12 . 05 . 2019 ರಂದು ಭಾನುವಾರ ಬೆಳಿಗ್ಗೆ 10 . 30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬಸವ ಜಯಂತಿ ಹಾಗೂ “ ಬಸವಶ್ರೀ ಪ್ರಶಸ್ತಿ ” ಮತ್ತು “ ವಚನ ಸಾಹಿತ್ಯಶ್ರೀ ” ಪ್ರಶಸ್ತಿಗಳ ಪ್ರದಾನ ಸಮಾರಂಭದ ಬಗ್ಗೆ ಪತ್ರಿಕಾ ಪ್ರಕಟಣೆ

ಬೆಂಗಳೂರಿನ ಬಸವ ವೇದಿಕೆಯು ಕರ್ನಾಟಕದ ಒಂದು ಪ್ರತಿಷ್ಟಿತ ಸಂಸ್ಥೆಯಾಗಿದ್ದು , ಬಸವಣ್ಣನವರ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ಕಳೆದ 29 ವರ್ಷಗಳಿಂದ ನಿರಂತರವಾಗಿ ರಾಷ್ಟ್ರದಾದ್ಯಂತ ಯಶಸ್ವಿಯಾಗಿ ಪ್ರಸಾರ ಮಾಡುತ್ತಾ ಬಂದಿದೆ . – ಪ್ರತಿವರ್ಷವು ಬಸವ ವೇದಿಕೆಯು 12ನೇ ಶತಮಾನದ ಕ್ರಾಂತಿ ಪುರುಷರಾದ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಸುಮಾರು ಎರಡು ದಶಕಗಳಿಂದ ತುಂಬಾ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬಂದಿರುತ್ತದೆ . ಈ ಸಮಾರಂಭವನ್ನು ಅರ್ಥಪೂರ್ಣಗೊಳಿಸುವ ದಿಸೆಯಲ್ಲಿ ಬಸವಾದಿ ಶರಣರ ವಿಚಾರಧಾರೆಗೆ ಅನುಗುಣವಾಗಿ ವಿಶಿಷ್ಟ ಸಾಮಾಜಿಕ ಸೇವೆಯನ್ನು ಸಲ್ಲಿಸಿರುವ ಒಬ್ಬ ಮಹಾನ್ ಸಾಧಕರಿಗೆ “ ಬಸವಶ್ರೀ ” ಪ್ರಶಸ್ತಿಯನ್ನು ಹಾಗೂ ವಚನ ಸಾಹಿತ್ಯದಲ್ಲಿ ಸಾಕಷ್ಟು ಕೃಷಿಯನ್ನು ಮಾಡಿರುವ ಸಾಹಿತಿಗಳಿಗೆ “ ವಚನ ಸಾಹಿತ್ಯಶ್ರೀ ” ಪ್ರಶಸ್ತಿಯನ್ನು ಪ್ರತಿವರ್ಷವೂ ನೀಡಿ ಗೌರವಿಸಲಾಗುತ್ತಿದೆ .

ಬಸವ ವೇದಿಕೆಯ “ ಬಸವಶ್ರೀ ” ಮತ್ತು “ ವಚನ ಸಾಹಿತ್ಯಶ್ರೀ ” ವಾರ್ಷಿಕ ಪ್ರಶಸ್ತಿಗಳು ರಾಜ್ಯಮಟ್ಟದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾಗಿವೆ . – ಇದುವರೆವಿಗೂ ಸನ್ಮಾನ್ಯರುಗಳಾದ ಡಾ . ಬಿ . ಡಿ . ಜತ್ತಿಯವರು , ಶ್ರೀ ಎಸ್ . ನಿಜಲಿಂಗಪ್ಪನವರು , ಡಾ . ಎಂ . ಸಿ . ಮೋದಿಯವರು , ಶ್ರೀ ಕೆ . ಎಂ . ನಂಜಪ್ಪನವರು , ಪ್ರೊ . ದೇ . ಜವರೇಗೌಡರವರು , ಡಾ . ಹೆಚ್ . ನರಸಿಂಹಯ್ಯನವರು , ನ್ಯಾಯಮೂರ್ತಿ ಶಿವರಾಜ ಪಾಟೀಲ್ , ನಾಡೋಜ ಡಾ . ಚಂದ್ರಶೇಖರ ಕಂಬಾರರವರು , ಡಾ . ಡಿ . ಎಂ . ನಂಜುಂಡಪ್ಪನವರು , ಶ್ರೀ ಪಾಟೀಲ ಪುಟ್ಟಪ್ಪನವರು , ನ್ಯಾಯಮೂರ್ತಿ ವಿ . ಎಸ್‌ . ಮಳೀಮಠರವರು , ಡಾ . ಎಸ್ . ಪಿ . ಬಾಲಸುಬ್ರಹ್ಮಣ್ಯಂ , ಡಾ . ಜಿ . ಎಸ್ . ಶಿವರುದ್ರಪ್ಪ , ಡಾ . ಸುಧಾಮೂರ್ತಿ , ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ , ನಾಡೋಜ ಡಾ . ಏಣಗಿ ಬಾಳಪ್ಪ , ನಾಡೋಜ ಚನ್ನವೀರ ಕಣವಿ ಮತ್ತು ಡಾ . ಕಲ್ಬುರ್ಗಿ , ಭಾರತರತ್ನ ಡಾ . ಸಿ . ಎನ್ . ಆರ್ . ರಾವ್ , ಶ್ರೀ ವಿಜಯ ಸಂಕೇಶ್ವರ್ , ಶ್ರೀ ರವಿಶಂಕರ್ ಗುರೂಜಿ , ಡಾ . ಪ್ರಭಾಕರ ಕೋರೆ ಅವರಂತಹ ನಾಡಿನ ಹತ್ತಾರು ಧೀಮಂತ ಸಾಧಕರಿಗೆ ಇದುವರೆಗೆ “ ಬಸವಶ್ರೀ ” ಪ್ರಶಸ್ತಿಯನ್ನು ಹಾಗೂ ಶರಣ ಸಾಹಿತ್ಯ ಸಾಧಕರುಗಳಿಗೆ “ ವಚನ ಸಾಹಿತ್ಯಶ್ರೀ ” ಪ್ರಶಸ್ತಿಗಳನ್ನು ಅತ್ಯಂತ ಅಭಿಮಾನಪೂರ್ವಕವಾಗಿ ನೀಡಿ ನಾಡು ನುಡಿಗೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಹೃಸ್ಪೂರ್ವಕವಾಗಿ ಅಭಿನಂದಿಸಲಾಗಿದೆ .

ಈ ವರ್ಷದ ಬಸವ ಜಯಂತಿ ಮತ್ತು ಬಸವಶ್ರೀ ಹಾಗೂ ವಚನ ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ದಿನಾಂಕ : 12 . 05 . 2019 ರಂದು ಭಾನುವಾರ ಬೆಳಿಗ್ಗೆ 10 . 30ಕ್ಕೆ ರವೀಂದ್ರ ಕಲಾಕ್ಷೇತ್ರ ಬೆಂಗಳೂರು ಇಲ್ಲಿ ಏರ್ಪಡಿಸಲಾಗಿದೆ . ಈ 2019ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಬಾಹ್ಯಾಕಾಶ ಕ್ಷೇತ್ರದ ಪ್ರಖ್ಯಾತ ವಿಜ್ಞಾನಿಗಳಾದ ಹಾಗು ಇಸೋ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಪದ್ಮಶ್ರೀ ಡಾ . ಎ . ಎಸ್ . ಕಿರಣ್ ಕುಮಾರ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ . ವಚನ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಸಾಲಿನ “ ವಚನ ಸಾಹಿತ್ಯಶ್ರೀ ” ಪ್ರಶಸ್ತಿಯನ್ನು ಪ್ರಖ್ಯಾತ ಕವಿಗಳಾದ ಶ್ರೀ ಜರಗನಹಳ್ಳಿ ಶಿವಶಂಕರ್ ಹಾಗೂ ಮೂಡಬಿದರೆಯ ಕಾಂತಾವರದ ಅಲ್ಲಪಪ್ರಭು ಪೀಠದ ಪ್ರಧಾನ ನಿರ್ದೇಶಕರಾದ ಸಾಹಿತಿಗಳಾದ ಡಾ . ನಾ . ಮೊಗಸಾಲೆಯವರಿಗೆ ನೀಡಿ ಗೌರವಿಸಲಾಗುವುದು . ಈ ಸಮಾರಂಭದ ಸಂಪೂರ್ಣವಾದ ವಿವರಗಳನ್ನು ಒಳಗೊಂಡ ಆಹ್ವಾನ ಪತ್ರಿಕೆಯನ್ನು ತಮಗೆ ಗೌರವ ಪೂರ್ವಕವಾಗಿ ನೀಡಲಾಗುತ್ತಿದೆ . ಅಂದು ಸುಮಾರು ಬೆಳಿಗ್ಗೆ 10 . 00 ಗಂಟೆಯಿಂದ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಪೂಜ್ಯಶ್ರೀ ಜಪಾನಂದ ಸ್ವಾಮೀಜಿ ಮತ್ತು ವೃಂದದವರಿಂದ ವಚನ ಗಾಯನ ನಡೆಯಲಿದೆ .

– ಡಾ . ಸಿ . ಸೋಮಶೇಖರ ಐಎಎಸ್ ( ನಿ ) ಅಧ್ಯಕ್ಷರು , ಬಸವ ವೇದಿಕೆ , ಬೆಂಗಳೂರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.