ರಂಗ ಸಡಗರ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ನೂರ ಐವತ್ತು ಮಕ್ಕಳಿಂದ ಸಾವಿರದ ರಾಮಾಯಣ ನಾಟಕ ಪ್ರದರ್ಶನವನ್ನು ದಿನಾಂಕ 3 ಮತ್ತು 4ನೇ ಮೇ ತಿಂಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2 ದಿನಗಳ ಕಾಲ ನಾಟಕ ಪ್ರದರ್ಶನ

ದಿನಾಂಕ : 26 , 04 . 2019 . ರಂಗ ಸಡಗರ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ನೂರ ಐವತ್ತು ಮಕ್ಕಳಿಂದ ಸಾವಿರದ ರಾಮಾಯಣ ನಾಟಕ ಪ್ರದರ್ಶನವನ್ನು ದಿನಾಂಕ 3 ಮತ್ತು 4ನೇ ಮೇ ತಿಂಗಳಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 2 ದಿನಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ . ಈ ನಾಟಕದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿರುವ 150 ಮಕ್ಕಳು ಭಾಗವಹಿಸುತ್ತಿದ್ದು , ಇದು ಒಂದು ವಿನೂತನ ಪ್ರಯೋಗವಾಗಿದೆ . ಈ ಮಕ್ಕಳು ಸುಮಾರು ಒಂದು ತಿಂಗಳೂಗಳ ಕಾಲ ನುರಿತ ರಂಗ ನಿರ್ದೇಶಕರಿಗಳಿಂದ ರಂಗ ತರಬೇತಿ ಪಡೆದು ನಾಟಕದ ಅಭ್ಯಾಸ ನಡೆಸಿದ್ದಾರೆ . ಈ ಸಂದರ್ಭದಲ್ಲಿ ಮಕ್ಕಳಲ್ಲಿ ಆತ್ಮ ವಿಶ್ವಾಸ , ನಿರ್ಭಯ , ನಿರಂತರ ಮಾತುಗಾರಿಕೆ , ಧ್ವನಿಯ ಏರಿಳಿತ , ಆಂಗಿಕ ಭಾಷೆ ಉತ್ತಮವಾಗಿ ರೂಪುಗೊಂಡಿದ್ದು ವಿಶೇಷವಾಗಿದೆ . ತಾವುಗಳು ಈ ಸರ್ಕಾರಿ ಶಾಲಾ ಮಕ್ಕಳ ಕಾರ್ಯಕ್ರಮವನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತು ತಮ್ಮ ಸುದ್ದಿ ವಾಹಿನಿಯಲ್ಲಿ ಬಿತ್ತರಿಸುವ ಮೂಲಕ ಹೆಚ್ಚಿನ ಪ್ರಚಾರ ನೀಡಿ ಈ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದು ತಮ್ಮಲ್ಲಿ ಕಳಕಳಿಯ ಮನವಿ . ರಂಗ ಸಡಗರ ರಂಗಸಡಗರವು ಆನೇಕಲ್ ತಾಲೂಕಿನ ಸರ್ಕಾರಿ ಶಾಲಾ ಮಕ್ಕಳ ನಲಿವು , ಅಭಿವ್ಯಕ್ತಿ ಹಾಗು ಆಖ್ಯಾನದ ಉತ್ಸವ , ಮಂತ್ರ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಗುಣಾತ್ಮಕ ಶಿಕ್ಷಣ ಹಾಗೂ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಮುದಾಯ ಭಾಗವಹಿಸುವಿಕೆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತ ಪ್ರಸ್ತುತ ‘ ಮಂತ್ರ ಸಂಸ್ಥೆ ‘ ಮತ್ತು ‘ ಹಾದಿ ಬದಿ ಸಂಸ್ಥೆ ‘ ಸಹಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ , ಕರ್ನಾಟಕ ಸರ್ಕಾರ ಇವರುಗಳ ಸಹಕಾರದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು . ಹಾದಿಬದಿ ಸಂಸ್ಥೆಯ ಮೂಲಕ ಕರ್ನಾಟಕದ ನಾನಾ ಭಾಗಗಳಿಂದ ಆಗಮಿಸಿರುವ ರಂಗಕರ್ಮಿಗಳು ಮಕ್ಕಳಿಗೆ ರಂಗಭೂಮಿಯನ್ನು ಪರಿಚಯಿಸಿ , ಪ್ರದರ್ಶನದ ತಯಾರಿ ನಡೆಸಿದ್ದಾರೆ . ಕಥೆ ಕಟ್ಟುವಿಕೆ , ಚಲನಚಿತ್ರ ವೀಕ್ಷಣೆ , ಸಂಗೀತ , ನೃತ್ಯ , ಯಕ್ಷಗಾನ , ಮೂಕಾಭಿನಯ ಇತ್ಯಾದಿ ಕಲೆಗಳನ್ನು ಮಕ್ಕಳು ಕಲಿತು ನಲಿದಿದ್ದಾರೆ . ಈ ಪ್ರಕ್ರಿಯೆಯಲ್ಲಿ ಮಕ್ಕಳು ತಾವು ಓದಿ ಅಥವಾ ಕೇಳಿ ತಿಳಿದಿದ್ದ ರಾಮಾಯಣ , ಮಹಾಭಾರತದ ಕಥೆಗಳನ್ನು ಹಂಚಿಕೊಂಡಿದ್ದಾರೆ . ‘ ಸಾವಿರದ ರಾಮಾಯಣ ‘ ಮಕ್ಕಳಿಂದ ಮಹಾಕಾವ್ಯದ ಮತ್ತೊಂದು ಮಗ್ಗುಲನ್ನು ನೋಡುವ ಪ್ರಯತ್ನವಾಗಿದೆ . ಇದು ಮಕ್ಕಳಿಗೆ ಹತ್ತಿರವೆನಿಸುವ ನಾಲ್ಕು ಕಂತುಗಳನ್ನು ಈ ಪ್ರದರ್ಶನ ಒಳಗೊಂಡಿದೆ .

ನಮ್ಮ ಸಮುದಾಯದ ಜೀವಾಳವಾಗಿರುವ ವೈವಿಧ್ಯತೆ ಹಾಗು ವಿಭಿನ್ನ ದೃಷ್ಟಿಕೋನವನ್ನು ಎತ್ತಿಹಿಡಿಯುವುದು ನಮ್ಮ ಆಶಯ . ಸಾವಿರದ ರಾಮಾಯಣ ಎಷ್ಟು ರಾಮಾಯಣಗಳಿರಬಹುದು ? ಮುನೂರು ? ಮೂರು ಸಾವಿರ ? ದಕ್ಷಿಣ ಮತ್ತು ಈಶಾನ್ಯ ಏಷಿಯಾದಲ್ಲಿ ರಾಮಾಯಣದ ಅಸಂಖ್ಯಾತ ಆವೃತ್ತಿಗಳು ಹಾಗು ಅದರ ಅಪಾರವಾದ ಪ್ರಭಾವವನ್ನು ಗಮನಿಸಿದರೆ ಸೋಜಿಗವೆನಿಸುತ್ತದೆ . ರಾಮಾಯಣದ ವೈವಿಧ್ಯಮಯ ಕಥಾನಕಗಳು , ಅದರಲ್ಲಿನ ರಾಮ , ರಾವಣ , ಹನುಮಂತ ಸೇರಿದಂತೆ ಹಲವಾರು ಪಾತ್ರಗಳನ್ನು ತಮ್ಮದಾಗಿಸಿಕೊಂಡು ಕಟ್ಟಿರುವ ವೈವಿಧ್ಯಮಯ ಕತೆಗಳೂ , ವಾಚಿಕ – ಜಾನಪದ ಪರಂಪರೆಗಳನ್ನು ನೋಡಿದಾಗ ಆಶ್ಚರ್ಯವೆನಿಸುತ್ತದೆ .

ಭಾರತದ ಮಹಾಕಾವ್ಯವೊಂದರ ಹಲವಾರು ಆವೃತ್ತಿಗಳ ರಂಗರೂಪವೇ ಸಾವಿರದ ರಾಮಾಯಣ , ಈ ನೆಲದ ಜಾನಪದ ಪರಂಪರೆ ಹಾಗೂ ಕೃತಿಗಳೆ ಇದಕ್ಕೆ ಪ್ರೇರಣೆ , ಸಾವಿರದ ರಾಮಾಯಣದಲ್ಲಿ ಒಟ್ಟು ನಾಲ್ಕು ಅಧ್ಯಾಯಗಳಿವೆ – ಮಾರುತಿ ವಿಜಯ . ಅಳಿಲಾಯಣ , ಲವ ಕುಶ ಲೀಲ ಮತ್ತು ಮುನ್ನೂರ ಒಂದು ರಾಮಾಯಣ , ಮಾರುತಿ ವಿಜಯವು ಹನುಮಂತನಿಗಿತ್ತ ಶಾಪ ಹಾಗು ಅದನ್ನು ಆತ ಮೀರುವುದರ ಪ್ರಯತ್ನದ ಕುರಿತಾಗಿದೆ . ಹನುಮಂತನಿಗೆ ತನ್ನ ಸಾಮರ್ಥ್ಯಗಳನ್ನು ಮರೆತು ಹೋಗಿ ಯಾರಾದರೂ ‘ ನಿನ್ನಿಂದ ಇದು ಸಾಧ್ಯ ‘ ಎಂದರಷ್ಟೇ ಅದು ಮಾಡುವಂತೆ ಶಾಪವಿರುತ್ತದೆ . ಸಾವಿರ ವರ್ಷಗಳ ಸಾಮಾಜಿಕ ಶೋಷಣೆ – ತಾಪ ಸಮಕೋಲೆಗಳಿಂದ ಬಿಡಿಸಿಕೊಳ್ಳುವ ಪ್ರಯತ್ನ ಒಂದೆಡೆಯಾದರೆ ಬೆಳೆಯುವ ಮಗುವಿನ ಯಾವುದೋ ಒಂದು ಸಣ್ಣ ತಪ್ಪಿಗೆ ಶಿಕ್ಷೆ ಆ ಮಗುವಿನ ಬೆಳವಣಿಗೆಯನ್ನೇ ತಿಂದುಹಾಕುವ ದುರಂತಗಳನ್ನು ಕುರಿತು ಈ ಅಧ್ಯಾಯ ಬೆಳಕು ಚೆಲ್ಲುತ್ತದೆ . ಕನಸು ಹಾಗು ಹಂಬಲಗಳ ಸುತ್ತ ಅಳಿಲಾಯಣದ ಕತೆ ನಡೆಯುತ್ತದೆ .

ಮಗುವಿಗೆ ಕನಸು ಕಾಣುವುದು ಮತ್ತು ಆ ಕನಸುಗಳು ಅರಳಲು ಸೂಕ್ತವಾದ ಪರಿಸರ ಅತ್ಯಂತ ಮುಖ್ಯವಾಗುತ್ತದೆ . ಮಕ್ಕಳು , ಮುಗ್ಗರು ಹಾಗು ಶೋಷಿತರಿಗಿರುವ ಕನಸ್ಸುಗಳನ್ನೂ ಕದಿಯುವ ಹುನ್ನಾರದ ಶಾಲದಲ್ಲಿ ನಮಗೆ ಕನಸು ಕಣೋಣ ಬನ್ನಿ ಎಂದು ಕತೆ ಕರೆಯುತ್ತದೆ . ಲವ ಕುಶ ನಾಟಕವು ಸೋದರ – ಸ್ನೇಹತರ ನಡುವಿನ ಪ್ರೀತಿ , ಯುದ್ದದ ಭೀಕರತೆಯಿಂದ ಮಕ್ಕಳ ಮೇಲಾದ ಪರಿಣಾಮ ತಂದೆ ಅಥವಾ ತಾಯಿ ಇರದ ಮಕ್ಕಳ ತಳಮಳಗಳು , ರಾಜ್ಯ – ರಾಜ ನೀತಿಗಳು ಹಾಗು ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳ ನಡುವಿನ ಘರ್ಷಣೆಗಳನ್ನು , ಇವುಗಳಿಂದ ಬೆಳೆಯುವ ಮಕ್ಕಳ ತೊಳಲಾಟಗಳನ್ನೂ ಲವ ಕುಶ ಹಾಗು ಅವರ ಗೆಳೆಯರ ಮೂಲಕ ಅನಾವರಣಗೊಳಿಸುವ ಪ್ರಯತ್ನ ಮಾಡುತ್ತದೆ . ಮುನ್ನೂರ ಒಂದು ರಾಮಾಯಣ ಅಧ್ಯಾಯವು ಮೇಲ್ನೋಟಕ್ಕೆ ಶ್ರೀ ರಾಮನ ಅವಸಾನದ ಕತೆಯಾದರೂ ಇದು ಸೂಚಿಸುವ ಆರ್ಥಗಳು ಅನ್ಯಾದೃಶ್ಯವಾದುದು , ಹನುಮಂತ ರಾಮನ ಉಂಗುರವನ್ನು ಹುಡುಕುತ್ತಾ ಪಾತಾಳ ಲೋಕಕ್ಕೆ ಹೋದಂತೆ ಹಲವು ಉಂಗುರಗಳು ಸಿಗುತ್ತವೆ . ಈ ಮೂಲಕ ರಾಮ ಅನ್ನುವನು ಒಬ್ಬನಲ್ಲಿ ಹಲವು ರಾಮರಿದ್ದಾರೆ ಎನ್ನುವುದನ್ನು ಹನುಮ ಮತ್ತು ನಮ್ಮೆಲ್ಲರಿಗೂ ಕಟ್ಟಿಕೊಡುತ್ತದೆ . ಪಾತಾಳ ಲೋಕದ ಮಾಯಾಲೋಕವನ್ನು ಸೃಷ್ಟಿಸುವ ಮಕ್ಕಳ ಕಲ್ಪನಾ ಲಹರಿಯಲ್ಲಿ ನೀವು ದಂಗಾಗದೆ ಇರಲಾರಿರಿ . ಹಾದಿಬದಿ ಸಂಸ್ಥೆಯ ಬಗ್ಗೆ : ಹಾದಿ ಬದಿ ಕೆಲವು ವರ್ಷಗಳಿಂದ ಸರ್ಕಾರಿ ಶಾಲೆಗಳು , ಯುವಜನತೆ ಮತ್ತು ಸಮುದಾಯಗಳೊಂದಿಗೆ ಕೆಲಸ ಮಾಡುತ್ತಾ ಬಂದಿದೆ , ಸಮಾಜದಿಂದ ಕಡೆಗಣಿಸಲ್ಪಟ್ಟ ಸಮುದಾಯಗಳ ಅನನ್ಯತೆ ಮತ್ತು ಬೆಳವಣಿಗೆಗೆ ರಂಗಭೂಮಿಯ ಬಳಕೆಯಲ್ಲಿ ಭರವಸೆಯನ್ನಿಟ್ಟಿದೆ . ಜೊತೆಗೆ ಮಕ್ಕಳಿಗೆ ಮುಕ್ತ ಗ್ರಂಥಾಲಗಳನ್ನು ಆರಂಭಿಸಿ ತನ್ನ ಕಲಿಕಾ ವ್ಯಾಪ್ತಿಯನ್ನು ವಿಸ್ತರಿಸಿದೆ , ಮಂತ್ರ ಸ್ವಯಂ ಸೇವಾ ಸಂಸ್ಥೆ ಬಗ್ಗೆ : ಮಂತ್ರ ಸಂಸ್ಥೆ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು , ಮಕ್ಕಳ ಗುಣಾತ್ಮಕ ಶಿಕ್ಷಣ , ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವಲ್ಲಿ ಶಾಲಾ ಶಿಕ್ಷಕರೊಂದಿಗೆ ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ . ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಮುದಾಯದಾಯದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ .

ಹೆಚ್ಚಿನ ಮಾಹಿತಿಗಾಗಿ

ವೆಂಕಟೇಶ್ , ಮಂತ್ರ ಸಂಸ್ಥೆ – 7760915478 , ದೀಪಿಕಾ , ಮಂತ್ರ ಸಂಸ್ಥೆ – 740699 3982 ರವಿ ಕಿರಣ್ ರಾಜೇಂದ್ರನ್ , ( ಹಾದಿ ಬದಿ ) ಸಾವಿರದ ರಾಮಾಯಣ ನಾಟಕದ ನಿರ್ದೇಶಕರು – 9164454243 ಗೀತಾ , ಹಾದಿ ಬದಿ ಸಂಸ್ಥೆ – 9035436556 ಮಂಜುನಾಥ್ , ಎಸ್ . ಡಿ . ಎಂ . ಸಿ ಅಧ್ಯಕ್ಷರು – 9900649114

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.