ಪ್ರತ್ಯೇಕ ಆಸ್ಟ್ರೇಲಿಯನ್ ವಜ್ರಾಭರಣಗಳ ಸಂಗ್ರಹವನ್ನು ಅನಾವರಣಗೊಳಿಸಿದ ಮಿಥಾಲಿ ರಾಜ್

ಬೆಂಗಳೂರು , ಮೇ 30 , 2019 : ರಿಯೋ ಟಿಂಟೊ ಸಂಸ್ಥೆ ಈಗ ಜಾಯಲುಕ್ಕಾಸ್ ನೊಂದಿಗೆ ಪಾಲುದಾರಿಕೆಯಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಆರ್ಗೈಲ್ ಗಣಿಯ ವಜಗಳಿಂದ ಆಭರಣಗಳ ಪ್ರತ್ಯೇಕ ಸಂಗ್ರಹವನ್ನು ಬಿಡುಗಡೆ ಮಾಡಿದೆ . ಈ ಪ್ರತ್ಯೇಕ ವಧು ಮತ್ತು ಫ್ಯಾಷನ್ ಆಭರಣ ಶ್ರೇಣಿಯನ್ನು ಜಾಯಲುಕ್ಕಾಸ್ ಲಿಮಿಟೆಡ್ ಎಡಿಷನ್ ” ಆಸ್ಟ್ರೇಲಿಯನ್ ಡೈಮಂಡ್ಸ್ ಎಲೆಗೆನ್ನಾ ಕಲೆಕ್ಷನ್ ಎಂದು ಹೆಸರಿಸಲಾಗಿದ್ದು , ಭಾರತದ ಎಲ್ಲೆಡೆ ಆಯ್ದ ಮಳಿಗೆಗಳಲ್ಲಿ ಲಭ್ಯವಿರುತ್ತದೆ . ಭಾರತ ಮಹಿಳಾ ಕ್ರಿಕೆಟ್ ತಂದ ನಾಯಕಿ ಮತ್ತು ರಿಯೊ ಟಿಂಟೋ ಆಸ್ಟ್ರೇಲಿಯನ್ ವಜಗಳ ಕಾರ್ಯಕ್ರಮದ ಅಧಿಕೃತ ರಾಯಭಾರಿ ಮಿಥಾಲಿ ರಾಜ್ ಅವರು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಜೋಯಲುಕ್ಕಾಸ್‌ನ ಪ್ರಮುಖ ಮಳಿಗೆಯಲ್ಲಿ ಪ್ರತ್ಯೇಕ 2019 ಸಂಗ್ರಹವನ್ನು ಅನಾವರಣಗೊಳಿಸಿದರು .

ಮಿಥಾಲಿ ರಾಜ್ ಅವರು ಮಾತನಾಡಿ , “ ಜಾಯಲುಕ್ಕಾಸ್ “ ಲಿಮಿಟೆಡ್ ಎಡಿಷನ್ ” ಆಸ್ಟ್ರೇಲಿಯನ್ ವಜ್ರಗಳ ಸಂಗ್ರಹ ವನ್ನು ಬಿಡುಗಡೆ ಮಾಡುವುದಕ್ಕೆ ಹರ್ಷಿಸುತ್ತೇನೆ . ಒಂದುಕಾಲದಲ್ಲಿ ರಾಜರು , ರಾಣಿಯರು ಮತ್ತು ಹಾಲಿವುಡ್ ತಾರೆಯರಿಗೆ ಮಾತ್ರ ಈ ವಜ್ರ ಖರೀದಿಸಲು ಸಾಧ್ಯವಾಗುತ್ತಿತ್ತು . ಈ ಸಂಗ್ರಹ ಭಾರತದಲ್ಲಿನ ಗ್ರಾಹಕರಿಗೆ ಅತ್ಯಂತ ಹೆಚ್ಚಾಗಿ ಕೈಗೆಟುಕುವಂತೆ ಸಾದರಪಡಿಸುತ್ತಿದೆ ” ಎಂದರು .

ಜಾಯಲುಕ್ಕಾಸ್ “ ಲಿಮಿಟೆಡ್ ಎಡಿಷನ್ ” ಎಲೆಗೆನ್ನಾ ಕಲೆಕ್ಷನ್ ಈ ಹಿಂದೆ . ಮಹಾರಾಜರಿಗೆ ಮಾತ್ರ ಖರೀದಿಸಲು ಸಾಧ್ಯವಿದ್ದ ಅನ್‌ಕಟ್ ಅಥವ ಶಕ್ತಿ ವಜ್ರಗಳನ್ನು ಸಾದರಪಡಿಸುತ್ತಿದೆ . ಮೂಲದಿಂದ ಅಂತಿಮ ಹಂತದವರೆಗೆ ಈ ವಜಗಳನ್ನು ನೀತಿಯುತವಾಗಿ ಸಂಗ್ರಹಿಸಲಾಗುತ್ತದೆ .

ಭಾರತದಲ್ಲಿ ರಿಯೊ ಟಿಂಟೊ ವಜ್ರ ಮಾರಾಟ ಮತ್ತು ಮಾರುಕಟ್ಟೆ ಚಟುವಟಿಕೆಗಳ ನಿರ್ದೇಶಕರಾದ ವಿಕ್ರಮ್ ಮರ್ಚೆಂಟ್ ಅವರು ಮಾತನಾಡಿ , ` ಶುದ್ಧ ಮತ್ತು ಮೂಲವನ್ನು ಗುರುತಿಸಬಹುದಾದ ರಿಯೋ ಟಿಂಟೋನ ವಜ್ರಗಳ ಪರಂಪರೆಯನ್ನು ಆಸ್ಟ್ರೇಲಿಯನ್ ಡೈಮಂಡ್ ಪ್ರೋಗ್ರಾಮ್ ಸಂಭ್ರಮಿಸುತ್ತದೆ ” ಎಂದರು .

ಜಾಯಲುಕ್ಕಾಸ್ ಗ್ರೂಪ್‌ನ ಸಿಇಒ ಬಾಬಿ ಜಾರ್ಜ್ ಅವರು ಮಾತನಾಡಿ , ” ರಿಯೋ ಟಿಂಟೊ ಜಗತ್ತಿನ ಮುಂಚೂಣಿಯ ವಜ್ರ ಉತ್ಪಾದಕರಾಗಿದ್ದು , ಇದರೊಂದಿಗೆ ಪಾಲುದಾರಿಕೆ ಜಾಯಲುಕ್ಕಾಸ್‌ಗೆ ನೀತಿಯುತವಾಗಿ ಸಂಗ್ರಹಿಸಲಾದ ನೈಸರ್ಗಿಕ ವಜ್ರಗಳನ್ನು ಪೂರೈಸುತ್ತದೆ ” ಎಂದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.