ಬೆಂಗಳೂರಿನ ಹೊಸೂರು ಮುಖ್ಯರಸ್ತೆಯಲ್ಲಿ ಪಿಯಾಜಿಯೋದ ಹೊಸ ಶೋರೂಂ ಉದ್ಘಾಟನೆ ” – ಪಿಯಾಜಿಯೋದ ಐಕಾನಿಕ್ ವೆಸ್ಪಾ ಮತ್ತು ಸ್ಫೋರ್ಟಿ ಎಪ್ರಿಲಿಯಾ ಮಾರಾಟ”

ಬೆಂಗಳೂರು , ಜೂನ್ ೨೦೧೯ : ಪಿಯಾಜಿಯೋ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ಇಂದು ಬೆಂಗಳೂರಿನ ಹೊಸೂರು ಮುಖ್ಯರಸ್ತೆಯಲ್ಲಿ ತನ್ನ ಐಕಾನಿಕ್ ವೆಸ್ಪಾ ಮತ್ತು ಸ್ಫೋರ್ಟಿ ಎಪ್ರಿಲಿಯಾ ವಾಹನಗಳ ಮಾರಾಟಕ್ಕೆ ಹೊಸ ಶೋರೂಂ ಅನ್ನು ಆರಂಭಿಸಿತು .

ಈ ಹೊಸ ಶೋರೂಂ ವೆಸ್ಸಾ ಮತ್ತು ಎಪ್ರಿಲಿಯಾ ಎಸ್‌ಆರ್ ಶ್ರೇಣಿಯ ವಾಹನಗಳನ್ನು ಗ್ರಾಹಕರಿಗೆ ನೀಡಲಿದೆ . ಇಟಾಲಿಯನ್ ಪಾರಂಪರಿಕ ಬ್ಯಾಂಡ್‌ಗಳ ಪ್ರತಿಫಲನವನ್ನು ನೀಡುವ ೧೫೧೬ ಚದರಡಿಯ ಈ ಶೋರೂಂ ಗ್ರಾಹಕರ ಜೀವನಶೈಲಿ ಮತ್ತು ಪ್ರೀಮಿಯಂ ಅನುಭವವನ್ನು ನೀಡುವ ರೀತಿಯಲ್ಲಿ ವಿನ್ಯಾಸಗೊಂಡಿದೆ . ಗ್ರಾಹಕರಿಗೆ ಅತ್ಯುತ್ತಮ ಸೇವೆ , ಗುಣಮಟ್ಟ ಮತ್ತು ಅನುಭವವನ್ನು ನೀಡಲು ಸುಸಜ್ಜಿತವಾಗಿದೆ . ಈ ಮೂಲಕ ಶೋರೂಂ ಬೆಂಗಳೂರಿನ ಗರಿಷ್ಠ ಮಟ್ಟದ ಗ್ರಾಹಕರನ್ನು ತಲುಪುವ ಗುರಿಯನ್ನು ಇಟ್ಟುಕೊಂಡಿದೆ .

ಈ ಸಂದರ್ಭದಲ್ಲಿ ಮಾತನಾಡಿದ ಪಿಯಾಜಿಯೊ ಇಂಡಿಯಾದ Mr Ashish Yakhmi , Head of Two – wheeler Business Piaggio India ಅವರು , “ ಈ ಹೊಸ ಡೀಲರ್ ಶಿಪ್ ವೆಸ್ಪಾ ಮತ್ತು ಎಪ್ರಿಲಿಯಾ ಬ್ರಾಂಡ್‌ಗಳ ಸ್ಟೈಲ್ ಅನುಸರಣೆಯೊಂದಿಗೆ ಗ್ರಾಹಕರಿಗೆ ಉತ್ತಮ ಅನುಭವವನ್ನು ನೀಡುತ್ತದೆ . ಮಾರಾಟ ಮತ್ತು ಗ್ರಾಹಕ ಸೇವೆಗಳ ಮೂಲಕ ತನ್ನ ಗ್ರಾಹಕರಿಗೆ ಅತ್ಯುತ್ಕೃಷ್ಟ ಬಗೆಯ ಅನುಭವವನ್ನು ನೀಡುತ್ತದೆ ‘ ಎಂದು ತಿಳಿಸಿದರು . ಈ ವಾಹನಗಳ ಮಾರಾಟದ ಪಾಲುದಾರ ಸಂಸ್ಥೆಯಾಗಿರುವ ಬೆಂಗಳೂರು ಮೋಟರ್‌ಸೈಕಲ್ ವರ್ಕ್ನ ಅಕ್ಷಯ್ ಶ್ರೀನಿವಾಸ್ , ರಾಜ ಸುಚೀಂದ್ರ , ಆರ್ . ಎಸ್ . ಸುರೇಶ್ ಮತ್ತು ರಾಜ ಹರಿಹರನ್ ಅವರು ಮಾತನಾಡಿ , “ ಒಯಾಜಿಯೋ ಜತೆ ಸಹಭಾಗಿತ್ವ ಹೊಂದುತ್ತಿರುವುದು ನಮಗೆ ಸಂತಸ ತಂದಿದೆ ಮತ್ತು ವಿಶ್ವದರ್ಜೆಯ ಪ್ರೀಮಿಯಂ ಉತ್ಪನ್ನಗಳಾದ ಎಪ್ರಿಲಿಯಾ ಮತ್ತು ವೆಸ್ಪಾಗಳನ್ನು ನಮ್ಮ ಗ್ರಾಹಕರಿಗೆ ಪಿಯಾಜಿಯೋ ನಮ್ಮ ಮೂಲಕ ನೀಡುತ್ತಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ .

ನಾವು ಕೇವಲ ವಿಶ್ವದರ್ಜೆಯ ಪ್ರೀಮಿಯಂ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ನೀಡುತ್ತಿಲ್ಲ . ಇದರ ಜತೆಗೆ ಅತ್ಯದ್ಭುತವಾದ ಸೇವೆಗಳನ್ನು ನಿರೀಕ್ಷೆ ಇರುವ ಯುವ ಪೀಳಿಗೆಗೆ ನೀಡುತ್ತಿದ್ದೇವೆ ‘ ಎಂದು ತಿಳಿಸಿದರು . ಈ ಹೊಸ ಶೋರೂಂ ಅನ್ನು ಪಿಯಾಜಿಯೋ ೨ ವೀಲರ್ ವಿಭಾಗದ ಬ್ಯುಸಿನೆಸ್ ಹೆಡ್ ಆಶಿಶ್ ಯಾಸ್ಮಿ ಅವರು ಉದ್ಘಾಟಿಸಿದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.