ರಮೇಶ್ ಅರವಿಂದ್ ಅವರಿಂದ ಬೆಂಗಳೂರಿನಲ್ಲಿ ಮೊದಲ ‘ ದಿ ಹಾಬಿ ಪ್ಲೇಸ್ ” ಉದ್ಘಾಟನೆ

ಬೆಂಗಳೂರು , ಜೂನ್ 15 , 2019 : ಮೈಸೂರಿನ ಸೃಜನಾತ್ಮಕ ಸುಡಿಯೋಗಳಲ್ಲಿ ಒಂದಾಗಿರುವ ಹಾಬಿ ಪ್ಲೇಸ್ ಮತ್ತು ಹಾಬಿ ಸೆಂಟರ್ ಬೆಂಗಳೂರಿನಲ್ಲಿ ತಮ್ಮ ಮೊದಲ ಹಾಬಿ ಪ್ಲೇಸ್ ಅನ್ನು ಆರಂಭಿಸಿವೆ . ಬೆಂಗಳೂರಿನ ಲ್ಯಾಂಗ್‌ಫೋರ್ಡ್ ಗಾರ್ಡನ್‌ನಲ್ಲಿ ಈ ಹಾಜಿ ಪ್ಲೇಸ್ ಅನ್ನು ಖ್ಯಾತ ನಟ ರಮೇಶ್ ಅರವಿಂದ್ ಮತ್ತು ಹಾಲಿ ಪ್ಲೇಸ್‌ನ ಸಂಸ್ಥಾಪಕಿ ಸವಿತಾ ರಂಗ ಅವರು ಇಂದು ಉದ್ಘಾಟಿಸಿದರು .

ಉದ್ಘಾಟನಾ ಸಮಾರಂಭದಲ್ಲಿ ಈ ಸೃಜನಾತಕ ಸುಡಿಯೋವನ್ನು ಆರಂಭಿಸುತ್ತಿರುವ ಉದ್ದೇಶ ಮತ್ತು ಬೆಂಗಳೂರಿನಂತಹ ನಗರಕ್ಕೆ ಇದರ ಅಗತ್ಯತೆಯ ಬಗ್ಗೆ ಸವಿತಾ ರಂಗ ಅವರು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು . ಈ ಕೇಂದ್ರದಲ್ಲಿ ಲಭ್ಯವಿರುವ ವಿವಿಧ ದೃಶ್ಯ ಮತ್ತು ಕಲೆಯನ್ನು ಪ್ರದರ್ಶಿಸಲ್ಪಡುವ ಕಾರ್ಯಾಗಾರಗಳ ಬಗ್ಗೆಯೂ ಮಾಹಿತಿ ನೀಡಿದರು . ಪುರಾತನವಾದ ಕಿನ್ನಾಲ ಕಲೆಯ ಕಲಾವಿದ ಕಿಶೋರ್ ಚಿತ್ರಗಾರ ಅವರು ನಶಿಸುತ್ತಿರುವ ಕನ್ನಾಳ ಕಲೆಯ ಸೌಂದರ್ಯವನ್ನು ಉಣಬಡಿಸಿದರು . ಇದೇ ವೇಳೆ ರಮೇಶ್ ಅರವಿಂದ್ ಅವರು ಮಡಕೆ ತಯಾರಿಸುವ ಚಕ್ರವನ್ನು ತಿರುಗಿಸಿ ಮಡಕೆ ತಯಾರಿಸುವ ಪ್ರಯತ್ನ ಮಾಡಿದರು . ಪ್ರತಿದಿನ ಜೀವನ ಹೇಗೆ ಭಾವನಾತ್ಮಕವಾಗಿರುತ್ತದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಎಂದು ತೋರಿಸಿಕೊಟ್ಟರು .

ಕಳೆದ 6 ವರ್ಷಗಳಿಂದ ಹಾಬಿ ಪ್ಲೇಸ್ ಮೈಸೂರಿನ ಯುವ ಸಮುದಾಯ ಮತ್ತು ಮಕ್ಕಳ ನೆಚ್ಚಿನ ಜನಪ್ರಿಯ ಸೃಜನಾತ್ಮಕ ಸ್ಥಳಗಳಲ್ಲಿ ಒಂದಾಗಿದೆ . ಇಲ್ಲಿಗೆ ಆಗಮಿಸುವ ಈ ಸಮುದಾಯಗಳು ಇಲ್ಲಿ ಕಲಾವಿದರು ನಡೆಸಿಕೊಡುವ ವಿನೂತನವಾದ ಕಾರ್ಯಕ್ರಮಗಳು , ದೈನಂದಿನ ತರಗತಿಗಳು ಮತ್ತು ಕಾರ್ಯಾಗಾರಗಳನ್ನು ವೀಕ್ಷಿಸಿ ಹೊಸ ಅನುಭವವನ್ನು ಪಡೆಯುವುದರೊಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ . ಸೃಜನಾತ್ಮಕ ಕಲಾವಿದರು , ದೃಶ್ಯ ಕಲಾವಿದರು ಮತ್ತು ಕಲಾವಿದರು ಒಟ್ಟಾಗಿ ಸೇರಿ ಇಲ್ಲಿ ಸೃಜನಶೀಲ , ಕಲಿಕೆ , ತರಬೇತಿ , ಪ್ರೇರಣೆ , ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ .

ಈ ಸಂದರ್ಭದಲ್ಲಿ ಮಾತನಾಡಿದ ಹಾಬಿಯ ಸಂಸ್ಥಾಪಕಿ ಸವಿತಾ ಶೆಣೈ ರಂಗ ಅವರು , “ ಹಾಬಿ ಪ್ಲೇಸ್‌ನಲ್ಲಿ ನಾವು ವಿನೋದದ ಸೃಷ್ಟಿಯನ್ನು ನೋಡುತ್ತೇವೆ , ಸಮಗ್ರ ಅಭಿವೃದ್ಧಿಯ ಬಗ್ಗೆ ಚಿಂತಿಸುವ ಆತ / ಆಕೆ ಇಲ್ಲಿ ಸಮರ್ಪಕವಾದ ರೀತಿಯಲ್ಲಿ ಅನುಭವವನ್ನು ಹೊಂದಬಹುದಾಗಿದೆ . ನಮ್ಮ ಪ್ರಮುಖ ಉದ್ದೇಶ ಕಲೆಯ ಬಗ್ಗೆ ಶಿಕ್ಷಣ ನೀಡುವುದು , ಉತ್ಪಾದನೆ , ಉತ್ತೇಜನ ಮತ್ತು ಸಂರಕ್ಷಿಸುವುದಾಗಿದೆ . ಇದಲ್ಲದೇ , ಈ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಹೊಂದುವುದು ಮತ್ತು ಎಲ್ಲರಿಗೂ ವಿನೋದ ನೀಡುವುದಾಗಿದೆ ” ಎಂದು ತಿಳಿಸಿದರು .

“ ಮೈಸೂರಿನ ಹಾಬಿ ಪ್ಲೇಸ್ ಅತ್ಯಂತ ಜನಪ್ರಿಯ ಸೃಜನಾತ್ಮಕ ಸ್ಥಳಗಳಲ್ಲಿ ಒಂದಾಗಿದೆ . ಇದು ಯುವ ಸಮುದಾಯ ಮತ್ತು ಮಕ್ಕಳ ನೆಚ್ಚಿನ ಜನಪ್ರಿಯ ಸೃಜನಾತ್ಮಕ ಸ್ಥಳಗಳಲ್ಲಿ ಒಂದಾಗಿದೆ . ಇಲ್ಲಿಗೆ ಆಗಮಿಸುವ ಈ ಸಮುದಾಯಗಳು ಇಲ್ಲಿ ಕಲಾವಿದರು ನಡೆಸಿಕೊಡುವ ವಿನೂತನವಾದ ಕಾರ್ಯಕ್ರಮಗಳು , ದೈನಂದಿನ ತರಗತಿಗಳು ಮತ್ತು ಕಾರ್ಯಾಗಾರಗಳನ್ನು ವೀಕ್ಷಿಸಿ ಹೊಸ ಅನುಭವವನ್ನು ಪಡೆಯುವುದರೊಂದಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ . ಇದೇ ರೀತಿಯ ಅನುಭವವನ್ನು ಬೆಂಗಳೂರಿನಲ್ಲಿಯೂ ನೀಡಲಿದ್ದೇವೆ ” ಎಂದರು .

ನಟ , ನಿರ್ದೇಶಕ , ಟಿವಿ ಶೋಗಳ ಖ್ಯಾತ ನಿರೂಪಕರಾಗಿರುವ ರಮೇಶ್ ಅರವಿಂದ್ ಅವರು ಮಾತನಾಡಿ , “ ನಮ್ಮ ಅತಿ ವೇಗದ ಜೀವನಶೈಲಿಯಲ್ಲಿ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕೆಲ ಸಮಯವನ್ನು ನೀಡುತ್ತಿಲ್ಲ . ಒಂದು ವೇಳೆ ಭಾವನೆಗಳನ್ನು ವ್ಯಕ್ತಪಡಿಸುವವರಿದ್ದರೆ ಅದು ಬೆರಳೆಣಿಕೆಯಷ್ಟು ಮಾತ್ರ ಇರುತ್ತದೆ ಮತ್ತು ಅದು ಪ್ರಜ್ಞಾಪೂರ್ವಕವಾಗಿರುವುದಿಲ್ಲ . ಈ ಹಾಬಿ ಪ್ಲೇಸ್ ಈ ಎಲ್ಲಾ ಜಂಜಾಟಗಳನ್ನು ಮರೆಸುವಂತಹ ಸ್ಥಳವಾಗಿದೆ . ಇಲ್ಲಿಗೆ ಬರುವವರು ತಮ್ಮ ಒತ್ತಡವನ್ನು ಮರೆಯಬಹುದಾಗಿದೆ ಮತ್ತು ತಮ್ಮ ಪ್ರೀತಿ ಪಾತ್ರರಿಗೆ ವಿಭಿನ್ನ ರೀತಿಯ ಕಲೆಯನ್ನು ಸೃಷ್ಟಿ ಮಾಡಬಹುದಾಗಿದೆ ” ಎಂದು ಅಭಿಪ್ರಾಯಪಟ್ಟರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.