ಬೆಂಗಳೂರಿನ ಜಯನಗರದಲ್ಲಿ ಮ್ಯಾಕ್ಸ್ ಫ್ಯಾಶನ್ ಪುನಾರಂಭ ಜನಪ್ರಿಯ ನಟ ಶ್ರೀನಿಧಿ ಶೆಟ್ಟಿ ಅವರಿಂದ ಉದ್ಘಾಟನೆ

ಬೆಂಗಳೂರು , ಮೇ ೨೦೧೯ : ದೇಶದ ಅತಿದೊಡ್ಡ ಫ್ಯಾಶನ್ ಬ್ಯಾಂಡ್ ಆಗಿರುವ ಮ್ಯಾಕ್ಸ್ ಫ್ಯಾಶನ್ ಬೆಂಗಳೂರಿನ ಜಯನಗರದಲ್ಲಿರುವ ತನ್ನ ಸ್ಕೋರ್ ಅನ್ನು ಪುನಾರಂಭಿಸಿದೆ . ಮೇ ೧ ರಂದು ನಡೆದ ಕಾರ್ಯಕ್ರಮದಲ್ಲಿ ಚಿತ್ರತಾರೆ ಶ್ರೀನಿಧಿ ಶೆಟ್ಟಿ ಅವರು ಈ ನವೀಕರಣಗೊಂಡ ಮಳಿಗೆಯನ್ನು ಉದ್ಘಾಟಿಸಿದರು . ೯ ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಮಳಿಗೆಯು ೧೪ , ೯೦೦ ಚದರಡಿ ವಿಸ್ತೀರ್ಣ ಹೊಂದಿದ್ದು , ಅಂತಾರಾಷ್ಟ್ರೀಯ ಮಟ್ಟದ ಲುಕ್‌ನೊಂದಿಗೆ ಗ್ರಾಹಕರಿಗೆ ಸೇವೆ ಒದಗಿಸುತ್ತಿದೆ .

ಮೇಲ್ದರ್ಜೆಗೇರಿಸಿದ ಟ್ರಯಲ್ ರೂಂಗಳು , ಡಿಜಿಟಲ್ ಇಂಟರ್‌ಫೇಸ್‌ ಮತ್ತು ಬಿಲ್ಲಿಂಗ್ ಪ್ರಕ್ರಿಯೆಗಳನ್ನು ಮತ್ತಷ್ಟು ಸುಲಭ ಮಾಡಿರುವುದು ಸೇರಿದಂತೆ ಹಲವಾರು ಗ್ರಾಹಕಸ್ನೇಹಿ ಸೇವೆಗಳನ್ನು ಪರಿಚಯಿಸಲಾಗಿದೆ . ಈ ಮೂಲಕ ಗ್ರಾಹಕರಿಗೆ ಅತ್ಯುತ್ತಮವಾದ ರೀತಿಯಲ್ಲಿ ಶಾಪಿಂಗ್ ಅನುಭವವನ್ನು ನೀಡುತ್ತದೆ . ಶ್ರೀನಿಧಿ ಶೆಟ್ಟಿ ಅವರನ್ನು ಕಾಣಲು ದೊಡ್ಡ ಸಂಖ್ಯೆಯ ಗ್ರಾಹಕರು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು . ಶ್ರೀನಿಧಿ ಶೆಟ್ಟಿ ಅವರು ಇತ್ತೀಚಿನ ಹೊಸ ಹೊಸ ಸಂಗ್ರಹದ ಉಡುಗೆ ತೊಡುಗೆಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು . ಇದಲ್ಲದೇ , ಅವರು ಅಭಿಮಾನಿಗಳು ಮತ್ತು ಗ್ರಾಹಕರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು . ಈ ಹೊಸ ಮಳಿಗೆಯ ಬಗ್ಗೆ ಮಾತನಾಡಿದ ಶ್ರೀನಿಧಿ ಶೆಟ್ಟಿ ಅವರು , “ ಜಯನಗರದಲ್ಲಿ ಮ್ಯಾಕ್ಸ್ ಫ್ಯಾಶನ್‌ನ ನವೀಕೃತ ಮಳಿಗೆಯನ್ನು ಉದ್ಘಾಟನೆ ಮಾಡಲು ನನಗೆ ಅತೀವ ಸಂತಸವಾಗುತ್ತಿದೆ . ಪುನಃ ಆರಂಭವಾಗಿರುವ ಈ ಮ್ಯಾಕ್ಸ್ ಸ್ಟೋರ್‌ನ ನೋಟ ಮತ್ತು ಅನುಭವ ನನಗೆ ಮೆಚ್ಚುಗೆಯಾಗಿದೆ . ಇಲ್ಲಿನ ಇತ್ತೀಚಿನ ಸಮ್ಮರ್ ಸಂಗ್ರಹದ ಉಡುಗೆಗಳನ್ನು ಶಾಪಿಂಗ್ ಮಾಡುವ ಮೂಲಕ ಹೊಸತನದ ಶಾಪಿಂಗ್ ಅನ್ನು ಎಂಜಾಯ್ ಮಾಡಿದೆ . ಒಟ್ಟಾರೆ ಇಲ್ಲಿನ ಅನುಭವ ಅವಿಸ್ಮರಣೀಯ ಎನಿಸಿತು . ಜನರು ಇಲ್ಲಿಗೆ ಬಂದು ಶಾಪಿಂಗ್ ಮಾಡುವ ಮೂಲಕ ಎಂಜಾಯ್ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ ” ಎಂದು ಹೇಳಿದರು . ಮ್ಯಾಕ್ಸ್ ಫ್ಯಾಶನ್‌ನ ಪ್ಲಾನಿಂಗ್ ಅಂಡ್ ಸಬ್ಸೈ ಚೈನ್‌ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಅನಿಲ್ ಚಿನ್ನೆಭಂದಾರ್ ಅವರು ಮಾತನಾಡಿ , ‘ ಮ್ಯಾಕ್ಸ್ ಫ್ಯಾಶನ್ ಅಂತಾರಾಷ್ಟ್ರೀಯ ಮಟ್ಟದ ಅತ್ಯುತ್ತಮವಾದ ಉಡುಪುಗಳನ್ನು ಗ್ರಾಹಕರಿಗೆ ತಲುಪಿಸುವ ಬದ್ಧತೆ ಹೊಂದಿದೆ . ಈ ಹಿನ್ನೆಲೆಯಲ್ಲಿ ಈ ಹಿಂದೆ ಯೋಚಿಸಲಾರದಂತಹ ಫ್ಯಾಶನ್ ಅನುಭವವನ್ನು ನೀಡಲೆಂದೇ ನಮ್ಮ ಮಳಿಗೆಯನ್ನು ನವೀಕರಿಸಲಾಗಿದೆ . ಡಿಜಿಟಲ್ ಇಂಟರ್‌ಫೇಸ್ ನಿಂದ ಹಿಡಿದು ಅತ್ಯದ್ಭುತವಾದ ಫ್ಯಾಶನ್ ಲೋಕದ ಅನುಭವವನ್ನು ನೀಡುತ್ತಿದ್ದೇವೆ .

ಈ ಮೂಲಕ ನಾವು ಗ್ರಾಹಕರಿಗೆ ಅಂತಾರಾಷ್ಟ್ರೀಯ ಮಟ್ಟದ ಫ್ಯಾಶನ್ ಅನ್ನು ನೀಡುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇವೆ . ಈ ನಿಟ್ಟಿನಲ್ಲಿ ಸ್ಟೋರ್ ಅನ್ನು ಅಭಿವೃದ್ಧಿಪಡಿಸಿದ್ದೇವೆ ‘ ಎಂದು ತಿಳಿಸಿದರು . ಎಲ್ಲಾ ಪೋಷಕರಿಗೆ ಮತ್ತು ಮಕ್ಕಳಿಗೆ ಮ್ಯಾಕ್ಸ್ ಫ್ಯಾಶನ್ ನೆಚ್ಚಿನ ತಾಣವಾಗಿದೆ . ಮ್ಯಾಕ್ಸ್ ಕಿಡ್ಸ್ ಫೆಸ್ಟಿವಲ್ ಅನ್ನು ಹಲವಾರು ಕುತೂಹಲಕಾರಿಯಾದ ಆಫರ್‌ಗಳೊಂದಿಗೆ ಆಚರಿಸಲಾಗುತ್ತಿದೆ . ಈ ಒಂದು ತಿಂಗಳ ಫೆಸ್ಟಿವಲ್ನಲ್ಲಿ ೧ , ೯೯೯ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚು ಮೌಲ್ಯದ ಶಾಪಿಂಗ್ ಮಾಡುವ ಗ್ರಾಹಕರಿಗೆ ೮೯೯ ರೂಪಾಯಿ ಮೌಲ್ಯದ ಮಾರ್ವೆಲ್ ಅವೆಂಜರ್ಸ್ ಸ್ಕೂಲ್ ಕಿಟ್ ಸಿಗಲಿದೆ . ಈ ಆಫರ್ ೨೦೧೯ ರ ಮೇ ೨೨ ರವರೆಗೆ ಇರಲಿದೆ . ಹೆಚ್ಚಿನ ಮಾಹಿತಿಗಾಗಿ https : / / www . maxfashion . in / in / en / Maxkidsfestival ಗೆ ಭೇಟಿ ನೀಡಿ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.