” ರೇಣುಕ , ಬಸವ ಮತ್ತು ಅಕ್ಕಮಹಾದೇವಿಯವರ ಜಯಂತೋತ್ಸವ” 2019ನೇ ಸಾಲಿನ ಪ್ರಶಸ್ತಿ ಪ್ರಧಾನ , ಮತ್ತು ಬಿಹಾರ್ ಹಿಂದಿ ಸಾಹಿತ್ಯ ಶತಮಾನೋತ್ಸವ ಹಾಗೂ ಸಂಸ್ಕೃತ ಸಾಹಿತ್ಯ ಸಮ್ಮೇಳನ

ದಕ್ಷಿಣ ಭಾರತದಲ್ಲಿ ಬಹುಪ್ರಸಿದ್ದರಾದ ಶ್ರೀ ತಿರುವಾಚಕರ್ ಅವರು ಅರವತೂರು ಪುರಾತನರಲ್ಲಿ ಬಹು ಮುಖ್ಯರು . ಅವರ ನೇತೃತ್ವದಲ್ಲಿ ಸ್ಥಾಪನೆಯಾದ ಶ್ರೀ ಕೊಳದಮಠ ಮಹಾಸಂಸ್ಥಾನ . ಈ ಭಾಗದಲ್ಲಿ ಬಹು ಪ್ರಾಚೀನತೆಯ ಇತಿಹಾಸವನ್ನು ಹೊಂದಿರುವ ಶ್ರೀಮಠ . ಕರ್ನಾಟಕ ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆ ದಾಖಲೆಯ ಪ್ರಕಾರ ನಾಡಿನಲ್ಲಿ ಅರವತ್ತೂರು ಶಾಖೆಗಳಿದ್ದವೆಂದು ಐತಿಹ್ಯವಿದೆ . – ಶ್ರೀ ಕೋಳದಮಠ ಮಹಾಸಂಸ್ಥಾನವನ್ನು ಉಳಿಸಿ ಬೆಳೆಸಿದ ತಾಯಿ ಮಹಾಮಾತೆ ಮಾತೃಶ್ರೀ ಶಿವಮ್ಮನವರನ್ನು ನಲವತ್ತೆಂಟು ವರ್ಷಗಳಿಂದ ‘ ಮಾತೃದಿನ ‘ ವೆಂದು ಪೂಜಿಸಿಕೊಂಡು ಬರುತ್ತಿದೆ . ಈ ಶುಭ ಸಂದರ್ಭದಲ್ಲಿ , ನಾಡಿನ ಸಾಂಸ್ಕೃತಿಕ ಪ್ರತಿನಿಧಿಗಳಾದ ರೇಣುಕ , ಬಸವ ಮತ್ತು ಅಕ್ಕ ಮಹಾದೇವಿಯ ಜಯಂತಿಗಳನ್ನು ನಡೆಸಿಕೊಂಡು ಬರುತ್ತಿದೆ . – ಜೊತೆಗೆ ಶೂನ್ಯಸಿಂಹಾಸನದ ಅಧ್ಯಕ್ಷರೂ , ಶರಣ ಸಂಪ್ರದಾಯದ ಶ್ರೇಷ್ಠರೂ ಆದ ಅಲ್ಲಮಪ್ರಭುವಿನ ಹೆಸರಿನಲ್ಲಿ ಸ್ಥಾಪಿಸಿರುವ “ ಅಲ್ಲಮಶ್ರೀ ಪ್ರಶಸ್ತಿ ” ಯನ್ನು ಪ್ರತಿವರ್ಷ ನಾಡಿನಲ್ಲಿ ಅಪರೂಪ ಸೇವೆ ಸಲ್ಲಿಸಿದ ಗಣ್ಯ – ಪುಣ್ಯ ಪುರುಷರನ್ನು ಗುರುತಿಸಿ , ಸನ್ಮಾನಿಸಿಕೊಂಡು ಬಂದಿದೆ . ಈ ವರ್ಷದ ‘ ಅಲ್ಲಮಶ್ರೀ ‘ ಪ್ರಶಸ್ತಿಯನ್ನು ಧರ್ಮರತ್ನಾಕರ ಶ್ರೀ ಷ . ಬ್ರ . ಡಾ | | ಸೊಲ್ಲಾಪುರ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿಯವರು , ಬೃಹನ್ಮಠ , ಹುಟಗಿ ಯವರಿಗೆ ನೀಡಿ ಗೌರವಿಸುತ್ತಿದ್ದೇವೆ . ಇದುವರೆಗೆ ಸುಮಾರು ಇಪ್ಪತ್ತೈದು ಗಣ್ಯ – ಪುಣ್ಯ ಪರುಷರಿಗೆ ನೀಡಿದ್ದೇವೆ . ಎಂದು ತಿಳಿಸಲು ಸಂತೋಷವಾಗುತ್ತದೆ , – ಈ ಶುಭದಿನದಂದು ಧರ್ಮ , ಸಾಹಿತ್ಯ , ಭಾಷೆ , ಜನಪದ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಇದುವರೆಗೆ ನೂರಾರು ಸಮಾವೇಶ , ಸಮ್ಮೇಳನ ಮತ್ತು ಗೋಷ್ಠಿಗಳನ್ನು ಏರ್ಪಡಿಸಿ ರಾಷ್ಟ್ರದಲ್ಲಿಯೇ ಅಗ್ರಮಾನ್ಯತೆಯನ್ನು ಪಡೆದಿದೆ . ಕರ್ನಾಟಕ ರಾಷ್ಟಭಾಷಾ ಸಂಪತ್ತು , ಅಖಿಲಭಾರತ ಭಾಷಾ ಸಾಹಿತ್ಯ ಸಮ್ಮೇಳನ , ಅಖಿಲಭಾರತ ಸಾಧು ಸಮಾಜ , ಅಖಿಲಭಾರತ ಬೇಡ ಜಂಗಮ , ಬುಡಗ ಜಂಗಮ ಮತ್ತು ಮಾಲ ಜಂಗಮ ಅಲ್ಲದೆ ಅಖಿಲ ಕರ್ನಾಟಕ ಭಜನಾ ಕಲಾವಿದರ ವೀರಪುರವಂತರ ಮತ್ತು ಹಿಂದೂ ಸಾಧು ಸತ್ಪುರುಷರ ಸಮಾವೇಶ ಮುಂತಾಗಿ ಹಲವಾರು ಅಪರೂಪದ ಆದರ್ಶದ ಕಾರ್ಯಕ್ರಮಗಳು ಪ್ರತಿವರ್ಷವೂ ನಡೆಸಿಕೊಂಡು ಬಂದಿದೆ .

ಪ್ರಸ್ತುತ 2019ನೇ ಜೂನ್ 14 ಮತ್ತು 15 ರಂದು ಮಹಾಮಾತೆ ಮಾತೃಶ್ರೀ ಶಿವಮ್ಮನವರ 48ನೇ ಸಂಸ್ಮರಣೋತ್ಸವ ಜೊತೆಗೆ ರೇಣುಕ , ಬಸವ , ಅಕ್ಕಮಹಾದೇವಿಯರ ಜಯಂತಿ , ಹಾಗೂ ‘ ಅಲ್ಲಮಶ್ರೀ ‘ ಪ್ರಶಸ್ತಿ ಪ್ರದಾನವಲ್ಲದೆ , ಅಖಿಲ ಭಾರತ ಬೇಡ ಜಂಗಮ , ಬುಡಗ ಜಂಗಮ ಮತ್ತು ಮಾಲ ಜಂಗಮರ ಅಧಿವೇಶನ ಜೊತೆಗೆ ಅಖಿಲ ಕರ್ನಾಟಕ ಭಜನಾ ಕಲಾವಿದರ ವೀರಪುರವಂತ ಸಮಾವೇಶದೊಡನೆ ಈ ವರ್ಷದ ವಿಶೇಷತೆಯಾಗಿ ‘ ಬಿಹಾರ್ ಹಿಂದಿ ಸಾಹಿತ್ಯ ಸಮ್ಮೇಳನದ ಶತಮಾನೋತ್ಸವ ‘ ವನ್ನು ಹಮ್ಮಿಕೊಳ್ಳಲಾಗಿದೆ . – ಈ ಮಹಾ ಸಮಾರಂಭಕ್ಕೆ ಹರಗುರು ಚರಮೂರ್ತಿಗಳು ಮಂತ್ರಿಮಹೋದಯರು , ಶಾಸಕ ಮಿತ್ರರು , ಸಾಹಿತಿ ಕಲಾವಿದರು ಮತ್ತು ಅಸಂಖ್ಯ ಶರಣ ಶರಣೆಯರು ರಾಷ್ಟ್ರದಾದ್ಯಂತವಾಗಿ ಪಾಲ್ಗೊಳ್ಳಲಿದ್ದಾರೆ , ಆದ್ದರಿಂದ ನಾಡಿನ ಜನಪ್ರಿಯ ಹಾಗೂ ಪ್ರಸಿದ್ದ ಮಾಧ್ಯಮ ಸಂಸ್ಥೆಯಾದ ತಾವು ತಮ್ಮ ಪ್ರತಿನಿಧಿಯನ್ನು ಕಳಿಸಿ ಈ ಮಹಾಕಾರ್ಯಕ್ರಮ ವಿಷಯ ಇಡೀ ರಾಜ್ಯಕ್ಕೆ ತಲಪುವಂತೆ ವ್ಯವಸ್ಥೆಮಾಡಿ ಪ್ರಕಟಿಸಿ , ಶ್ರೀ ಜಲಕಂಠೇಶ್ವರ ಸ್ವಾಮಿ ಮತ್ತು ಶ್ರೀ ಗುರುವಿನ ಕೃಪೆಗೆ ಪಾತ್ರರಾಗಿ ಇನ್ನು ನಾಡಿನಲ್ಲಿ ಮಹತ್ತರ ಕೀರ್ತಿಯನ್ನು ತಮ್ಮ ಸಂಸ್ಥೆ ಪಡೆಯುವಂತಾಗಲಿ ಎಂದು ಆಶಿಸುತ್ತೇವೆ .

ಡಾ | | ಶಾಂತವೀರ ಮಹಾಸ್ವಾಮಿಜಿಯವರು ಪೀಠಾಧ್ಯಕ್ಷರು , ಶ್ರೀ ಕೊಳದಮಠ ಮಹಾಸಂಸ್ಥಾನ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.