ಮಕ್ಕಳಲ್ಲಿ ಹೆಚ್ಚುತ್ತಿರುವ ಕಣ್ಣಿನ ಅಲರ್ಜಿಯಿಂದ ದೃಷ್ಟಿ ದೋಷ

– ಡಾ . ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರ ಆತಂಕ

– ಉರಿ ಮತ್ತು ಡೈಐ ಅಲರ್ಜಿಗೆ ಪ್ರಮುಖ ಕಾರಣ

– ಇದರಿಂದ ಕೆರಟೊಕೊನಸ್ ಹೆಚ್ಚಾಗುತ್ತದೆ

– 10 – 15 ವರ್ಷದ ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ

ಬೆಂಗಳೂರು , 15 ಮೇ 2019 : ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ ಮತ್ತು ಮೊಬೈಲ್ ಫೋನ್‌ಗಳ ಸ್ಕಿನ್ ಅನ್ನು ಹೆಚ್ಚಾಗಿ ವೀಕ್ಷಿಸುವುದರಿಂದ ಮಕ್ಕಳಲ್ಲಿ ಕಣ್ಣಿನ ಅಲರ್ಜಿಗಳು ಹೆಚ್ಚಾಗುತ್ತಿದ್ದು , ಕಾರ್ನಿಯಾದಲ್ಲಿ ತೊಂದರೆ ಹಾಗೂ ಮಸುಕಾದ ದೃಷ್ಟಿಗೆ ಕಾರಣವಾಗುತ್ತಿದೆ ಎಂದು ಅಗರ್‌ವಾಲ್ ಕಣ್ಣಿನ ಆಸತ್ರೆಯ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ . ಈ ಸ್ಥಿತಿಗೆ ಕೆರೋಕೊನಸ್ ಎಂದು ಕರೆಯಲಾಗುತ್ತಿದ್ದು , ಇದು ಹೊಗೆಸಿವ್ ಕಣ್ಣಿನ ರೋಗವಾಗಿದೆ . ಇದರಿಂದ ಕಾರ್ನಿಯಾ ತೆಳುವಾಗಲಿದ್ದು , ಕೋನ್ ಮಾದರಿಯ ಆಕಾರಕ್ಕೆ ತಿರುಗಲು ಆರಂಭವಾಗುತ್ತದೆ . ಈ ಕೋನ್ ಆಕಾರವು ಬೆಳಕಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ . ಇದು ರೆಟಿನಾದೊಳಗೆ ಪ್ರವೇಶ ಮಾಡಿ ಮಕ್ಕಳು ಸರಿಯಾಗಿ ನೋಡುವ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ . ಬೆಂಗಳೂರಿನ ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯ ಕಾರ್ನಿಯಾ & ರಿಫ್ರಾಕ್ಟಿವ್ ಸರ್ಜರಿಯ ಸೀನಿಯರ್‌ ಕನಲೆಂಟ್ ಡಾ . ರಘು ನಾಗರಾಜು ಅವರು ಮಾತನಾಡಿ , “ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಕಣ್ಣಿನ ಅಲರ್ಜಿಗಳು ಹೆಚ್ಚಾಗುತ್ತಿವೆ . ಕೃತಕ ಬೆಳಕು , ಕಂಪ್ಯೂಟರ್ ಮತ್ತು ಮೊಬೈಲ್ ಸೀನ್‌ಗಳನ್ನು ಹೆಚ್ಚಾಗಿ ಬಳಸುವುದರಿಂದ ಒಣ ಕಣ್ಣಿಗೆ ಕಾರಣವಾಗಲಿದೆ . ಡ್ರೈನೆಸ್‌ ಮತ್ತು ಉರಿ ಉಂಟಾಗುವುದರಿಂದ ಕಣ್ಣಿನ ಅಲರ್ಜಿಗೆ ಕಾರಣವಾಗುತ್ತವೆ . ಈ ಅಲರ್ಜಿಯಿಂದ ಮಕ್ಕಳು ಕಣ್ಣನ್ನು ಉಜ್ಜಿಕೊಳ್ಳುವುದರಿಂದ ಕೆರಟೊಕೊನಸ್ ಉಂಟಾಗುತ್ತದೆ ” ಎಂದು ತಿಳಿಸಿದರು . ಎಂದು ವೇಳೆ ಕೆರಟೊಕೊನಸ್ ಹೆಚ್ಚಾದರೆ ಮಕ್ಕಳು ಅತ್ಯುತ್ತಮವಾದ ಕನ್ನಡಕಗಳನ್ನು ಧರಿಸಿದರೂ ಅಥವಾ ಲೆನ್ಸ್ ಬಳಸಿದರೂ ಪೂರ್ಣಪ್ರಮಾಣದಲ್ಲಿ ದೃಷ್ಟಿಯನ್ನು ಹೊಂದಲು ಸಾಧ್ಯವಾಗುವುದಿಲ್ಲ . ಇರತೊಕೊನಸ್‌ಗೆ ಕೋಲಜನ್ ಕ್ರಾಸ್‌ಲಿಂಕಿಂಗ್ ಚಿಕಿತ್ಸೆ ಪಡೆಯಬಹುದು . ಆದರೆ , ಇದು ರೋಗ ಮತಷು ಹರಡುವುದನ್ನು ತಪ್ಪಿಸುತ್ತಿದೆಯಾದರೂ ಈಗಾಗಲೇ ಕಳೆದುಕೊಂಡಿರುವ ದೃಷ್ಟಿಯನ್ನು ಮರು ತರಲು ಸಾಧ್ಯವಾಗುವುದಿಲ್ಲ . ಗಂಭೀರ ಪ್ರಕರಣಗಳಲ್ಲಿ ಕಾರ್ನಿಯಾ ಕಸಿಯೊಂದೇ ಮಾರ್ಗವಾಗಿರುತ್ತದೆ .

ಬೆಂಗಳೂರಿನ ಅಗರ್‌ವಾಲ್ ಕಣ್ಣಿನ ಆಸತ್ರೆಯ ಕೆಟರಾಕ್ಸ್ ಅಕ್ಯುಲೋಪ್ಲಾಸಿಯ ಸೀನಿಯರ್ ಕನ್ನಲೆಂಟ್ , ಮೆಡಿಕಲ್ ಡೈರೆಕ್ಟರ್ ಡಾ . ರವಿ ಅವರು ಮಾತನಾಡಿ , “ ಭಾರತದಲ್ಲಿ ಪ್ರತಿ 1 , 500 ಮಕ್ಕಳಲ್ಲಿ ಒಂದು ಮಗು ಕೆರಟೋಕೊನಸ್‌ನಿಂದ ಬಳಲುತ್ತಿದೆ . 10 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ . 8 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಣ್ಣಿನ ಅಲರ್ಜಿ ಗಂಭೀರ ಸ್ವರೂಪಕ್ಕೆ ತಿರುಗಿದ್ದರೆ ಅದು ಕೆರಟೊಕೊನಸ್‌ಗೆ ತಿರುಗುತ್ತದೆ . ಕೆರಟೋನಸ್ ಒಂದು ಪ್ರಗತಿ ಹೊಂದುವ ರೋಗವಾಗಿದ್ದು , ಚಿಕಿತ್ಸೆ ಪಡೆಯದಿದ್ದರೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಬಂದು ಕ್ರಮೇಣ ದೃಷ್ಟಿ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ . ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಕೆರಟೊಕೊನಸ್‌ ಪ್ರಕರಣಗಳು ಶೇ . 10 ರಷ್ಟು ಹೆಚ್ಚಾಗಿವೆ . ಇದಕ್ಕೆ ಪ್ರಮುಖ ಕಾರಣ ಮಕ್ಕಳಲ್ಲಿ ಕಣ್ಣಿನ ಅಲರ್ಜಿ ಹೆಚ್ಚಾಗುತ್ತಿರುವುದಾಗಿದೆ . ಅದೃಷ್ಟವಶಾತ್ , ಆರಂಭಿಕ ಹಂತದಲ್ಲಿಯೇ ಈ ರೋಗವನ್ನು ಪತ್ತೆ ಮಾಡುವ ಮತ್ತು ಚಿಕಿತ್ಸೆ ನೀಡುವ ವ್ಯವಸ್ಥೆಗಳು ಇರುವುದರಿಂದ ರೋಗ ಉಲ್ಬಣವಾಗುವುದನ್ನು ತಪ್ಪಿಸಬಹುದಾಗಿದೆ ” ಎಂದು ಅಭಿಪ್ರಾಯಪಟ್ಟರು . ಕರಟೊಕೊನಸ್‌ ಅನ್ನು ಪತ್ತೆ ಮಾಡುವ ಅಥವಾ ಆ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ಡಾ . ಅಗರ್‌ವಾಲ್ ಆಸತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇ . 20 ರಿಂದ 25 ರಷ್ಟು ಹೆಚ್ಚಳ ಕಂಡುಬಂದಿದೆ . 2017 – 18 ರಲ್ಲಿ ನಾವು ಕೆರಟೊಕೊನಸ್‌ನ 400 ಪ್ರಕರಣಗಳನ್ನು ಪತ್ತೆ ಮಾಡಿದ್ದರೆ , 2018 – 19 ನೇ ಸಾಲಿನಲ್ಲಿ 480 ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ . ಕನ್ನಡಕಗಳನ್ನು ಧರಿಸಿದರೂ ಮಸುಕಾದ ದೃಷ್ಟಿ ಇದ್ದರೆ ಅದು ಕೆರಟೋಕೊನಸ್‌ನ ಲಕ್ಷಣವಾಗಿದೆ . ರೋಗಿಗಳು ಕಣ್ಣಿನಲ್ಲಿ ಕಿರಿಕಿರಿ ಅನುಭವಿಸುವುದು , ಕಣ್ಣಿನೊಳಗೆ ಫಾರಿನ್ ಬಾಡಿ ಇರುವ ಅನುಭವವಾಗುವುದು ಅಥವಾ ದೈನಂದಿನ ಚಟುವಟಿಕೆಗಳಲ್ಲಿ ದೃಷ್ಟಿಯ ತೊಂದರೆ ಅನುಭವಿಸುತ್ತಾರೆ . ಬೆಂಗಳೂರಿನ ಡಾ . ಅಗರ್‌ವಾಲ್ ಕಣ್ಣಿನ ಆಸತ್ರೆಯ ವೈದ್ಯರಾದ ಡಾ . ಪ್ರೀತಿ ಅವರು ಮಾತನಾಡಿ , “ ಯಾವುದೇ ಮಗುವು ಕಣ್ಣನ್ನು ನಿರಂತರವಾಗಿ ಉಜ್ಜಿಕೊಳ್ಳುತ್ತಿದ್ದರೆ ಅಲರ್ಜಿಗೆ ಸೂಕ್ತವಾದ ಚಿಕಿತ್ಸೆಯ ಅಗತ್ಯವಿರುತ್ತದೆ . ಇದಲ್ಲದೇ , ಕೆರಟೊಕೊನಸ್ ಇದೆಯೇ ಇಲ್ಲವೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಕಾರ್ನಿಯಲ್ ವಿಶೇಷ ತಜ್ಞರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕಾಗುತ್ತದೆ . ಇಂತಹ ಪರಿಸ್ಥಿತಿಗಳಲ್ಲಿ ಗಾಸ್ ಧರಿಸಿದರೂ ದೃಷ್ಟಿ ಪರಿಪೂರ್ಣವಾಗಿರಲು ಅಥವಾ ಮಸುಕಾದ ದೃಷ್ಟಿ ವಾಸಿಯಾಗಲು ಸಾಧ್ಯವಾಗುವುದಿಲ್ಲ . ಮುನ್ನೆಚ್ಚರಿಕೆ ಕ್ರಮವಾಗಿ ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಾಗಿ ಧೂಳು ಇರುವ ಕಡೆ ಬಿಡಬಾರದು , ಅಲರ್ಜಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು , ಕೃತಕ ಬೆಳಕಿನಿಂದ ದೂರ ಇಡಬೇಕು , ಕಂಪ್ಯೂಟರ್ , ಫೋನ್ ಅಥವಾ ಟಿವಿ ಸೀನ್‌ಗಳನ್ನು ಹೆಚ್ಚಾಗಿ ನೋಡದಂತೆ ಮಾಡಬೇಕು ” ಎಂದು ಸಲಹೆ ನೀಡಿದರು . ಡಾ ಅಗರ್‌ವಾಲ್ ಕಣ್ಣಿನ ಆಸತ್ರೆಯ ಡಾ . ರಘು ನಾಗರಾಜು ಅವರು ಒಂದು ಕಣ್ಣಿನಲ್ಲಿ ಹೆರಟೊಕೊನಸ್‌ನಿಂದ ಬಳಲುತ್ತಿದ್ದ 32 ವರ್ಷದ ರೋಗಿ ಯುವರಾಜ್ ಅವರಿಗೆ ನೀಡಿದ ಚಿಕಿತೆ ಬಗೆ . ವಿವರ ನೀಡಿದರು . ರೋಗಿಯು ಉತ್ತಮ ದೃಷ್ಟಿಯನ್ನು ಕಳೆದುಕೊಂಡಿದ್ದು ದೃಷ್ಟಿಯ ಪ್ರಮಾಣ 6 / 60ಕೆ . ಒಲಿದಿತು . ಆರಂಭದಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಹೊರತಾದ ಚಿಕಿತ್ಸೆಗಳನ್ನು ನೀಡಲು ಪ್ರಯತ್ನಿಸಿದರು . ಆದರೆ , ರೋಗಿಯ ಪರಿಸ್ಥಿತಿ ಗಂಭೀರವಾಗಿತ್ತು . ಅವರ ಕಾರ್ನಿಯಾ ಅತ್ಯಂತ ತೆಳುವಾಗಿತ್ತು . ಈ ಕಾರಣದಿಂದ ಸರ್ಜನ್‌ಗಳು ಕೆರಟೊಪ್ಲಾಸ್ಪಿ ಅಂದರೆ ಕಾರ್ನಿಯಾ ಕಸಿ ಶಸ್ತ್ರಚಿಕಿತ್ಸೆ ಮಾಡುವುದನ್ನು ಆಯ್ಕೆ ಮಾಡಿಕೊಂಡರು . ಈ ಚಿಕಿತ್ಸೆ ನಂತರ ರೋಗಿಯ ದೃಷ್ಟಿಯ ಪ್ರಮಾಣ 6 / 9 ಕ್ಕೆ ಬಂದಿತು ಮತ್ತು ಈಗ ಅವರು ಅತ್ಯುತ್ತಮವಾಗಿ ನೋಡಲು ಸಾಧ್ಯವಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.