ಕರ್ನಾಟಕದ ಪ್ರಭಾವೀ ಸಚಿವ ಜ಼ಮೀರ್ ಅಹಮದ್ ರವರ ಮತ್ತೊಂದು ಬೃಹತ್ ಹಗರಣ ಬಯಲು – ಬೃಹತ್ ಹಗರಣಕ್ಕೆ ಸಂಬಂಧಿಸಿದ 430 ಪುಟಗಳ ದಾಖಲೆಗಳನ್ನು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್

• ಕರ್ನಾಟಕದ ಪ್ರಭಾವೀ ಸಚಿವ ಜ಼ಮೀರ್ ಅಹಮದ್ ರವರ ಮತ್ತೊಂದು ಬೃಹತ್ ಹಗರಣ ಬಯಲು.
• ಸಚಿವ ಜ಼ಮೀರ್ ಅಹಮದ್, IMA ಮಾಲೀಕ ಮೊಹಮದ್ ಮನ್ಸೂರ್ ಖಾನ್, ಶಾಂತಿನಗರ ಉಪವಿಭಾಗದ ARO ಮತ್ತು ವಾರ್ಡ್ # 117 ರ RI ವಿರುದ್ಧ ACB ಯಲ್ಲಿ ದೂರು ದಾಖಲು.
• ಪರಾರಿಯಾಗಿರುವ IMA ಮಾಲೀಕ ಮೊಹಮದ್ ಮನ್ಸೂರ್ ಖಾನ್ ಮತ್ತು ಜ಼ಮೀರ್ ಅಹಮದ್ ರವರ 80 ಕೋಟಿ ಕಪ್ಪುಹಣದ ಹಗರಣ ಬಯಲು.
• ಕಾನೂನು ಬಾಹಿರವಾಗಿ ಬೃಹತ್ ಸ್ವತ್ತೊಂದನ್ನು IMA ಮಾಲೀಕನಿಗೆ ಮಾರಾಟ ಮಾಡಿರುವ ಜ಼ಮೀರ್ ಅಹಮದ್.
• 90 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಬೆಲೆ ಬಾಳುವ ಸ್ವತ್ತನ್ನು ₹ 9,38,00,000/- ಕ್ಕೆ ಮಾರಾಟ ಮಾಡಿರುವುದಾಗಿ ನೊಂದಣಿ ಮಾಡಿಕೊಟ್ಟಿರುವ ಜ಼ಮೀರ್ ಅಹಮದ್.
• 80 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಮೊತ್ತದ ಕಪ್ಪುಹಣವನ್ನು ಅನಾಯಾಸವಾಗಿ ಮನೆಗೆ ಸಾಗಿಸಿರುವ ಜ಼ಮೀರ್ ಅಹಮದ್.
• ಸಾವಿರಾರು ಮುಗ್ದ ಜನರನ್ನು ವಂಚಿಸಿ ಕೊಳ್ಳೆಹೊಡೆದಿರುವ ಸಾವಿರಾರು ಕೋಟಿ ಹಣದ ಪೈಕಿ ಲೆಕ್ಕವಿಲ್ಲದ 80 ಕೋಟಿ ಹಣವನ್ನು ಜ಼ಮೀರ್ ಅಹಮದ್ ತಿಜೋರಿಗೆ ತಲುಪಿಸಿರುವ ಮೊಹಮದ್ ಮನ್ಸೂರ್ ಖಾನ್.
• ಕಳೆದ 19 ವರ್ಷಗಳಿಂದ ನ್ಯಾಯಾಲಯದ ಅಂಗಳದಲ್ಲಿರುವ ವಿವಾದಿತ ಸ್ವತ್ತನ್ನು ಮಾರಾಟ ಮಾಡಿರುವ ಜ಼ಮೀರ್ ಅಹಮದ್.

• ನಗರದ ಶ್ರೀಮಂತರ ಪ್ರದೇಶ Richmond Town ನ Serpentine Street ನಲ್ಲಿರುವ ವಿವಾದಿತ ಸ್ವತ್ತು.
• ಸರ್ಪೆಂಟೈನ್ ರಸ್ತೆಯ 14,984 ಚ. ಅಡಿ ವಿಸ್ತೀರ್ಣದ 38 ಮತ್ತು 39 ನೇ ನಂಬರಿನ ಸ್ವತ್ತುಗಳು.
• PID ಸಂಖ್ಯೆ 76-35-38 ಮತ್ತು PID ಸಂಖ್ಯೆ 75-35-39 ರ ಸ್ವತ್ತುಗಳು.
• ಷಾ ನವಾಜ಼್ ಬೇಗಂ ಮತ್ತು ಅಗಜಾ಼ನ್ ಆಸ್ಕರ್ ಅಲಿ ಎಂಬುವವರ ಮಧ್ಯೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ವಿವಾದಿತ ಸ್ವತ್ತು.
• ಅಗಜಾ಼ನ್ ಆಸ್ಕರ್ ಅಲಿ ರವರ ಧರ್ಮಪತ್ನಿ ಸಪ್ನ ಮತ್ತು ಮಗ ಗಜೇಂದ್ರ ಎಂಬುವವರು ಷಾ ನವಾಜ಼್ ಬೇಗಂ ಮತ್ತು ಇತರೆ 15 ಮಂದಿ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ಮೂಲದಾವೆ ಪ್ರಕರಣವನ್ನು ದಾಖಲಿಸಿದ್ದರು.
• ಮೂಲದಾವೆ ಸಂಖ್ಯೆ 7532/2001 ಪ್ರಕರಣದಲ್ಲಿ 16ನೇ ಪ್ರತಿವಾದಿಯಾಗಿದ್ದ ಜ಼ಮೀರ್ ಅಹಮದ್.
• ವಿಚಾರಣಾ ಹಂತದಲ್ಲಿ ಸ್ವತ್ತನ್ನು ಮಾರಾಟ ಮಾಡಲು ಮತ್ತು ಗುತ್ತಿಗೆ ನೀಡಲು ನ್ಯಾಯಾಲಯವು ತಡೆಯಾಜ್ಞೆ ನೀಡಿತ್ತು.
• ತಡೆಯಾಜ್ಞೆ ಇದ್ದರೂ ಸಹ 03/07/2009 ರಲ್ಲಿ ಷಾ ನವಾಜ಼್ ಬೇಗಂ ಅಲಿಯಾಸ್ ಯಾಕುತ್ ಬೇಗಂ ಅವರಿಂದ ಶಿವಾಜಿನಗರ ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡಿರುವ ಜ಼ಮೀರ್ ಅಹಮದ್.
• ಚಾಮರಾಜಪೇಟೆಯ ಶಾಸಕರಾಗಿದ್ದ ಜ಼ಮೀರ್ ಅಹಮದ್ ಅವರು ಉದ್ದೇಶ ಪೂರ್ವಕವಾಗಿಯೇ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದರು.
• ಪ್ರಕರಣದ ವಿಚಾರಣಾ ಹಂತದಲ್ಲಿಯೇ 2001 – 2018 ರ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಸ್ವತ್ತಿನ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಡುವಂತೆ ಪತ್ರಗಳ ಮೂಲಕ ಕಂದಾಯ ಅಧಿಕಾರಿಗಳಿಗೆ ಒತ್ತಡ ಹೇರಿದ್ದ ಜ಼ಮೀರ್ ಅಹಮದ್.
• ತಮ್ಮ ರಾಜಕೀಯ ಪ್ರಭಾವದಿಂದ ಮತ್ತು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಮೂಲಕ ಬೆದರಿಸಿ ಸಪ್ನ ಮತ್ತು ಗಜೇಂದ್ರ ಅವರು ನ್ಯಾಯಾಲಯಕ್ಕೆ ಹಾಜರಾಗದಂತೆ ಸಂಚು ರೂಪಿಸಿದ್ದರು.
• ದಿನಾಂಕ 26/03/2018 ರಂದು ನಗರದ 38ನೇ ಸಿವಿಲ್ ನ್ಯಾಯಾಲಯವು ಷಾ ನವಾಜ಼್ ಬೇಗಂ ರವರ ಪರವಾಗಿ Ex party Decree ಯನ್ನು ನೀಡಿತ್ತು.
• ಸಿವಿಲ್ ನ್ಯಾಯಾಲಯದ Decree ಆದೇಶವನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಸಪ್ನ ಮತ್ತು ಗಜೇಂದ್ರ ರವರು ಪ್ರಕರಣವನ್ನು ದಾಖಲಿಸಿದ್ದಾರೆ.
• ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗುವುದನ್ನು ನಿರೀಕ್ಷಿಸಿ, ಆತುರಾತುರವಾಗಿ ಸ್ವತ್ತಿನ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಹಿಸುವಂತೆ ಮನವಿ ಪತ್ರ ನೀಡಿದ್ದ ಜ಼ಮೀರ್ ಅಹಮದ್.
• ದಿನಾಂಕ 13/04/2018 ರಂದು ವಿವಾದಿತ ಸ್ವತ್ತಿನ ಖಾತೆಯನ್ನು ಜ಼ಮೀರ್ ಅಹಮದ್ ಹೆಸರಿಗೆ ವರ್ಗಾವಣೆಗೊಳಿಸಿದ ಪಾಲಿಕೆ ಅಧಿಕಾರಿಗಳು.
• ಖಾತಾ ವರ್ಗಾವಣೆ ಪ್ರಕ್ರಿಯೆಯನ್ನು ಕೇವಲ 12 ದಿನಗಳೊಳಗೆ ಶಾಂತಿನಗರ ವಿಭಾಗದ ಸಹಾಯಕ ಕಂದಾಯ ಅಧಿಕಾರಿ ಮಾಡಿದ್ದಾರೆ.
• ಖಾತಾ ವರ್ಗಾವಣೆಯಾದ ಒಂದೇ ದಿನಕ್ಕೆ ಎರಡು ಸ್ವತ್ತುಗಳ ಖಾತಾ ಒಂದುಗೂಡಿಸುವಿಕೆ (Amalgamation of Khatha) ಕಾರ್ಯ ಮುಗಿದು ಹೋಗುತ್ತದೆ.
• 6,000 ಚ. ಅಡಿಗಳಿಗೂ ಹೆಚ್ಚು ವಿಸ್ತೀರ್ಣದ ಸ್ವತ್ತುಗಳಿಗೆ ಖಾತಾ ಮಾಡಲು ಕಂದಾಯ ಅಧಿಕಾರಿ – ವಲಯದ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರು (ಕಂದಾಯ) ಇವರಿಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಬೇಕು.
• ಜ಼ಮೀರ್ ಅಹಮದ್ ಅವರಿಂದ ದೊಡ್ಡ ಮೊತ್ತದ ಹಣವನ್ನು ಲಂಚದ ರೂಪದಲ್ಲಿ ಪಡೆದು ವಾರ್ಡ್ ಸಂಖ್ಯೆ 117 ರ ಕಂದಾಯ ಪರಿವೀಕ್ಷಕರು ಮತ್ತು ಶಾಂತಿನಗರ ARO ಅವರು ಕಾನೂನು ಬಾಹಿರವಾಗಿ ಖಾತೆಯನ್ನು ಮಾಡಿಕೊಟ್ಟಿದ್ದಾರೆ.
• ಕಾನೂನು ಬಾಹಿರವಾಗಿ ತಮ್ಮ ಹೆಸರಿಗೆ ಖಾತಾ ಮಾಡಿಸಿಕೊಂಡ ಜ಼ಮೀರ್ ಅಹಮದ್ ಅಷ್ಟೇ ಆತುರಾತುರವಾಗಿ ವಂಚಕ IMA ಮೊಹಮದ್ ಮನ್ಸೂರ್ ಖಾನ್ ಗೆ ಮಾರಾಟ ಮಾಡಿದ್ದಾರೆ.
• High Court ನಲ್ಲಿ ಪ್ರಕರಣದ ಮೇಲ್ಮನವಿ ದಾಖಲಾದರೆ ಸ್ವತ್ತಿನ ಮಾರಾಟ ಕಷ್ಟ ಎಂಬುದನ್ನು ಅರಿತಿದ್ದ ಜ಼ಮೀರ್ ಅಹಮದ್.
• 05/06/2018 ರಂದು ಹಲಸೂರು ಉಪ ನೊಂದಣಾಧಿಕಾರಿಗಳ ಕಛೇರಿಯಲ್ಲಿ ವಂಚಕ ಮೊಹಮದ್ ಮನ್ಸೂರ್ ಖಾನ್ ಹೆಸರಿಗೆ ಸ್ವತ್ತನ್ನು ನೊಂದಣಿ ಮಾಡಿಕೊಟ್ಟಿರುವ ಜ಼ಮೀರ್ ಅಹಮದ್.
• ಹಿರಿಯ ಉಪ ನೊಂದಣಾಧಿಕಾರಿಗಳು ಸಹ ಯಾವ ದಾಖಲೆಗಳನ್ನು ಪರೀಶಿಲಿಸದೆ ಏಕಾಏಕಿ ಸ್ವತ್ತಿನ ನೊಂದಣಿ ಮಾಡಿಕೊಟ್ಟಿದ್ದಾರೆ.
• ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕನಿಷ್ಠ 90 ದಿನಗಳ ಕಾಲಾವಕಾಶವಿರುತ್ತದೆ.
• ಹೀಗಿದ್ದರೂ ಸಹ ಕನಿಷ್ಠ ಕಾನೂನು ಕೋಶದ ಅಭಿಪ್ರಾಯ ಪಡೆಯದೆ, ವಿವಾದಿತ ಸ್ವತ್ತಿಗೆ ಖಾತೆ ಮಾಡಿಕೊಟ್ಟಿರುವ ಶಾಂತಿನಗರ ಉಪ ವಿಭಾಗದ ಸಹಾಯಕ ಕಂದಾಯ ಅಧಿಕಾರಿ.
• ಪ್ರಭಾವೀ ಸಚಿವ ಜ಼ಮೀರ್ ಅಹಮದ್ ರವರ ರಾಜಕೀಯ ಪ್ರಭಾವಕ್ಕೆ, ಹಣದ ಪ್ರಭಾವಕ್ಕೆ ಒಳಗಾಗಿ ಇಂತಹ ಕಾನೂನು ವಿರೋಧಿ ಕಾರ್ಯಗಳು ನಡೆದಿವೆ.
• ಮೊಹಮದ್ ಮನ್ಸೂರ್ ಖಾನ್ ಗೆ ವಿವಾದಿತ ಸ್ವತ್ತನ್ನು 09 ಕೋಟಿಗೆ ಮಾರಾಟ ಮಾಡಿದ ಜ಼ಮೀರ್ ಅಹಮದ್ ಪಡೆದಿದ್ದು ಮಾತ್ರ 90 ಕೋಟಿ.
• ರಿಚ್ಮಂಡ್ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳ ಸ್ಥಿರಾಸ್ತಿಯ ಪ್ರಸ್ತುತ ಮಾರುಕಟ್ಟೆ ಬೆಲೆ ಚ. ಅಡಿ ಒಂದಕ್ಕೆ ಕನಿಷ್ಠ 80 ಸಾವಿರ ರೂಪಾಯಿಗಳಿಂದ 01 ಲಕ್ಷ ರೂಪಾಯಿಗಳ ವರೆಗೆ ಇದೆ.
• ಅತ್ಯಂತ ಕಡಿಮೆ ಬೆಲೆ ಚ. ಅಡಿ ಒಂದಕ್ಕೆ 60,000 ರೂಪಾಯಿಗಳು ಎಂದರೂ ಸಹ ವಿವಾದಿತ 14,984 ಚ. ಅಡಿ ವಿಸ್ತೀರ್ಣದ ಸ್ವತ್ತಿನ ಬೆಲೆ 90 ಕೋಟಿ ರೂಪಾಯಿಗಳಿಗಿಂತಲೂ ಅಧಿಕವಾಗಿದೆ.
• ನೊಂದಣಿ ಪ್ರಕ್ರಿಯೆ ಸ್ವತ್ತಿನ ಕ್ರಯಪತ್ರದಲ್ಲಿ ನಮೂದಿಸಿರುವುದು ಸ್ವತ್ತಿನ ಬೆಲೆ ಕೇವಲ ₹ 9,38,00,000/- ಗಳು ಮಾತ್ರ.
• ಈ ಕ್ರಯಪತ್ರದಲ್ಲಿ ತೋರಿಸಿರುವ 09 ಕೋಟಿ ಬಿಳಿಯ ಹಣವಾದರೆ, ಇನ್ನುಳಿದ 80 ಕೋಟಿ ರೂಪಾಯಿ ಕಪ್ಪುಹಣವನ್ನು ಜ಼ಮೀರ್ ಅಹಮದ್ IMA ವಂಚಕನ ಖಜಾನೆಯಿಂದ ಲಪಟಾಯಿಸಿದ್ದಾರೆ.
• ಸಾವಿರಾರು ಅಮಾಯಕರನ್ನು ವಂಚಿಸಿ ಕೂಡಿಟ್ಟಿದ್ದ ಸಾವಿರಾರು ಕೋಟಿ ರೂಪಾಯಿಗಳ ಪೈಕಿ 80 ಕೋಟಿ ರೂಪಾಯಿಗಳನ್ನು IMA ಮಾಲೀಕ ಅನಾಯಾಸವಾಗಿ ಹೊತ್ತೊಯ್ದು ಜ಼ಮೀರ್ ಅಹಮದ್ ಜೋಳಿಗೆಯನ್ನು ತುಂಬಿಸಿದ್ದಾನೆ.
• ಕ್ರಯ ಪತ್ರ ನೊಂದಣಿಗೆ ನ್ಯಾಯಯುತವಾಗಿ ಪಾವತಿಸಬೇಕಿರುವ ಮುದ್ರಾಂಕ ಶುಲ್ಕ ಪಾವತಿಯಲ್ಲೂ ಮಹಾ ಮೋಸ.
• ನೊಂದಣಿ ಮೊತ್ತದ ಶೇ. 5.1% ರಷ್ಟು ನೊಂದಣಿ ಶುಲ್ಕ, ಶೇ. 1 ರಷ್ಟು ಸೇವಾ ಶುಲ್ಕ ಮತ್ತು ಶೇ. 0.5% ರಷ್ಟು ಸೆಸ್ ರೂಪದಲ್ಲಿ ಒಟ್ಟು ₹ 61,90,000/- ಗಳನ್ನು ಪಾವತಿಸಬೇಕಿರುತ್ತದೆ.
• ಮುದ್ರಾಂಕ ಶುಲ್ಕದ DD ಅಸಲಿಯೋ – ನಕಲಿಯೋ ಎಂಬುದನ್ನು ತನಿಖೆ ಮಾಡಬೇಕಿದೆ.
• ಅಮಾಯಕ ಅಲ್ಪಸಂಖ್ಯಾತರನ್ನು “ನಮಕ್ ಹಲಾಲ್” ಹೆಸರಿನಲ್ಲಿ ಸಾಲು ಸಾಲಾಗಿ ವಂಚಿಸುತ್ತಿರುವ ಕಾಂಗ್ರೆಸ್(ಐ) ಪಕ್ಷದ ಅಲ್ಪ ಸಂಖ್ಯಾತ ಮುಖಂಡರುಗಳು.
• ಅಮಾನತ್ ಕೋ – ಆಪರೇಟಿವ್ ಬ್ಯಾಂಕ್ ನಲ್ಲಿ ನೂರಾರು ಅಲ್ಪಸಂಖ್ಯಾತ ಠೇವಣಿದಾರರನ್ನು ವಂಚಿಸಿರುವ ಆರೋಪ ಹೊತ್ತಿರುವ ಕೇಂದ್ರದ ಮಾಜಿ ಸಚಿವ ರೆಹಮಾನ್ ಖಾನ್.
• AIMMS ಸಂಸ್ಥೆಯ ಹೆಸರಿನಲ್ಲಿ ಜಯನಗರ ಕ್ಷೇತ್ರದ 05 ಮಂದಿ ಕಾಂಗ್ರೆಸ್(ಐ) ಮುಖಂಡರು ಸಾವಿರಾರು ಅಮಾಯಕ ಅಲ್ಪಸಂಖ್ಯಾತರಿಗೆ ನೂರಾರು ಕೋಟಿ ವಂಚಿಸಿದ್ದಾರೆ.
• IMA ಹಗರಣದ ಆರೋಪಿ ಮೊಹಮದ್ ಮನ್ಸೂರ್ ಖಾನ್ ಸ್ವತಃ ತಿಳಿಸಿರುವಂತೆ ಜ಼ಮೀರ್ ಅಹಮದ್, ರೋಷನ್ ಬೇಗ್, ರೆಹಮಾನ್ ಖಾನ್, ಒಬೇದುಲ್ಲಾ ಷರೀಫ್ ಮತ್ತು ಪಾಲಿಕೆ ಸದಸ್ಯ ಶಕೀಲ್ ಅಹಮದ್ ಅವರುಗಳು ಅಪಾರ ಪ್ರಮಾಣದ ಹಣವನ್ನು ಬ್ಲಾಕ್ ಮೇಲ್ ಮಾಡಿ ಆತನಿಂದ ಪಡೆದುಕೊಂಡಿದ್ದಾರೆ.
• ಅಲ್ಪಸಂಖ್ಯಾತರನ್ನು ತಮ್ಮ ಪಕ್ಷದ ಮತಬ್ಯಾಂಕ್ ಎಂದುಕೊಂಡಿರುವ ಕಾಂಗ್ರಸ್(ಐ) ಪಕ್ಷದ ಅಲ್ಪಸಂಖ್ಯಾತ ಮುಖಂಡರುಗಳೇ ಮುಗ್ದ ಅಲ್ಪಸಂಖ್ಯಾತರನ್ನು ವಂಚಿಸಿ ಸಾವಿರಾರು ಕೋಟಿ ದೋಚುತ್ತಿದ್ದಾರೆ.
• ಕಾಂಗ್ರೆಸ್(ಐ) ಪಕ್ಷದ ಹೈಕಮಾಂಡ್ ಮುತುವರ್ಜಿ ವಹಿಸಿ ತಮ್ಮ ಪಕ್ಷದ ವಂಚಕ ಮುಖಂಡರಿಂದ ಮುಗ್ದ ಜನರಿಗೆ ಹಣ ವಾಪಸ್ಸು ಕೊಡಿಸುವ ಕೆಲಸ ಮಾಡಬೇಕು.
• ಅಮಾಯಕ ಅಲ್ಪಸಂಖ್ಯಾತ ಬಡಜನರ ಹಣವನ್ನು ಕೊಳ್ಳೆ ಹೊಡೆಯುವುದನ್ನೇ ತಮ್ಮ ನಿತ್ಯದ ಕಾಯಕ ಮಾಡಿಕೊಂಡಿರುವ ತಮ್ಮ ಪಕ್ಷದ ನಾಯಕರನ್ನು ಕೂಡಲೇ ಪಕ್ಷದಿಂದ ಹೊರಹಾಕುವ ಕೆಲಸವನ್ನು ಕಾಂಗ್ರೆಸ್(ಐ) ಪಕ್ಷದ ಹೈಕಮಾಂಡ್ ಮಾಡಬೇಕು.
• 2018 ರ ವಿಧಾನಸಭೆ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿಯೂ ಸುಳ್ಳು ಮಾಹಿತಿಗಳನ್ನು ನೀಡಿರುವ ಜ಼ಮೀರ್ ಅಹಮದ್.
• ಮಾಜಿ ಶಾಸಕ ಚೆಲುವರಾಯ ಸ್ವಾಮಿಯವರಿಂದ 42 ಲಕ್ಷ ಸಾಲ ಪಡೆದಿರುವುದಾಗಿ ಘೋಷಣೆ.
• ಆದರೆ, ಚೆಲುವರಾಯ ಸ್ವಾಮಿಯವರ ಅದೇ 2018 ರ ವಿಧಾನಸಭಾ ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಜ಼ಮೀರ್ ಅಹಮದ್ ಅವರಿಗೆ ಸಾಲ ನೀಡಿರುವ ಮಾಹಿತಿಯನ್ನೇ ನೀಡಿಲ್ಲ.
• ಇದೊಂದು ವಿಷಯವೇ ಸಾಕು ಜ಼ಮೀರ್ ಅಹಮದ್ ಅವರ ಶಾಸಕ ಸ್ಥಾನವನ್ನು ಅನೂರ್ಜಿತಗೊಳಿಸಲು.
• ಜ಼ಮೀರ್ ಅಹಮದ್ ಮಾಡಿರುವ ಮಹಾ ವಂಚನೆಯ ಸಂಪೂರ್ಣ ವೃತ್ತಾಂತವನ್ನು ಎಳೆಎಳೆಯಾಗಿ ಬಿಚ್ಚಿಟ್ಟ N. R. ರಮೇಶ್.
• ವಿವಾದಿತ ಬೃಹತ್ ಸ್ವತ್ತಿನ ಕಾನೂನುಬಾಹಿರ ಮಾರಾಟದ ಹಗರಣವನ್ನು ಉನ್ನತ ಮಟ್ಟದ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ N. R. ರಮೇಶ್.
• 80 ಕೋಟಿಗಳಿಗೂ ಹೆಚ್ಚು ಕಪ್ಪುಹಣ ಪಡೆದುಕೊಂಡು, ಕಾನೂನುಬಾಹಿರ ಮಾರಾಟ ಪ್ರಕ್ರಿಯೆ ನಡೆಸಿರುವ ಜ಼ಮೀರ್ ಅಹಮದ್ ರವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ N. R. ರಮೇಶ್.
• ಕಾನೂನುಬಾಹಿರ ಖಾತಾ ವರ್ಗಾವಣೆ ಮಾಡಿರುವ ಶಾಂತಿನಗರ ಉಪ ವಿಭಾಗದ ARO ಮತ್ತು ವಾರ್ಡ್ # 117 ರ RI ರವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ N. R. ರಮೇಶ್.
• ಬೃಹತ್ ಹಗರಣಕ್ಕೆ ಸಂಬಂಧಿಸಿದ 430 ಪುಟಗಳ ದಾಖಲೆಗಳನ್ನು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆ ಮಾಡಿದ N. R. ರಮೇಶ್.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.