ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಹಾಗೂ ಮಾರ್ಗದರ್ಶಿ ಎಸ್ ಆರ್ ಹಿರೇಮಠ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಜ ಪರಿವರ್ತನಾ ಸಮುದಾಯದ ಈ ಹೋರಾಟವನ್ನು ಬೆಂಬಲಿಸುವಂತೆ ಕೇಳಿಕೊಳ್ಳಲಿದ್ದಾರೆ

ಜಿಂದಲ್ ಕಂಪೆನಿಗೆ 3 , 666 ಎಕರೆ ಭೂಮಿಯನ್ನು ಶುದ್ದ ಕ್ರಯ ಮಾಡಿ ಕೊಡಲು ಉದ್ದೇಶಿಸಿರುವ ರಾಜ್ಯ ಸರ್ಕಾರದ ಕ್ರಮ ಇದೀಗ ಬಹು ದೊಡ್ಡ ವಿವಾದವಾಗಿದೆ . ಅಕ್ರಮ ಗಣಿಗಾರಿಕೆ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ( SPS ) ಕಳೆದೊಂದು ದಶಕದಿಂದ ನಡೆಸುತ್ತಿರುವ ಹೋರಾಟದ ಫಲವಾಗಿಯೇ ಇಂದು ರಾಜ್ಯ ಮತ್ತು ದೇಶದ ಜನ ಕರ್ನಾಟಕದಲ್ಲಿನ ಅಕ್ರಮಗಣಿಗಾರಿಕೆ ಮತ್ತು ಅದರ ಸುತ್ತಲಿನ ವಿವಾದವನ್ನು ತಿಳಿದುಕೊಳ್ಳಲು ಮತ್ತು ಹೋರಾಟವನ್ನು ಬೆಂಬಲಿಸಲು ಸಾಧ್ಯವಾಗಿದೆ . ಹಾಗಾಗಿಯೇ , ಜನಾಭಿಪ್ರಾಯವನ್ನು ಮನಗಂಡು , ಸಮಾಜ ಪರಿವರ್ತನಾ ಸಮುದಾಯ ಇದೀಗ ಜಿಂದಲ್ ಕಂಪನಿಗೆ ಭಾರೀ ಲಾಭ ಮಾಡಿಕೊಡುವ ಸರ್ಕಾರದ ಈ ನಿರ್ಧಾರದ ವಿರುದ್ದ ಹೋರಾಟ ನಡೆಸಲು ನಿರ್ಧರಿಸಿದೆ . ಸುಪ್ರೀಂ ಕೋರ್ಟ್ ನ | ಹಿಂದಿನ ಅನೇಕ ಆದೇಶಗಳನ್ನು ಗಮನದಲ್ಲಿರಿಸಿದರೆ , ಸರ್ಕಾರದ ನಿರ್ಧಾರ ಮೇಲ್ನೋಟಕ್ಕೆ ಪ್ರಶಸ್ತ ಎನಿಸುತ್ತಿಲ್ಲ . ಈ ಸಂಬಂಧ ಸಮಾಜ ಪರಿವರ್ತನಾ ಸಮುದಾಯ ಕಲೆ ಹಾಕಿರುವ ಕೆಲವು ದಾಖಲೆಗಳನ್ನು ಗಮನಿಸಿದರೆ , ಸರ್ಕಾರದ ನಿರ್ಧಾರ ರಾಜ್ಯದ ಹಿತ ದೃಷ್ಟಿಯಿಂದ ಸೂಕ್ತ ಎನಿಸುತ್ತಿಲ್ಲ . ಈ ನಿಟ್ಟಿನಲ್ಲಿ , ಸಮಾಜ ಪರಿವರ್ತನಾ ಸಮುದಾಯ ಈ ಹೋರಾಟದಲ್ಲಿ ಎಲ್ಲಾ ರೀತಿಯ ಸಂಘ – ಸಂಸ್ಥೆಗಳ ಹಾಗೂ ರಾಜಕೀಯ ಪಕ್ಷಗಳ ಬೆಂಬಲ ನಿರೀಕ್ಷಿಸುತ್ತದೆ . ಕೆಲವೊಂದು ರಾಜಕೀಯ ಪಕ್ಷಗಳು ಹಾಗೂ ಸಂಘ – ಸಂಸ್ಥೆಗಳು ಈಗಾಗಲೇ ಸರ್ಕಾರದ ಈ ನಿರ್ಧಾರದ ವಿರುದ್ದ ಆಕ್ಷೇಪ ವ್ಯಕ್ತಪಡಿಸಿವೆ . ಸಮಾಜ ಪರಿವರ್ತನಾ ಸಮುದಾಯ ಈಗಾಗಲೇ ಈ ಬಗ್ಗೆ ಗದಗ ಶಾಸಕ ಎಚ್ ಕೆ ಪಾಟೀಲ್ ಅವರನ್ನು ಭೇಟಿಯಾಗಿದೆ . ಪಾಟೀಲ್ ಅವರು ಅಕ್ರಮ ಗಣಿಗಾರಿಕೆಯ ಮೇಲಿನ ಲೋಕಾಯುಕ್ತ ವರದಿ ಅನುಷ್ಠಾನ ಸಂಬಂಧ ರಚಿತವಾದ ಸಚಿವ ಸಂಪುಟ ಉಪ ಸಮಿತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುತ್ತಾರೆ ಹಾಗೂ ತಮ್ಮ ಆಕ್ಷೇಪವನ್ನು ಬಹಿರಂಗಗೊಳಿಸಿರುತ್ತಾರೆ . ಸಿಟಿಜೆನ್ ಫಾರ್ ಡೆಮಾಕ್ರೆಸಿ ( ಕರ್ನಾಟಕ ಘಟಕ ) ಕೂಡ ಈ ಉದ್ದೇಶದಲ್ಲಿ ಕೈ ಜೋಡಿಸಲು ನಿರ್ಧರಿಸಿದೆ . ಈ ಹೋರಾಟದ ಮುಂದಿನ ಹೆಜ್ಜೆಯಾಗಿ ಸಮಾಜ ಪರಿವರ್ತನಾ ಸಮುದಾಯ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಿದೆ . ಯಡಿಯೂರಪ್ಪನವರು ಜಿಂದಲ್ ಗೆ ಭೂಮಿ ಮಾರುವ ಸರ್ಕಾರದ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದಾರೆ . ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಹಾಗೂ ಮಾರ್ಗದರ್ಶಿ ಎಸ್ ಆರ್ ಹಿರೇಮಠ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಾಜ ಪರಿವರ್ತನಾ ಸಮುದಾಯದ ಈ ಹೋರಾಟವನ್ನು ಬೆಂಬಲಿಸುವಂತೆ ಕೇಳಿಕೊಳ್ಳಲಿದ್ದಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.