ಗರ್ಭಿಣಿಯರ ಅಧಿಕ ರಕ್ತದೊತ್ತಡದ ಸೂಕ್ತ ನಿರ್ವಹಣೆಯಿಂದ ತಾಯಿ ಮರಣವನ್ನು ಕಡಿಮೆ ಮಾಡಬೇಕು : ವಿಕ್ರಂ ಆಸ್ಪತ್ರೆ ವೈದ್ಯರ ಕರೆ

– ಅಧಿಕ ರಕ್ತದೊತ್ತಡದಿಂದ ಭಾರತದಲ್ಲಿ ಪ್ರತಿವರ್ಷ 50 , 000 ಮಹಿಳೆಯರ ಸಾವು

– ಕರ್ನಾಟಕದಲ್ಲಿ ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡದಿಂದ ಉಂಟಾಗುವ ಅಸ್ವಸ್ಥತೆ ಪ್ರಮಾಣ ಸುಮಾರು ಶೇ . 6 – 8 ರಷ್ಟು .

– ಭಾರತದಲ್ಲಿ ಇದರ ಪ್ರಮಾಣ ಶೇ . 7 – 8 ರಷ್ಟಿದೆ .

ಬೆಂಗಳೂರು , ಮೇ 16 , 2019 : ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಅಸ್ವಸ್ಥತೆಗಳು ಭಾರತದಲ್ಲಿ ಪ್ರಸೂತಿ ಪದ್ದತಿಯಲ್ಲಿ ಇನ್ನೂ ಅತ್ಯಂತ ಗಣನೀಯ ಮತ್ತು ಪರಿಹಾರ ಕಾಣದ ಸಮಸ್ಯೆಗಳಾಗಿ ಕಾಡತೊಡಗಿವೆ . ಪ್ರತಿ ವರ್ಷ ಜಗತ್ತಿನಲ್ಲಿ 10 ದಶಲಕ್ಷದಷ್ಟು ಮಹಿಳೆಯರು ಗರ್ಭಾವಸ್ಥೆ ಸಂದರ್ಭದಲ್ಲಿ ಅಧಿಕ ರಕ್ತದೊತ್ತಡವನ್ನು ಅನುಭವಿಸುತ್ತಿದ್ದಾರೆ . ಈ ಪೈಕಿ 76 , 000 ದಷ್ಟು ಮಹಿಳೆಯರು ನೇರವಾಗಿ ಅಧಿಕ ರಕ್ತದೊತ್ತಡದ ಕಾರಣದಿಂದ ಸಾವನ್ನಪ್ಪುತ್ತಿದ್ದಾರೆ . ಆಶ್ಚರ್ಯವೆಂದರೆ ಭಾರತವೊಂದರಲ್ಲೇ 50 , 000 ದಷ್ಟು ಗರ್ಭಿಣಿಯರು ಸಾವಿಗೀಡಾಗುತ್ತಿದ್ದಾರೆ . ಪ್ರತಿವರ್ಷ ಮೇ 17 ನ್ನು ವಿಶ್ವ ಅಧಿಕ ರಕ್ತದೊತ್ತಡ ದಿನವನ್ನಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ವೈದ್ಯರು ಈ ಆಘಾತಕಾರಿ ಅಂಕಿಅಂಶಗಳನ್ನು ಉಲ್ಲೇಖ ಮಾಡುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ . ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆ , ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗಗಳನ್ನು ಎನ್‌ ಐ ಸಿ ಯು ಯೊಂದಿಗೆ ಆರಂಭಿಸುತ್ತಿರುವುದಾಗಿ ಆಸ್ಪತ್ರೆ ಘೋಷಣೆ ಮಾಡಿದೆ . ಬೆಂಗಳೂರಿನ ವಿಕ್ರಂ ಆಸತ್ರೆಯ ಪ್ರಸೂತಿ & ಸೀರೋಗ ತಜ್ಞ ವೈದ್ಯರಾದ ಡಾ . ಎನ್ . ವೆಂಕಟೇಶ್ ಅವರು ಮಾತನಾಡಿ , “ ಕರ್ನಾಟಕದಲ್ಲಿ ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡದಿಂದ ಉಂಟಾಗುವ ಅಸ್ವಸ್ಥತೆ ಪ್ರಮಾಣ ಸುಮಾರು ಶೇ . 6 – 8 ರಷ್ಟಿದೆ . ಭಾರತದಲ್ಲಿ ಇದರ ಮಟ್ಟ ಶೇ . 7 – 8 ರಷ್ಟಿದೆ . ಗರ್ಭಿಣಿಯರು ಸಾವನ್ನಪ್ಪುತ್ತಿರುವ ಪ್ರಮಾಣದ ಶೇ . 30 ರಷ್ಟು ಸಾವುಗಳು ಅಧಿಕ ರಕ್ತದೊತ್ತಡದಿಂದ ಸಂಭವಿಸುತ್ತಿವೆ . ಭಾರತದಲ್ಲಿ ಈ ಸ್ಥಿತಿಯಲ್ಲಿ ಪ್ರತಿ ಗಂಟೆಗೆ ಐವರು ತಾಯಂದಿರು ಸಾವನ್ನಪ್ಪುತ್ತಿದ್ದಾರೆ ” ಎಂದು ತಿಳಿಸಿದರು . ಗರ್ಭಿಣಿಯಾದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡ ತಾಯಿ ಮತ್ತು ಶಿಶುವಿನ ಮೇಲೆ ನಕಾರಾತ್ಮಕವಾದ ಪರಿಣಾಮಗಳನ್ನು ಬೀರುತ್ತದೆ .

ಈ ಬಗ್ಗೆ ವಿವರ ನೀಡಿದ ವಿಕ್ರಂ ಆಸ್ಪತ್ರೆಯ ಪ್ರಸುತಿ & ಸ್ತ್ರೀರೋಗ ತಜ್ಞ ವೈದ್ಯರಾದ ಡಾ . ಶಶಿಕಲಾ ಕ್ಷೀರಸಾಗರ ಅವರು , “ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡವು ಪ್ರಸವಪೂರ್ವ ಜನನ , ಸೆಳೆತ , ಭ್ರೂಣದ ಬೆಳವಣಿಗೆಯಲ್ಲಿ ಕುಂಠಿತ , ಗರ್ಭಾಶಯದಿಂದ ಬಹುಬೇಗನೇ ಹೊಕ್ಕುಳ ಬಳ್ಳಿ ಬೇರ್ಪಡುವುದು , ಮೂತ್ರದಲ್ಲಿ ಪ್ರೊಟೀನ್ ಮತ್ತು ದೀರ್ಘಕಾಲೀನ ಮೂತ್ರಪಿಂಡ ರೋಗಕ್ಕೆ ಕಾರಣವಾಗುತ್ತದೆ . ಇದಲ್ಲದೇ , ಭ್ರೂಣವು ಆಸಿಯಾ , ಪ್ರಮೆಚೂರಿಟಿ , ವಿಪತ್ತು ಹೆಚ್ಚಾಗುವುದು ಮತ್ತು ಸಾವೂ ಕೂಡ ಸಂಭವಿಸಬಹುದು ‘ ಎಂದು ಹೇಳಿದರು . ಗರ್ಭಾವಸ್ಥೆಯಲ್ಲಿದ್ದಾಗ ಅಧಿಕ ರಕ್ತದೊತ್ತಡ ಕಾಣಿಸಿಕೊಂಡರೆ ಕಾಲುಗಳಲ್ಲಿ ಊತ ಉಂಟಾಗುವುದು . ಮುಖದಲ್ಲಿ , ಕಿಬ್ಬೊಟ್ಟೆ ಅಥವಾ ಇಡೀ ದೇಹದಲ್ಲಿ ಊತ , ವಾರಕ್ಕೆ 2 ಕೆಜಿಯಂತೆ ದೇಹದಲ್ಲಿ ತೂಕದಲ್ಲಿ ಹೆಚ್ಚಳವಾಗುವುದು , ತಲೆನೋವು ಮತ್ತು ದೃಷ್ಟಿಯಲ್ಲಿ ಉರಿ ಕಾಣಿಸಿಕೊಳ್ಳಲಾರಂಭಿಸುತ್ತದೆ . ಮಹಿಳೆಯರು ಮೊದಲ ಬಾರಿಗೆ ಗರ್ಭ ಧರಿಸಿದಾಗ , ಬೊಜ್ಜು ಇರುವ ಮಹಿಳೆಯರು . ಅವಳಿ – ಜವಳಿ ಅಥವಾ ತ್ರಿವಳಿ ಭ್ರೂಣಗಳನ್ನು ಹೊಂದಿರುವ ಅಥವಾ ವಂಶಪಾರಂಪರ್ಯವಾಗಿ ಅಧಿಕರಕ್ತದೊತ್ತಡ ಇರುವ ಇತಿಹಾಸ ಇದ್ದ ಮಹಿಳೆಯರ ಸ್ಥಿತಿ ತೀರಾ ದುರ್ಬಲವಾಗಿರುತ್ತದೆ .

ವಿಕ್ರಂ ಆಸತ್ರೆಯ ಕನಲ್ವೆಂಟ್ ನ್ಯೂರೋಲಾಜಿಸ್ಟ್ ಡಾ . ಮೋಹನ್ ಡಿ . ಮಹೇಂದ್ರಕರ್‌ ಅವರು ಮಾತನಾಡಿ , “ ಜೀವನಶಯಲಿಯಲ್ಲಿ ಮಾರ್ಪಾಟು ಮಾಡಿಕೊಂಡರೆ ಮತ್ತು ಕೆಲವು ಔಷಧಗಳನ್ನು ತೆಗೆದುಕೊಂಡರೆ ಗರ್ಭಿಣಿಯರಲ್ಲಿ ಅಧಿಕ ರಕ್ತದೊತ್ತಡವನ್ನು ತಡೆಗಟ್ಟಬಹುದಾಗಿದೆ . ಆದಾಗ್ಯೂ , ಈ ಗಂಭೀರ ಸ್ವರೂಪದ ಅಧಿಕ ರಕ್ತದೊತ್ತಡವನ್ನು ನಿರ್ವಹಣೆಯನ್ನು ಉತ್ತಮವಾಗಿ ಮಾಡಿದರೆ ಮಾತ್ರ ಪ್ರಸವ ಸುಗಮವಾಗಿ ಆಗಲಿದೆ . ಸಮಯ , ಪ್ರಸವದ ಸ್ಥಳವನ್ನು ಉತ್ತಮವಾಗಿಡಬೇಕು ಮತ್ತು ಸಮತೋಲಿತವಾದ ರೀತಿಯಲ್ಲಿ ಪ್ರಸವ ಮತ್ತು ಪ್ರಸವ ಹಾಗೂ ತಾಯಿಯ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟುವುದು ಬಹಳ ಪ್ರಮುಖವಾಗಿದೆ ” ಎಂದು ಸಲಹೆ ನೀಡಿದರು .

ವಿಕ್ರಂ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ . ಅನಿಲ್ ಎಂ . ಯು ಅವರು ಮಾತನಾಡಿ , “ ಗರ್ಭಿಣಿಯರಲ್ಲಿ ಹೈಪರ್‌ಟೆನ್ಸಿವ್ ಅಂದರೆ ಅಧಿಕ ರಕ್ತದೊತ್ತಡದ ಅಸ್ವಸ್ಥತೆಗಳು ಭಾರತದಲ್ಲಿ ಪ್ರಸೂತಿ ಸಂದರ್ಭದಲ್ಲಿ ಹೆಚ್ಚು ಅಪಾಯಕಾರಿ ಆಗಿರುವುದು ಸಾಮಾನ್ಯದ ಸಂಗತಿಯಾಗಿದೆ . ಅಪಾಯದ ಅಂಶಗಳನ್ನು ಹೊಂದಿರುವ ಗರ್ಭಿಣಿಯರು ನಿಯಮಿತವಾಗಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು . ವಿಶೇಷವಾಗಿ ರಕ್ತದೊತ್ತಡ ಮತ್ತು ಭ್ರೂಣದ ಬೆಳವಣಿಗೆಯನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳಬೇಕು . ಎಡಮಾ , ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು , ಹೆಚ್ಚು ಬಿಪಿ , ತಲೆನೋವು , ನೋವು ಸೇರಿದಂತೆ ಮತ್ತಿತರೆ ಅಸಹಜವಾದ ಸಮಸ್ಯೆಗಳು ಎದುರಾದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ” ಎಂದು ಸಲಹೆ ನೀಡಿದರು .

ಆಸ್ಪತ್ರೆಯಲ್ಲಿ ಮಕ್ಕಳ ಚಿಕಿತ್ಸೆ , ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾ ವಿಭಾಗಗಳನ್ನು ಎನ್‌ ಐ ಸಿ ಯು- ಯೊಂದಿಗೆ ಆರಂಭಿಸುತ್ತಿರುವುದಾಗಿ ಆಸ್ಪತ್ರೆ ಘೋಷಣೆ ಮಾಡಿ ಮಾತನಾಡಿದ ವಿಕ್ರಂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸಿಇಒ ಡಾ . ಸೋಮೇಶ್ ಮಿತ್ತಲ್ ಅವರು , “ ಭಾರತದಲ್ಲಿ ತಾಯಿ ಮತ್ತು ಶಿಶುವಿನ ಸಾವಿನ ಪ್ರಮಾಣವನ್ನು ತಗ್ಗಿಸುವುದು ದೊಡ್ಡ ಮತ್ತು ಗಂಭೀರ ಸ್ವರೂಪದ ಸವಾಲಾಗಿ ಪರಿಣಮಿಸಿದೆ . ನಮ್ಮ ಹೊಸ ಪ್ರಸೂತಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗವು ಅತ್ಯಾಧುನಿಕ ಉಪಕರಣಗಳಿಂದ ಸುಸಜ್ಜಿತವಾಗಿದ್ದು , ಪರಿಣತ ವೈದ್ಯರನ್ನೊಳಗೊಂಡಿವೆ . ಈ ಮೂಲಕ ಗರ್ಭಿಣಿಯರಲ್ಲಿ , ಮಗುವಿನ ಜನನ ಮತ್ತು ಶಿಶುಗಳಲ್ಲಿ ಕಾಣಿಸಿಕೊಳ್ಳುವ ಸಂಕೀರ್ಣವಾದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ . ಬೆಂಗಳೂರಿನ ಆರೋಗ್ಯ ರಕ್ಷಣಾ ಕ್ಷೇತ್ರಕ್ಕೆ ನಮ್ಮ ಈ ಸೌಲಭ್ಯಗಳು ಹೊಸ ಸೇರ್ಪಡೆಯಾಗಿವೆ ” ಎಂದು ತಿಳಿಸಿದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.