕ್ತ , ಕರಗ ವೀಕ್ಷಿಸಲು ಹಾಗೂ ಪೂಜೆ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯವ್ಯಕ್ತಿಗಳು , ಭಕ್ತಾಧಿಗಳು , ಮತ್ತು ಸಾರ್ವಜನಿಕರು , ಆಗಮಿಸಲಿರುವುದರಿಂದ ಸುಗಮ ವಾಹನ ಸಂಚಾರ ಮತ್ತು ಪಾದಾಚಾರಿಗಳ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ಮಾರ್ಗ ಬದಲಾವಣೆ ಹಾಗೂ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ . ಸಂಚಾರ ಮಾರ್ಗ ಬದಲವಣೆ : 1 . ಎಸ್ . ಜೆ . ಪಿ . ರಸ್ತೆಯಲ್ಲಿ , ಸಿಟಿ ಮಾರ್ಕೆಟ್ ಕಡೆಯಿಂದ ಬಂದು ಎಸ್ . ಜೆ . ಪಿ . ಜಂಕ್ಷನ್ ಬಳಿ ಪೈಲ್ವಾನ್ ಕೃಷ್ಣಪ್ಪ ರಸ್ತೆಗೆ ಎಡ ತಿರುವು ಪಡೆಯುತ್ತಿದ್ದ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ನಿರ್ಭಂಧಿಸಿದ್ದು , ಈ ವಾಹನಗಳು ಡೌನ್‌ಹಾಲ್ ವೃತ್ತ – ಜೆ ಸಿ . ರಸ್ತೆ ಮೂಲಕ ಮುಂದೆ ಸಾಗಬಹುದಾಗಿದೆ .

ಕೆಳಕಂಡ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ . 1 . ಪೈಲ್ವಾನ್ ಕೃಷ್ಣಪ್ಪ ಲೇನ್ 2 . ಓ . ಟಿ . ಸಿ . ರಸ್ತೆ 3 , ನಗರತಪೇಟೆ ಮುಖ್ಯ ರಸ್ತೆ ಮೇಲ್ಕಂಡ ಸಂಚಾರ ನಿರ್ಬಂಧನೆಯು ದಿನಾಂಕ 19 / 04 / 2019 ರಂದು ಸಂಜೆ 4 – 00 ಗಂಟೆಯಿಂದ ದಿನಾಂಕ 20 / 04 / 2019 ರಂದು ಮಧ್ಯಾಹ್ನ 2 – 00 ಗಂಟೆಯ ವರೆಗೆ ಜಾರಿಯಲ್ಲಿರುತ್ತದೆ . ಸಾರ್ವಜನಿಕರು ಸಹಕರಿಸಲು ಕೋರಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.