“ರಕ್ಷಾ ಫೌಂಡೇಶನ್ ವತಿಯಿಂದ 10 , 000 ವಿದ್ಯಾರ್ಥಿಗಳಿಗೆ – 1 , 00 , 000 ಪುಸ್ತಕಗಳ ಉಚಿತ ವಿತರಣೆ”

“ ರಕ್ಷಾ ಫೌಂಡೇಷನ್ ಸಂಸ್ಥೆಯು ಕಳೆದ 8 ವರ್ಷಗಳ ಹಿಂದೆ ಪ್ರಾರಂಭಿಸುವುದರೊಂದಿಗೆ ಸಾಮಾಜಿಕ ಕಳಕಳಿಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿರುತ್ತೇವೆ . ಪ್ರತಿ ವರ್ಷದಂತೆ ಈ ವರ್ಷವೂ ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಜಯನಗರ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವು ನೀಡುವುದು ಈ ಸಂಸ್ಥೆಯ ಉದ್ದೇಶವಾಗಿದೆ .

1 ) 1 , 00 , 000 ಪುಸ್ತಕಗಳನ್ನು 10 , 000 ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುವುದು .

2 ) SSLC ಮತ್ತು ದ್ವಿತೀಯ PUC ಯ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು .

3 ) ವಿಕಲಚೇತನ ಹಾಗೂ ಉನ್ನತ ಮಟ್ಟದ ಶೈಕ್ಷಣಿಕ ವಿದ್ಯಾರ್ಥಿಗಳಿಗೆ Computer ವಿತರಣೆ ಮಾಡುವುದು ,

4 ) 30 ಸರ್ಕಾರಿ ಹಾಗೂ ಸರ್ಕಾರಿ ಮಾನ್ಯತೆ ಪಡೆದ ಶಾಲೆಗಳಿಗೆ ಗಡಿಯಾರ ವಿತರಿಸಲಾಗುವುದು . ಹಾಗೂ ಇನ್ನೂ ಅನೇಕ ಸೌಲಭ್ಯಗಳ ವಿತರಣೆ ಮಾಡುವುದು .

ಈ ಕಾರ್ಯಕ್ರಮಕ್ಕೆ ಜೋತಿ ಬೆಳಗಿಸಲು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ . ಎಸ್ . ಯಡಿಯೂರಪ್ಪರವರು , ಕಾರ್ಯಕ್ರಮದ ಉದ್ಘಾಟನೆಯನ್ನು ಇನ್ನೊಸಿಸ್ ಫೌಂಡೇಷನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ . ಸುಧಾಮೂರ್ತಿರವರು , ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ತೇಜಸ್ವಿ ಸೂರ್ಯರವರು , ಮಾಜಿ ಉಪ ಮುಖ್ಯಮಂತ್ರಿಗಳಾದ ಶ್ರೀ . ಆರ್ . ಅಶೋಕರವರು , ಮಾನ್ಯ ಶಾಸಕರಾದ ಶ್ರೀಮತಿ ಸೌಮ್ಯ ರೆಡ್ಡಿರವರು , ಮುಖ್ಯ ಅಥಿತಿಗಳಾಗಿ ಪೂಜ್ಯ ಮಹಾಪೌರರಾದ ಶ್ರೀಮತಿ . ಗಂಗಾಭಿಕೆ ಮಲ್ಲಿಕಾರ್ಜುನರವರು , ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ . ತಾರಾಅನೂರಾಧರವರು ಹಾಗೂ ಇನ್ನೂ ಅನೇಕ ಗಣ್ಯ ವ್ಯಕ್ತಿಗಳು ಆಗಮಿಸುತ್ತಾರೆ . ಸಂಸ್ಥಾಪಕರಾದ ಸಿ . ಕೆ . ರಾಮಮೂರ್ತಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು .

ಸ್ಥಳ : ಚಂದ್ರಗುಪ್ತ ಮೌರ್ಯ ( ಶಾಲಿಸಿ ) ಆಟದ ಮೈದಾನ , ಜಯನಗರ 5ನೇ ಬಡಾವಣೆ , ಬೆಂಗಳೂರು . ದಿನಾಂಕ : 22 . 06 . 2019 ( ಶನಿವಾರ ) ಸಮಯ : ಬೆಳಿಗ್ಗೆ 10 . 00 ಗಂಟೆಗೆ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.