• ಕೊಳವೆ ಬಾವಿಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಹೆಸರಿನಲ್ಲಿ 400 ಕೋಟಿಗಳಿಗೂ ಹೆಚ್ಚು ಹಣ ಲೂಟಿ ಮಾಡಿರುವ ಹಗರಣ ಬಯಲು.

• ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮತ್ತೊಂದು ಬೃಹತ್ ಹಗರಣ ಬಯಲು.
• ಕೊಳವೆ ಬಾವಿಗಳು ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ಮಾಣದ ಹೆಸರಿನಲ್ಲಿ 400 ಕೋಟಿಗಳಿಗೂ ಹೆಚ್ಚು ಹಣ ಲೂಟಿ ಮಾಡಿರುವ ಹಗರಣ ಬಯಲು.
• ಹೊಸ 05 ವಲಯಗಳ 66 ವಾರ್ಡ್ ಗಳಲ್ಲಿ ನಡೆದಿರುವ ಹಗರಣ.
• ಹೊಸ 05 ವಲಯಗಳ ಎಲ್ಲ ಮುಖ್ಯ ಅಭಿಯಂತರರು, ಜಂಟಿ ಆಯುಕ್ತರು ಮತ್ತು ಕಾರ್ಯಪಾಲಕ ಅಭಿಯಂತರರುಗಳ ವಿರುದ್ಧ ದೂರುಗಳು ದಾಖಲು.
• ACB, BMTF ಮತ್ತು ಲೋಕಾಯುಕ್ತಗಳಲ್ಲಿ ದೂರುಗಳು ದಾಖಲು.
• ಹಗರಣದ 273 ಪುಟಗಳ ದಾಖಲೆ ಬಿಡುಗಡೆ.
• ಹೊಸ 05 ವಲಯಗಳ 66 ವಾರ್ಡ್ ಗಳ ಪೈಕಿ 50 ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಪಾಲಿಕೆ ಸದಸ್ಯರು, ಅಧಿಕಾರಿಗಳು ಮತ್ತು ಗುತ್ತಿಗೆದಾರರು 400 ಕೋಟಿಗೂ ಹೆಚ್ಚು ಲೂಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪ.
• ರಾಜರಾಜೇಶ್ವರಿ ನಗರ, ಯಶವಂತಪುರ, ಬೆಂಗಳೂರು ದಕ್ಷಿಣ, ಕೆ. ಆರ್. ಪುರ, ಬ್ಯಾಟರಾಯನಪುರ ಮತ್ತು ದಾಸರಹಳ್ಳಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಲೂಟಿ ಮಾಡಲಾಗಿದೆ ಎಂಬ ಆರೋಪ.
• ಕಳೆದ ಎರಡೂವರೆ ಸಾಲುಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬೋರ್ ವೆಲ್ ಗಳನ್ನುಕೊರೆಸಲು, R. O. ಘಟಕಗಳನ್ನು ನಿರ್ಮಿಸಲು ಮತ್ತು ಒಳಚರಂಡಿ ಕೊಳವೆಗಳನ್ನು ಅಳವಡಿಸಲು ಬಿಡುಗಡೆಯಾಗಿರುವ ಮೊತ್ತ ಬರೋಬ್ಬರಿ ₹ 970 ಕೋಟಿ ರೂಪಾಯಿಗಳು.
• ಕೇವಲ ಕೊಳವೆ ಬಾವಿಗಳನ್ನು ಕೊರೆಸಲು ಮಾತ್ರವೇ ₹ 671,16,00,000/- (ಆರು ನೂರಾ ಎಪ್ಪತ್ತೊಂದು ಕೋಟಿ ಹದಿನಾರು ಲಕ್ಷ) ಬಿಡುಗಡೆ.
• R. O. ಘಟಕಗಳನ್ನು ನಿರ್ಮಿಸಲು ₹ 156,16,00,000/- (ಒಂದು ನೂರಾ ಐವತ್ತಾರು ಕೋಟಿ ಹದಿನಾರು ಲಕ್ಷ)
• ಕೇವಲ ಕಳೆದ ಎರಡೂವರೆ ಸಾಲುಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ 9,588 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂಬ ಮಾಹಿತಿ.
• 976 R. O. ಘಟಕಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ.
• ಕೊಳವೆ ಬಾವಿ ಕೊರೆಸಲು ಸರಾಸರಿ 07 ಲಕ್ಷ ವೆಚ್ಛ ಮಾಡಲಾಗಿದೆ ಮತ್ತು R. O. ಘಟಕ ನಿರ್ಮಾಣಕ್ಕೆ ಸರಾಸರಿ 16 ಲಕ್ಷ ವೆಚ್ಛ ಮಾಡಲಾಗಿದೆ ಎಂಬ ಮಾಹಿತಿ.

• ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ ಮತ್ತು ದಾಸರಹಳ್ಳಿ ವಲಯಗಳಲ್ಲಿರುವ 66 ವಾರ್ಡ್ ಗಳಿಗೆ ಮಾತ್ರವೇ ಬೋರ್ ವೆಲ್ ಗಳು ಮತ್ತು R. O. ಘಟಕಗಳಿಗೆ ₹ 701,34,00,000/- (ಏಳು ನೂರಾ ಒಂದು ಕೋಟಿ ಮೂವತ್ತ ನಾಲ್ಕು ಲಕ್ಷ) ಬಿಡುಗಡೆ ಎಂಬ ಆಘಾತಕಾರಿ ಮಾಹಿತಿ.
• 66 ವಾರ್ಡ್ ಗಳಲ್ಲಿ ಕೊಳವೆ ಬಾವಿ ಕೊರೆಸಲು ಒಟ್ಟು ₹ 589,82,00,000/- (ಐದು ನೂರಾ ಎಂಬತ್ತೊಂಬತ್ತು ಕೋಟಿ ಎಂಬತ್ತೆರಡು ಲಕ್ಷ) ಬಿಡುಗಡೆ.
• 66 ವಾರ್ಡ್ ಗಳಲ್ಲಿ R. O. ಘಟಕಗಳ ನಿರ್ಮಾಣಕ್ಕೆ ಒಟ್ಟು ₹ 111,52,00,000/- (ಒಂದು ನೂರಾ ಹನ್ನೊಂದು ಕೋಟಿ ಐವತ್ತೆರಡು ಲಕ್ಷ) ಬಿಡುಗಡೆ.
• ಒಟ್ಟು 9,588 ಕೊಳವೆ ಬಾವಿಗಳ ಪೈಕಿ 05 ವಲಯಗಳ 66 ವಾರ್ಡ್ ಗಳಲ್ಲಿ ಮಾತ್ರವೇ 8,426 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂಬ ಮಾಹಿತಿ.
• ಒಟ್ಟು 976 R. O. ಘಟಕಗಳ ಪೈಕಿ 05 ವಲಯಗಳ 66 ವಾರ್ಡ್ ಗಳಲ್ಲಿ ಮಾತ್ರವೇ 697 ಘಟಕಗಳನ್ನು ನಿರ್ಮಿಸಲಾಗಿದೆ ಎಂಬ ಮಾಹಿತಿ.
• ಹೊಸ 05 ವಲಯಗಳ 66 ವಾರ್ಡ್ ಗಳಲ್ಲಿ ಸರಾಸರಿ 128 ಕೊಳವೆ ಬಾವಿಗಳು ಮತ್ತು 11 R. O. ಘಟಕಗಳನ್ನು ನಿರ್ಮಿಸಲಾಗಿದೆ ಎಂಬ ನಂಬಲಸಾಧ್ಯವಾದ ಮಾಹಿತಿ.
• ಕೊಳವೆ ಬಾವಿಗಳು ಮತ್ತು R. O. ಘಟಕಗಳ ಹೆಸರಿನಲ್ಲಿ ಶೇ. 80 ಕ್ಕೂ ಹೆಚ್ಚು ಅನುದಾನವನ್ನು ಲೂಟಿ ಮಾಡಲಾಗಿದೆ ಎಂಬ ಗಂಭೀರ ಆರೋಪ.
• ಶೇ. 20 ಕ್ಕೂ ಕಡಿಮೆಯಷ್ಟು ಕಾರ್ಯಗಳನ್ನು ಮಾತ್ರವೇ ಮಾಡಿರುವುದು ಪರಿಶೀಲನಾ ಕಾರ್ಯದಲ್ಲಿ ಬಹಿರಂಗ.
• ಉಳಿದಂತೆ ₹ 142,32,00,000/- (ಒಂದು ನೂರಾ ನಲವತ್ತೆರಡು ಕೋಟಿ ಮೂವತ್ತೆರಡು ಲಕ್ಷ) ಗಳನ್ನು ಒಳಚರಂಡಿ ಕೊಳವೆಗಳ ಅಳವಡಿಕೆ ಕಾರ್ಯಕ್ಕೆ ಬಳಸಲಾಗಿದೆ ಎಂಬ ಮಾಹಿತಿ.
• ಹೊಸ 05 ವಲಯಗಳ ಬಹಳಷ್ಟು ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು 400 ಕೋಟಿಗೂ ಹೆಚ್ಚು ಲೂಟಿ ಮಾಡಿದ್ದಾರೆ ಎಂಬ ಗಂಭೀರ ಆರೋಪ.
• ಈ 400 ಕೋಟಿ ಲೂಟಿ ಹಗರಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಮಾನ ಭಾಗೀದಾರರಾಗಿದ್ದಾರೆ.
• R. O. ಘಟಕದ ನಿರ್ಮಾಣಕ್ಕೆ ವಾಸ್ತವವಾಗಿ ತಗಲುವ ವೆಚ್ಛ ₹ 7.5 ಲಕ್ಷ ಮಾತ್ರ.
• ಆದರೆ, ಬಹುತೇಕ R. O. ಘಟಕಗಳ ನಿರ್ಮಾಣಕ್ಕೆ 16 ಲಕ್ಷ ಬಿಡುಗಡೆ ಮಾಡುವ ಮೂಲಕ ದೊಡ್ಡ ಮಟ್ಟದ ಹಗಲು ದರೋಡೆ ಮಾಡಲಾಗಿದೆ.
• ಜನ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿದಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರು.
• ಇಷ್ಟೊಂದು ದೊಡ್ಡ ಪ್ರಮಾಣದ ಲೂಟಿ ಕಾರ್ಯ ನಿರಂತರವಾಗಿ ನಡೆಯುತ್ತಿದ್ದರೂ ಸಹ ಜಾಣ ಮೌನ ವಹಿಸಿರುವ 05 ವಲಯಗಳ ಜಂಟಿ ಆಯುಕ್ತರುಗಳು, ಮುಖ್ಯ ಅಭಿಯಂತರರು ಮತ್ತು ಕಾರ್ಯಪಾಲಕ ಅಭಿಯಂತರರುಗಳು.
• ಬೋರ್ ವೆಲ್ ಗಳು ಮತ್ತು R. O. ಘಟಕಗಳಿಗೆ ಸಂಬಂಧಿಸಿದ ಕಡತಗಳಿಗೆ ಕಣ್ಣು ಮುಚ್ಚಿ ಸಹಿ ಹಾಕುತ್ತಿರುವ ಹಿರಿಯ ಅಧಿಕಾರಿಗಳು.
• ಕಾವೇರಿ ನೀರಿನ ಪೂರೈಕೆ ಅಸಮರ್ಪಕವಾಗಿರುವ ಹೊಸ 05 ವಲಯಗಳಲ್ಲಿ ನೀರಿನ ಸಮಸ್ಯೆ ಬಗೆ ಹರಿಸುವ ಉದ್ದೇಶದಿಂದ ಕೊಳವೆ ಬಾವಿಗಳು ಮತ್ತು R. O. ಘಟಕಗಳಿಗೆ ಅನುಮೋದನೆ ನೀಡಲಾಗಿದೆ.
• ಹೊಸ 05 ವಲಯಗಳಲ್ಲಿ ದಿನ ನಿತ್ಯದ ಸಮಸ್ಯೆಯಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸದುದ್ದೇಶದಿಂದ ಅನುಮೋದನೆ ನೀಡಲಾಗಿದೆ.
• ಮುಗ್ಧ ನಾಗರಿಕರಿಗೆ ನ್ಯಾಯಯುತವಾಗಿ ಕಲ್ಪಿಸಬೇಕಿರುವ ಕುಡಿಯುವ ನೀರಿನ ಸೌಲಭ್ಯದ ಹೆಸರಿನಲ್ಲಿ ನೂರಾರು ಕೋಟಿ ನುಂಗಿ ಹಾಕುತ್ತಿರುವ ವಂಚಕರು.
• ಕುಡಿಯುವ ನೀರಿನ ಸೌಲಭ್ಯವನ್ನು ಅನುಷ್ಠಾನಗೊಳಿಸುವ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಜನಪ್ರತಿನಿಧಿಗಳು / ಅಧಿಕಾರಿಗಳು.
• ಎಲ್ಲ ಯೋಜನೆಗಳಲ್ಲೂ ಕೇವಲ ಹಣ ನುಂಗಿಹಾಕುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಭ್ರಷ್ಟರು.
• ಕೊಳವೆ ಬಾವಿಗಳನ್ನು ಕೊರೆಸುವ ಮತ್ತು R. O. ಘಟಕಗಳನ್ನು ನಿರ್ಮಿಸುವ ಹೆಸರಿನಲ್ಲಿ 400 ಕೋಟಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಬೃಹತ್ ಹಗರಣವನ್ನು ಕೂಡಲೆ CBI ಅಥವಾ CID ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ N. R. ರಮೇಶ್.
• ಜನಪ್ರತಿನಿಧಿಗಳೊಂದಿಗೆ ಷಾಮೀಲಾಗಿ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ N. R. ರಮೇಶ್.
• ಕೊಳವೆ ಬಾವಿಗಳನ್ನು ಕೊರೆಸದೆಯೇ ಮತ್ತು R. O. ಘಟಕಗಳನ್ನು ನಿರ್ಮಿಸದೆಯೇ ನೂರಾರು ಕೋಟಿ ವಂಚಿಸಿರುವ ಎಲ್ಲ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಆಗ್ರಹ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.