ಉಮೇಶ್ ಅಂಗಡಿಯಲ್ಲಿರುವಾಗ್ಗೆ ಕಿಶೋರ್ ಮತ್ತು ಆತನ ಸಹಚರರು ಉಮೇಶ್‌ರವರ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆ

ರಾಜಗೋಪಾಲನಗರ ಪೊಲೀಸ್ ಠಾಣಾ ಸರಹದ್ದಿನ ಹೆಗ್ಗನಹಳ್ಳಿ ಶ್ರೀಗಂಧನಗರ , 2ನೇ ಕ್ರಾಸ್‌ನಲ್ಲಿ ಮಂಡ್ಯ ಮೂಲದ ಉಮೇಶ್ , 37 ವರ್ಷ ಎಂಬುವರು ಕಬಾಬ್ ಅಂಗಡಿಯನ್ನು ನಡೆಸುತ್ತಿದ್ದರು . 13 ವರ್ಷಗಳ ಹಿಂದೆ ರೂಪ ಎಂಬುವವರನ್ನು ಮದುವೆಯಾಗಿರುತ್ತಾರೆ , ದಿನಾಂಕ 12 – 05 – 2019 ರಂದು ರಾತ್ರಿ 9 – 30 ಗಂಟೆಯಲ್ಲಿ ಉಮೇಶ್ ಅಂಗಡಿಯಲ್ಲಿರುವಾಗ್ಗೆ ಕಿಶೋರ್ ಮತ್ತು ಆತನ ಸಹಚರರು ಉಮೇಶ್‌ರವರ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ .

ಈ ಪ್ರಕರಣದ ಆರೋಪಿಗಳಾದ 1 ) ರವೀಶ್ ( @ ರವಿ , 44 ವರ್ಷ , ಹೆಗ್ಗನಹಳ್ಳಿ , ಬೆಂಗಳೂರು ನಗರ , ಸ್ವಂತ ವಿಳಾಸ ಜಾವಗಲ್ , ಅರಸೀಕೆರೆ ತಾಲ್ಲೂಕ , ಹಾಸನ ಜಿಲ್ಲೆ , 2 ) ಜಿತೇಂದ್ರ @ ಜಿತು , 30 ವರ್ಷ , ಹೆಗ್ಗನಹಳ್ಳಿ , ಬೆಂಗಳೂರು ನಗರ , ಸ್ವಂತ ವಿಳಾಸ ಹೊಳೆನರಸೀಪುರ , ಹಾಸನ ಜಿಲ್ಲೆ . 3 ) ಸುಮಂತರಾಜ್ ( @ ಸುಮಂತ್ , 29 ವರ್ಷ , ಅಂದ್ರಹಳ್ಳಿ , ಬೆಂಗಳೂರು ನಗರ ಸ್ವಂತ ವಿಳಾಸ ಸಖರಾಯಪಟ್ಟಣ , ಕಡೂರು ತಾಲ್ಲೂಕ , ಚಿಕ್ಕಮಗಳೂರು ಜಿಲ್ಲೆ . 4 ) ಪ್ರದೀಪ್ ಕುಮಾರ್ ( @ ಪ್ರದೀಪ್ , 40 ವರ್ಷ , ಆಂದ್ರಪಳ್ಳಿ , ಬೆಂಗಳೂರು ನಗರ , ಸ್ವಂತ ವಿಳಾಸ ಹಿರಿಯೂರು ತಾಲ್ಲೂಕ ಚಿತ್ರದುರ್ಗ ಜಿಲ್ಲೆ , ಎಂಬುವರುಗಳನ್ನು ದಸ್ತಗಿರಿ ಮಾಡುವಲ್ಲಿ ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ . ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಕಿಶೋರ್ ಎಂಬುವವನು ಮೃತ ಹೊಂದಿರುವ ಉಮೇಶ್‌ನ ಪತ್ನಿ ರೂಪಳೊಂದಿಗೆ 7 – 8 ತಿಂಗಳಿಂದ ಸ್ನೇಹ ಬೆಳಸಿಕೊಂಡು ಆಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು , ಸ್ವಲ್ಪ ದಿನಗಳ ನಂತರ ಕಿಶೋರ್‌ ಮತ್ತು ರೂಪ ನಡುವೆ ಗಲಾಟೆಯಾಗಿರುತ್ತದೆ . ಈ ಹಿಂದೆ ಕಿಶೋರ್ ರೂಪಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದ ವಿಡಿಯೋ ಚಿತ್ರೀಕರಣವನ್ನು ಆಕೆಗೆ ಗೊತ್ತಿಲ್ಲದಂತೆ ಚಿತ್ರಿಕರಿಸಿ ಇಟ್ಟುಕೊಂಡಿದ್ದು , ತನ್ನ ಪೇಸ್ ಬುಕ್ ಖಾತೆಯಲ್ಲಿ ಹಾಕಿರುತ್ತಾನೆ . ಈ ಸಂಬಂಧವಾಗಿ ರೂಪ ಮತ್ತು ಆಕೆಯ ಗಂಡ ಉಮೇಶ್‌ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು , ಈ ಪ್ರಕರಣದಲ್ಲಿ ಪೊಲೀಸರು ಆರೋಪಿ ಕಿಶೋರ್‌ನನ್ನು ದಸ್ತಗಿರಿ ಮಾಡಿ ಜೈಲಿಗೆ ಕಳುಹಿಸಿರುತ್ತಾರೆ . ಜಾಮೀನಿನ ಮೇಲೆ ಹೊರಗೆ ಬಂದ ಕಿಶೋರ್ , ರೂಪ ಮತ್ತು ಆಕೆಯ ಗಂಡನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ತನ್ನ 3 – 4 ಜನ ಸ್ನೇಹಿತರೊಂದಿಗೆ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿರುತ್ತದೆ . ಈ ಪ್ರಕರಣದಲ್ಲಿ ಆರೋಪಿಯಾದ ಕಿಶೋರ್ ಎಂಬುವನು ತಲೆ ಮರೆಸಿಕೊಂಡಿದ್ದು , ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ . ಈ ಪ್ರಕರಣದಲ್ಲಿ ಶ್ರೀ ಎ . ಧನಂಜಯ , ಎಸಿಪಿ , ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ದಿನೇಶ್ ಪಾಟೀಲ್ , ಪೊಲೀಸ್ ಇನ್ಸ್‌ಪೆಕ್ಟರ್ , ರಾಜಗೋಪಾಲನಗರ ಪೊಲೀಸ್ ಠಾಣೆ , ಶ್ರೀ ಸಿ . ರವಿಕುಮಾರ್ , ಪಿಎಸ್‌ಐ ಮತ್ತು ಸಿಬ್ಬಂದಿಯವರುಗಳಾದ ಹೆಚ್ಸಿ 6648 , ಶಿವಕುಮಾರ್ , ಹೆಚ್ಸಿ 8155 ಶ್ರೀ ಪರಮೇಶ್ , ಹೆಚ್ಸಿ 5134 ಶ್ರೀ ಸಿದ್ದಪ್ಪ , , ಪಿಸಿ 7162 ಜೈಶಂಕರ್ , ಪಿಸಿ 15587 ಶ್ರೀ ಶಿವಸ್ವಾಮಿ , ಪಿಸಿ – 10561 ಶ್ರೀ ಪ್ರಕಾಶ್ ನಾಯ್ಕ ಎಂಬುವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.