*”ಪ್ರಾಮಾಣಿಕ ಹೋರಾಟಕ್ಕೆ ಸಂದ 14 ನೇ ಗೆಲುವು”* *”ಆರೋಪ‌ಣಾ ಪಟ್ಟಿ ಸಲ್ಲಿಕೆ”*

ಪಾಲಿಕೆಯ ರಾಜರಾಜೇಶ್ವರಿ ನಗರ ವಲಯ ಮತ್ತು ಪಶ್ಚಿಮ ವಲಯಗಳ ವ್ಯಾಪ್ತಿಯಲ್ಲಿ *DC Bill* ಗಳ ಹೆಸರಿನಲ್ಲಿ *₹ 196,71,58,052/-* ಗಳಷ್ಟು ಬೃಹತ್ ಮೊತ್ತ (45 ತಿಂಗಳಲ್ಲಿ ಸರಾಸರಿ ತಿಂಗಳೊಂದಕ್ಕೆ *₹ 4,37,14,623/-* ರಂತೆ) ಬಿಡುಗಡೆ ಮಾಡಿದ್ದ ಹಗರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಮಾಜಿ ಆಡಳಿತ ಪಕ್ಷದ ನಾಯಕ *N.R.ರಮೇಶ್* ರವರು ನೀಡಿದ್ದ ದೂರನ್ನು ಆಧರಿಸಿ ತನಿಖೆ ನಡೆಸಿ *”ಹಗರಣ ನಡೆದಿರುವುದು ಸತ್ಯ”* ಎಂದು *TVCC* ನೀಡಿದ್ದ ವರದಿಯಂತೆ, *”ಶಿಸ್ತು ಪ್ರಾಧಿಕಾರ”* ವು ಚಾಮರಾಜ ಪೇಟೆ ವಿಭಾಗದ ಕಾರ್ಯಪಾಲಕ ಅಭಿಯಂತರ ತನ್ವೀರ್ ಅಹಮದ್ , ತಿಮ್ಮರಸು, ಪಾಲಾಕ್ಷ , K.V. ಶಶಿಕುಮಾರ್, L.ವೆಂಕಟೇಶ್, B.ಪ್ರಭಾಕರ್ ಎಂಬ 06 ಮಂದಿ ಕಾರ್ಯಪಾಲಕ ಅಭಿಯಂತರರುಗಳ(Executive Engineer) ವಿರುದ್ಧ ಮತ್ತು S.K.ಪ್ರಕಾಶ್ ಎಂಬ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ( Assistant Executive Engineer) ಸೇರಿದಂತೆ ಒಟ್ಟು *07 ಮಂದಿ gazetted ಶ್ರೇಣಿಯ ಅಧಿಕಾರಿ* ಗಳ ವಿರುದ್ಧ *ಆರೋಪಣಾ ಪಟ್ಟಿ (Charge Sheet)* ಸಲ್ಲಿಸಿ, ಇಲಾಖಾ *ವಿಚಾರಣೆ* ಗೆ ಆದೇಶಿಸಿದೆ.
ಇವರೆಲ್ಲರೂ ಗಾಂಧಿನಗರ, ಚಾಮರಾಜ ಪೇಟೆ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್, ಗೋವಿಂದರಾಜ ನಗರ , ರಾಜಾಜಿನಗರ ವಿಭಾಗಗಳಲ್ಲಿ ಮತ್ತು ಯೋಜನೆ (ಪಶ್ಚಿಮ) ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
*”ಶಿಸ್ತು ಪ್ರಾಧಿಕಾರ”* ದ ನಿಯಮಗಳನ್ವಯ ವಿಚಾರಣೆ ಕಾರ್ಯ ಪೂರ್ಣಗೊಳ್ಳುವವರೆಗೆ ಈ ಎಲ್ಲಾ ಭ್ರಷ್ಟರನ್ನು ಅಮಾನತ್ತಿನಲ್ಲಿ ಇಡಲಾಗುತ್ತದೆಯಲ್ಲದೇ, ಕೆಲಸಗಳಿಂದ ವಜಾಗೊಳ್ಳುವುದು ನಿಶ್ಚಿತವಾಗಿದೆ.
*ಈ 07 ಮಂದಿ ಭ್ರಷ್ಟರು, ಮಾಜಿ ಸಚಿವ ಮತ್ತು KPCC ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಸಚಿವ ಜ಼ಮೀರ್ ಖಾನ್ ಮತ್ತು ಶಾಸಕರಾದ ಮುನಿರತ್ನ ಮತ್ತು ಗೋಪಾಲಯ್ಯ ಅವರ ಹಿಂಬಾಲಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ , 197 ಕೋಟಿ ಮೊತ್ತದ DC Bill ಹಗರಣದಲ್ಲಿ ಪ್ರಮುಖ ಪಾತ್ರದಾರಿಗಳಾಗಿದ್ದಾರೆ.*

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.