ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಅಳವಡಿಸದೆ ಅಗೌರವ, ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ಎಚ್ಚರಿಕೆ

ಕರ್ನಾಟಕ ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆಯೇ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣರವರ ಭಾವಚಿತ್ರವನ್ನು ಅಳವಡಿಸಲು ಅಧಿಕೃತ ಆದೇಶ ಹೊರಡಿಸಿದ್ದರೂ ಇದುವರೆಗೂ ಅದು ಕಾರ್ಯಗತವಾಗಿಲ್ಲ . ಹಾಗಾಗಿ ಮೇ 7ರಂದು ಆಚರಣೆಯಾಗುತ್ತಿರುವ ಬಸವಜಯಂತಿಗೂ ಮುನ್ನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಅಳವಡಿಸದಿದ್ದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ . ಜಗದ್ಗುರು ಬಸವಣ್ಣನವರು ಯಾವುದೇ ಒಂದು ಧರ್ಮ , ಜಾತಿ , ವರ್ಗಕ್ಕೆ ಸೀಮಿತವಾದವರಲ್ಲ . 12ನೇ ಶತಮಾನದಲ್ಲಿಯೇ ಜಾತೀಯತೆ , ಕಂದಾಚಾರದ ವಿರುದ್ದ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು . ಜತೆಗೆ ಸಾಮಾಜಿಕ , ಆರ್ಥಿಕ ಸಮಾನತೆಗಾಗಿ ಅವಿರತ ಶ್ರಮಿಸಿ ಸಾಮಾಜಿಕ ಸುಧಾರಣೆ ತಂದ ಹರಿಕಾರರು . ಅಂತಹ ಮಹಾನುಭಾವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಲು 21ನೇ ಶತಮಾನವೇ ಬರಬೇಕಾಯಿತು .

ಬಸವಣ್ಣನವರ ನಂಬಿದ್ದ ತತ್ವ – ಸಿದ್ದಾಂತ ಹಾಗೂ ಆದರ್ಶಗಳ ಅಳವಡಿಕೆ ಇಂದಿನ ದಿನಮಾನಗಳಲ್ಲಿ ಸಮಾಜಕ್ಕೆ ತುರ್ತು ಅಗತ್ಯ ಮತ್ತು ಅನಿವಾರ್ಯ ಎನಿಸಿದೆ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು , ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣರವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸುವಂತೆ ನಿರ್ಧರಿಸಿ ಸಚಿವಸಂಪುಟ ನಿರ್ಣಯ ಕೈಗೊಂಡು 2017ರ ಏಪ್ರಿಲ್ 29 ರಂದು ಸರ್ಕಾರಿ ಆದೇಶ ಹೊರಡಿಸಿದ್ದರು . ಅಲ್ಲದೆ ಬಸವಣ್ಣನವರ ಭಾವಚಿತ್ರದ ಮಾದರಿಯನ್ನೂ ಸರ್ಕಾರವೇ ಅಂತಿಮಗೊಳಿಸಿತ್ತು .

ಇದಕ್ಕೆ ಸರ್ವರೂ ಸ್ವಾಗತಿಸಿ ಸರ್ಕಾರವನ್ನು ಪ್ರಶಂಶಿಸಿದ್ದರು , ವೀರಶೈವ ಲಿಂಗಾಯತ ಸಮುದಾಯ ಗೌರವ ಮತ್ತು ಹೆಮ್ಮೆಯಿಂದ ಇದನ್ನು ಸ್ವಾಗತಿಸಿತ್ತು . ತ್ವರಿತ ಅನುಷ್ಟಾನದ ಆಶಯವನ್ನೂ ಹೊಂದಿತ್ತು . ಆದರೆ ದುರಾದೃಷ್ಟವಶಾತ್ ಜಾರಿಗೊಳಿಸಿ 2 ವರ್ಷ ಕಳೆದಿದ್ದರೂ , ಇಲ್ಲಿಯವರೆಗೆ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರವನ್ನು ಅಳವಡಿಸದೆ ಬಸವಣ್ಣರವರಿಗೆ ಸರ್ಕಾರವೇ ಅಗೌರವ ತೋರಿದೆ . ಅಲ್ಲದೆ , ಸರ್ಕಾರಿ ಆದೇಶ ಜಾರಿಗೆ ತರುವಲ್ಲಿ ಆಡಳಿತಯಂತ್ರವೇ ವಿಫಲವಾಗಿದೆ . ಸರ್ಕಾರದ ಇಂತಹ ನಿರ್ಲಕ್ಷ್ಯ ಧೋರಣೆಯನ್ನು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ . ಮೇ . 7ರಂದು ನಡೆಯಲಿರುವ ಬಸವ ಜಯಂತಿಯ ಒಳಗಾಗಿ , ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಅಳವಡಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು . ಇಲ್ಲದಿದ್ದಲ್ಲಿ ಸಂಘಟನೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಎಚ್ಚರಿಸಿದ್ದಾರೆ .

-ಪ್ರದೀಪ ಕಂಕಣವಾಡಿ ರಾಷ್ಟ್ರೀಯ ಅಧ್ಯಕ್ಷರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.