ವಿಪ್ರ ವೈದ್ಯ ವೇದಿಕೆಯು ಸಂಸ್ಥೆಯು ಇದೇ ಏಪ್ರಿಲ್ ೨೮ , ೨೦೧೯ ರಂದುಮೊಟ್ಟಮೊದಲ ಬಾರಿಗೆ ವೈದ್ಯ ಸಮ್ಮೇಳನವನ್ನು ಪತ್ತಿ ಆಡಿಟೋರಿಯಂ , ರಾಮ ಮಂದಿರ , ಎನ್ . ಆರ್ , ಕಾಲೋನಿ ಬೆಂಗಳೂರು ಇಲ್ಲಿ ಆಯೋಜಿಸಿದೆ

ವಿಪ್ರ ವೈದ್ಯ ವೇದಿಕೆಯು ಕರ್ನಾಟಕ ವಿಪ್ರ ವೈದ್ಯ ವೃಂದದವರಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ಥಾಪಿತವಾದ ಸಂಸ್ಥೆಯಾಗಿದೆ . ಇದರ ಮೂಲ ಗುರಿ ಮತ್ತು ಉದ್ದೇಶ ಮುಖ್ಯವಾಗಿ ವಿಪ್ರ ಸಮುದಾಯ ಹಾಗು ಅಗತ್ಯವುಳ್ಳ ಜನಸಾಮಾನ್ಯರ ಆರೋಗ್ಯ , ಶಿಕ್ಷಣ ಹಾಗು ಆಧ್ಯಾತ್ಮಕ ಕ್ಷೇತ್ರಗಳಲ್ಲಿ ಫಲಾನುಭವಿಗಳಿಗೆ ಉತ್ತಮ ಸೇವೆಯನ್ನು ಒದಗಿಸುವುದಾಗಿದೆ . ಈ ನಿಟ್ಟಿನಲ್ಲಿ ವಿವಿವಿ ಸಂಸ್ಥೆಯು ಇದೇ ಏಪ್ರಿಲ್ ೨೮ , ೨೦೧೯ ರಂದುಮೊಟ್ಟಮೊದಲ ಬಾರಿಗೆ ವೈದ್ಯ ಸಮ್ಮೇಳನವನ್ನು ಪತ್ತಿ ಆಡಿಟೋರಿಯಂ , ರಾಮ ಮಂದಿರ , ಎನ್ . ಆರ್ , ಕಾಲೋನಿ ಬೆಂಗಳೂರು ಇಲ್ಲಿ ಆಯೋಜಿಸಿದೆ . ಈ ಸಮ್ಮೇಳನವು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು ಇದರಲ್ಲಿ ಕರ್ನಾಟಕದ ವೈದ್ಯ ರಂಗದ ಅಲೋಪತಿ , ಆಯುರ್ವೇದ , ಹೋಮಿಯೋಪತಿ , ಆಯುಷ್ ಇನ್ನಿತರ ಆರೋಗ್ಯ ಸಂರಕ್ಷಕ ಸಂಸ್ಥೆಗಳ ಸದಸ್ಯರು ಸಿಬ್ಬಂದಿಗಳು ಭಾಗವಹಿಲಿದ್ದಾರೆ . ಈ ಸಮ್ಮೇಳನದಲ್ಲಿ ಅಗತ್ಯ ಜನಸಾಮಾನ್ಯರಿಗೆ ಹಾಗು ವಿಪ್ರ ಸಮುದಾಯಕ್ಕೆ ಅವಶ್ಯಕವಿರುವ ವಿವಿಧ ಆರೋಗ್ಯ ಸೇವಾ ಕಾರ್ಯಕ್ರಮಗಳಿಗೆ ಆರಂಭಿಕ ಚಾಲನೆಯನ್ನು ನೀಡಲಾಗುತ್ತದೆ . ( ವಿಪ್ತ ವೈದ್ಯ ವೇಧಿಕೆ ಹಾಗು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸಹಯೋಗದೊಂದಿಗೆ ) ೧ . ವಿಮಾ ಯೋಜನೆ : ವಿಪ್ರ ಸಮುದಾಯದ ಎಲ್ಲಾ ಕುಟುಂಬವರ್ಗದವರಿಗೆ ಸಾಮೂಹಿಕ ಆರೋಗ್ಯ , – ಜೀವ ವಿಮೆ , ಅಪಘಾತ ವಿಮಾ ಯೋಜನೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ , ವಿಪ್ರ ವೈದ್ಯ ವೇಧಿಕೆ ಹಾಗು ಸಮರ ಕಲ್ಯಾಣ ಟ್ರಸ್ಟ್ ಸಹಯೋಗದೊಂದಿಗೆ , ೨ . ಔಷಧಿ ಖಜಾನೆ ( ಹುಂಡಿ ) : ಅರ್ಹ ವಿಪ್ರ ಔಷಧಿಗಾರರ ಮೇಲುಸ್ತುವಾರಿಯಲ್ಲಿ ವಿಪ್ರ ವೈದ್ಯರಿಂದ ಹಾಗು ರೋಗಿಗಳಲ್ಲಿ ಹೆಚ್ಚಾಗಿ ಉಳಿದ ಔಷಧಿ ಸಂಗ್ರಹಿಸುವ ಹಾಗು ವೈದ್ಯಕೀಯ ಶಿಭಿರಗಳಲ್ಲಿನ ಉಚಿತ ವಿತರಣೆಯ ವ್ಯವಸ್ಥೆ ಇತ್ಯಾದಿ . ೩ , ರಿವರ್ಸಿಂಗ್ ಸ್ಫೋಕ್ ( ಪಾರ್ಶ್ವವಾಯುವಿನ ಹೊಡೆತಕ್ಕೆ ಸಂಬಂದಿಸಿದ ) ಗಾಗಿ ನೀಡುವ ಸುಮಾರು ೪೦ ರಿಂದ ೫೦೦೦೦ ಬೆಲೆಯಾಗುವ ಕ್ಲಾಟ್ ಬಸ್ಟರ್‌ ಡ್ರಗ್ ನ್ನು ವಿಪ್ರ ವೈದ್ಯ ವೇಧಿಕೆಯ ಸದಸ್ಯರಾದ ಡಾ | ಸೂರ್ಯನಾರಾಯಣ ಶರ್ಮ ನರರೋಗ ತಜ್ಞ ರವರ ಟ್ರಸ್ಟ್ ವತಿಯಿಂದ ಅಗತ್ಯ ಬಡ ರೋಗಿಗೆ ಉಚಿತ ಸರಬರಾಜು ಮಾಡುವ ವ್ಯವಸ್ಥೆ , ೪ . ವಿಪ್ರ ವೈದ್ಯ ವೇಧಿಕೆ ಹಾಗು ಕಾರ್ಡಿಯೋ ಡಯಾಬೆಟಾಲೋಜಿ ಕ್ಲೀನಿಕ್ಸ್ ಸಹಯೋಗದೊಂದಿಗೆ ಆರೋಗ್ಯ ಹಾಗು ಅನಾರೋಗ್ಯ ಕುರಿತ ತಪಾಸಣೆ ಹಾಗು ಸಲಹಾ ಕಾರ್ಯಕ್ರಮ . ಆರಂಭಿಕವಾಗಿ ಶಿಘ್ರದಲ್ಲೇ ಬೆಂಗಳೂರಿನ ಬಸವನಗುಡಿ ಹಾಗು ಮಲ್ಲೇಶ್ವರಂ ಎರಡು ಸ್ಥಳಗಳಲ್ಲಿ ಎಂಡೋಕ್ರಿನೊಲೊಜಿಸ್ಟ್ ರವರ ನೇತೃತ್ವದಲ್ಲಿ ಪ್ರಾರಂಬಿಸಲಾಗುತ್ತಿದೆ . ೫ . ಅಗತ್ಯ ಸಾರ್ವಜನಿಕ ವ್ಯಕ್ತಿಗಳ ಹಾಗು ವಿಪ್ತ ಸಮುದಾಯದ ಆರೋಗ್ಯ ಹಾಗು ಕ್ಷೇಮಾಭಿವೃದ್ಧಿಗಾಗಿ ಇನ್ನೂ ಅನೇಕ ಚಟುವಟಿಕೆಗಳು ಯೋಜನೆಗೊಂಡಿದೆ . ನಾವು ಇದೇ ಸಂಧರ್ಭದಲ್ಲಿ ತಮ್ಮದೇ ಆದ ಕೇತದಲಿ ಅಪಾರ ಸೇವೆ ಸಲ್ಲಿಸಿ ಸಮಾಜ ಹಾಗು ದೇಶಕ್ಕೆ ಕೊಡುಗೆ ನೀಡಿದ ಎಷ್ಟ ಸಮುದಾಯದ ಸಾಧಕರನ್ನು ಗೌರವಿಸಿ ಸನ್ಮಾನಿಸುತ್ತಿದ್ದೇವೆ . ಭವಿಷ್ಯವಾಕ್ಯ “ ಮುಂದಿನ ವಿಪ್ರ ಫೀಳಿಗೆಗಾಗಿ ಉತ್ತಮ ಬದುಕು ಸುರಕ್ಷತೆ ಹಾಗು ರಕ್ಷಣಾತ್ಮಕ ಪ್ರಪಂಚ ” ಧೈಯ ವಾಕ್ಯ • ವಿಪ್ತ ಸಮುದಾಯವನ್ನು ಪ್ರೇರೇಪಿಸುವ , ಶಕ್ತಿಯುತಗೊಳಿಸುವ , ಚೈತನ್ಯಗೊಳಿಸುವ * ವಿಪ್ರ ಹಾಗು ಅವರ ಕುಟುಂಬಗಳಿಗೆ ಆರೋಗ್ಯಪೂರ್ಣ ಬದುಕು ಕಟ್ಟುವ . ” ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಸಾಧಿಸಲು ವಿಪ್ರರಿಗೆ ಶೈಕ್ಷಣಿಕವಾಗಿ ಸಹಕರಿಸುವ . • ಬಡತನ ನಿರ್ಮೂಲನೆಗಾಗಿ ತಮ್ಮಲ್ಲಿರುವ ಸಂಪನ್ಮೂಲವನ್ನು ವಿನಿಮಯ ಮಾಡಲು ಸಹಕರಿಸುವ . • ನಮ್ಮ ಸಾಮಾಜಿಕ ಸಾಂಸ್ಕೃತಿಕ ಪರಂಪರೆಯ ಉಳಿವಿಗಾಗಿ ಕಾರ್ಯೋನ್ಮುಖರಾಗುವೆ . ಈ ಎಲ್ಲಾ ಕಾರ್ಯಕ್ರಮಗಳನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಹಕಾರ ಹಾಗು ಎಲ್ಲಾ ಅಂಗಸಂಸ್ಥೆಗಳ ಸಹಕಾರದೊಂದಿಗೆ ನಡೆಸಲಾಗುತ್ತಿದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.