ಕರ್ನಾಟಕ ರಾಜ್ಯದ ಎಲ್ಲಾ ಅಗ್ರಿಗೋಲ್ ಗ್ರಾಹಕರು ಮತ್ತು ಏಜೆಂಟರೂ ಸಹಸ್ರಾರು ಸಂಖ್ಯೆಯಲ್ಲಿ ಸೇರಲಿದ್ದು , ಅಲ್ಲಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ

ಕರ್ನಾಟಕ ಅರಿಗೋಲ್ ಗ್ರಾಹಕರ ಮತ್ತು ಏಜೆಂಟರ ಕ್ಷೇಮಾಭಿವೃದಿ ಸಂಘವು ಈ ಕೆಳಗಿನ ಹಕೊತಾಯಗಳನ್ನು ರಾಜ್ಯ ಸರ್ಕಾರದ ಮುಂದೆ ಈಗಾಗಲೇ ಮಂಡಿಸಿ ಸಾಮೂಹಿಕವಾಗಿ ವಂಚನೆಗೊಳಗಾಗಿ ಆರ್ಥಿಕ ಸಂಕಷ್ಟಗಳಿಂದ ನರಳುತ್ತಿರುವ ಅಗ್ರಿಗೋಲ್ಡ್ ಗ್ರಾಹಕರ ನೋವು ನಅವುಗvಗೆ ಸಂದಿಸುವಂತೆ ಮನವಿ ಮಾಡಿಕೊಂಡರೂ ಈವರೆಗೂ ಸರ್ಕಾರದ ವತಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲವಾದ ಕಾರಣ ಬೀದಿ ಹೋರಾಟ ಅನಿವಾರ್ಯವಾಗಿದೆ . ಈ ಹಿನ್ನೆಲೆಯಲ್ಲಿ ನಮ್ಮ ರಾಜ್ಯ ಸರ್ಕಾರದ ಗಮನ ಸೆಳೆದು ಅಗಿಗೋಲ್ ಗ್ರಾಹಕರ ಮೊರೆಗೆ ಸ್ಪಂದಿಸುವಂತೆ ಮನವಿ ಮಾಡಲು ಮತ್ತು ನಮ್ಮ ಹಕ್ಕೊತ್ತಾಯಗಳನ್ನು ರಾಜ್ಯ ಸರ್ಕಾರದ ಮುಂದೆ ಸಮರ್ಪಕವಾಗಿ ಮಂಡಿಸಿ ಸೂಕ್ತ ಪರಿಹಾರವನ್ನು ಪಡೆಯಲು ದಿನಾಂಕ 08 – 07 – 2019 ರಂದು ಬೆಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಸರಿಯಾಗಿ ಬೆಳಗ್ಗೆ 10 . 00 ಗಂಟೆಗೆ ಕರ್ನಾಟಕ ರಾಜ್ಯದ ಎಲ್ಲಾ ಅಗ್ರಿಗೋಲ್ ಗ್ರಾಹಕರು ಮತ್ತು ಏಜೆಂಟರೂ ಸಹಸ್ರಾರು ಸಂಖ್ಯೆಯಲ್ಲಿ ಸೇರಲಿದ್ದು , ಅಲ್ಲಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಮೆರವಣಿಗೆಯಲ್ಲಿ ತೆರಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು , ಸದರಿ ಕಾರ್ಯಕ್ರಮದಲ್ಲಿ ತಾವು ಸಹ ಭಾಗವಹಿಸಿ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ಅನುಭವಿಸುತ್ತಿರುವ ಗ್ರಾಹಕರಿಗೆ ಬೆಂಬಲವಾಗಿ ನಿಲ್ಲುವಂತೆ ತಮ್ಮಲ್ಲಿ ನಮ್ಮ ಕಳಕಳಿಯ ಮನವಿ .

ಹಕ್ಕೊತ್ತಾಯಗಳು :

* ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳು ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಮತ್ತು ಕರ್ನಾಟಕ ಅಗ್ರಿಗೋಲ್ಡ್ ಗ್ರಾಹಕರ ಮತ್ತು ಏಜೆಂಟರ ಸಂಘಟನೆಯ ಪ್ರತಿನಿಧಿಗಳೊಂದಿಗೆ ಈ ಕೆಳಗಿನ ಹಕ್ಕೊತ್ತಾಯಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ತಕ್ಷಣ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳ ಸಭೆ ಕರೆಯಬೇಕು .

* ಅಗ್ರಿಗೋಲ್ಡ್ ಗ್ರಾಹಕರಿಗೆ ಶೀಘ್ರ ಪರಿಹಾರ ದೊರಕಿಸಿಕೊಡಲು ನಮ್ಮ ರಾಜ್ಯ ಸರ್ಕಾರವು ಆಂಧ್ರಪ್ರದೇಶದ ಸರ್ಕಾರದೊಂದಿಗೆ ಸಂಪರ್ಕಿಸಿ ಎರಡು ರಾಜ್ಯಗಳ ಮುಖ್ಯ ಅಧಿಕಾರಿಗಳನ್ನೊಳಗೊಂಡ ಸಮನ್ವಯ ಸಮಿತಿಯೊಂದನ್ನು ರಚಿಸುವಂತೆ ಪ್ರಯತ್ನಿಸಬೇಕು .

* ತೆಲಂಗಾಣದ ಮಾನ್ಯ ಉಚ್ಚ ನ್ಯಾಯಾಲದಲ್ಲಿನ ಪ್ರಕರಣ ಪಿಲ್ , ನಂ . 193 / 2015 ರಲ್ಲಿ ರಾಜ್ಯದ ಗ್ರಾಹಕರ ಹಿತ ಕಾಪಾಡಲು ನಮ್ಮ ರಾಜ್ಯ ಸರ್ಕಾರವು ತಕ್ಷಣ ಕಾನೂನು ಕ್ರಮ ಜರುಗಿಸಬೇಕು .

* ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದಲ್ಲಿರುವ ಸರಿ ಸುಮಾರು 8 . 5 ಲಕ್ಷ ಅಗ್ರಿಗೋಲ್ ಗ್ರಾಹಕರ ಪಟ್ಟಿಯನ್ನು ನೇರವಾಗಿ ಗ್ರಾಹರಿಂದ ಮಾಹಿತಿ ಪಡೆದು ಕಂಪನಿಯವರು ನೀಡಿದ ಪಟ್ಟಿಯೊಂದಿಗೆ ಪರಿಶೀಲನೆ ಮಾಡಿ ನಿಖರವಾದ ಗ್ರಾಹಕರ ಪಟ್ಟಿಯನ್ನು ತಯಾರಿಸಬೇಕು ಮತ್ತು ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಬೇಕು . ಸದರಿ ಸಂಸ್ಥೆಯಿಂದ ಗ್ರಾಹಕರಿಗೆ ನೀಡಲಾದ ಬಾಂಡ್‌ಗಳನ್ನು ಪರಿಶೀಲನೆ ಮಾಡಲು ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಒಂದು ಬಾಂಡ್‌ಗಳ ಪರಿಶೀಲನಾ ಕೇಂದ್ರವನ್ನು ತೆರೆಯಬೇಕು .

* ರೂ . 50 , 000 / – ಕ್ಕಿಂತ ಒಳಗೆ ಹಣವನು ಠೇವಣಿ ಇರುವ ಬಡ ಗ್ರಾಹಕರ ತಕಣ ನೆರವಿಗಾಗಿ ರಾಜ್ಯ ಸರ್ಕಾರವು ಕನಿಷ್ಟ ರೂ . 700 ಕೋಟಿಯನ್ನು ಬಿಡುಗಡೆ ಮಾಡಿ ಬಡ ಗ್ರಾಹಕರಿಗೆ ಹಂಚಿಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು .

* ಅಗ್ರಿಗೋಲ್ಡ್ ಸಂಸ್ಥೆಯ ನಿರ್ದೇಶಕರ , ಅವರ ಕುಟುಂಬದ ಇತರೆ ಸದಸ್ಯರ , ಸ್ನೇಹಿತರ ಹೆಸರಿನಲ್ಲಿರುವ ಮತ್ತು ಮಾರ್ಕೆಟಿಂಗ್ ನಿರ್ದೇಶಕರ ಮತ್ತು ಅವರ ಕುಟುಂಬದ ಸದಸರ ಹೆಸರಿನಲಿರುವ ಸಂಸ್ಥೆಯ ಎಲ್ಲ ಬೇನಾಮಿ ಆಸ್ತಿಗಳನ್ನು ತಕ್ಷಣ ಜಪ್ತಿ ಮಾಡಿ ಸರ್ಕಾರದ ಸ್ವಾಧೀನಕ್ಕೆ ಪಡೆಯಬೇಕು .

* ಈಗಾಗಲೇ ಸರ್ಕಾರ ಸ್ವಾಧೀನಕ್ಕೆ ಪಡೆದಿರುವ ಅಗ್ರಿಗೋಲ್ ಸಂಸ್ಥೆಯ ಆಸ್ತಿಗಳ ನಿರ್ವಹಣೆಯಿಂದ ಬರುತ್ತಿರುವ ಆಧಾರ ವಿವರವನ್ನು ರಾಜ್ಯ ಸರ್ಕಾರವು ಬಹಿರಂಗಪಡಿಸಬೇಕು .

* ಅಗ್ರಿಗೋಲ್ಡ್ ಸಂಸ್ಥೆಯ ವಂಚನೆ ಹಗರಣದಲ್ಲಿ ಪಾಲುದಾರರಾದ ಮಾರ್ಕೆಟಿಂಗ್ ನಿರ್ದೇಶಕರನ್ನೊಳಗೊಂಡಂತೆ ಎಲ್ಲರಿಗೂ ಕಠಿಣ ಶಿಕ್ಷೆಯಾಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕು .

* ರಾಜ್ಯ ಸರ್ಕಾರವು ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಅಗ್ರಿಗೋಲ್ಡ್ ಸಂಸ್ಥೆಯ ಆಸ್ತಿಗಳನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ಗ್ರಾಹಕರ ಮೂಲ ಠೇವಣಿ ಹಣ ಸರಿ ಸುಮಾರು ರೂ . 1 , 700 ಕೋಟಿಯನ್ನು ಶೀಘ್ರವಾಗಿ ಎಲ್ಲ ಠೇವಣಿದಾರರಿಗೆ ಪಾವತಿಸಬೇಕು .

* ಅಗ್ರಿಗೋಲ್ ಸಂಸ್ಥೆಯ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಿ ಬಂದ ಒಟ್ಟಾರೆ ಹಣದಿಂದ ಠೇವಣಿದಾರರಿಗೆ ಪಾವತಿಸಿದ ಹಣವನ್ನು ಸರ್ಕಾರವು ಕಡಿತಗೊಳಿಸಿಕೊಂಡು , ಉಳದ ಹಣದಿಂದ ಗ್ರಾಹಕರು ಠೇವಣಿ ಮಾಡುವಾಗ ಗ್ರಾಹಕರಿಗೆ ಸಂಸ್ಥೆಯಿಂದ ಭರವಸೆ ನೀಡಲಾದ ಲಾಭಾಂಶದ ಪಾಲನ್ನು ಗ್ರಾಹಕರಿಗೆ ಪಾವತಿಸಬೇಕು .

– ಕೆ , ನಾಗಭೂಷಣರಾವ್ – ರಾಜ್ಯ ಗೌರವಾಧ್ಯಕ್ಷರು,

– ಕೆ , ಗುರುಮೂರ್ತಿ- ರಾಜ್ಯ ಅಧ್ಯಕ್ಷರು,

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.