ಶ್ರೀ ಎನ್ . ಆರ್ . ರಮೇಶ್ ರವರು ಬ್ಲಾಕ್‌ಮೇಲ್ ಮಾಡುವುದನ್ನು ಮತ್ತು ಪೌರಕಾರ್ಮಿಕರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು

ಇತ್ತೀಚಿಗೆ ಬಿ . ಬಿ . ಎಂ . ಪಿ . ಮಾಜಿ ಸದಸ್ಯರಾದ ಶ್ರೀ ಎನ್ . ಆರ್ . ರಮೇಶ್‌ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಬಿ . ಬಿ . ಎಂ . ಪಿ . ಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಇ . ಎಸ್ . ಐ . / ಪಿ . ಎಫ್ ಹಣ ಸುಮಾರು 584 ಕೋಟಿರುಗಳ ಹಣವನ್ನು ಗುತ್ತಿಗೆದಾರರು ವಂಚನೆ ಮಾಡಿರುತ್ತಾರೆ . ಸದರಿ ವಿಷಯವನ್ನು ಎ . ಸಿ . ಬಿ . ಮತ್ತು ಸಿ . ಓ . ಡಿ . ವತಿಯಿಂದ ತನಿಖೆಯನ್ನು ಮಾಡಿಸುತ್ತಿರುವುದಾಗಿ ಹೇಳಿಕೊಂಡಿರುವುದು ಮತ್ತು ಹಿಂದಿನ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರು ಮತ್ತು ಅಂದಿನ ಸಚಿವರಾದ ಶ್ರೀ ಕೆ . ಜೆ . ಜಾರ್ಜ್ ರವರು ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದಾರೆಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರವಾಗಿರುತ್ತದೆ ಮತ್ತು ಹಾಸ್ಯಸ್ಪದವಾಗಿರುತ್ತದೆ . ನಾನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಮೇಲೆ ಅಂದಿನ ಮುಖ್ಯಮಂತ್ರಿಗಳಾ | ಶ್ರೀ ಸಿದ್ದರಾಮಯ್ಯ ರವರು ಮತ್ತು ಶ್ರೀ ಕೆ . ಜೆ . ಜಾರ್ಜ್ ರವರ ಗಮನಕ್ಕೆ ಸದರಿ ವಿಷಯವನ್ನು ತಂದೆ : ತನಿಖೆಗೆ ಆದೇಶ ಮಾಡಿಸಿರುತ್ತೇನೆ ಮತ್ತು ಭಾರತ ದೇಶದಲ್ಲಿ ಯಾವುದೇ ರಾಜ್ಯಗಳಲ್ಲಿ ಮಾಡದೇ ಇರುವಂತಹ ಹಲವಾರು ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುತ್ತಾರೆ . ಶ್ರೀ ಸಿದ್ದರಾಮಯ್ಯರವರು ಮತ್ತು ಶ್ರೀ ಕೆ . ಜೆ . ಜಾರ್ಜ್ ರವರು ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದಾರೆಂದು ಹೇಳಿದ್ದಾರೆ . ಭಾರತ ದೇಶದಲ್ಲಿ 12 ಲಕ್ಷಗುತ್ತಿಗೆ ಕಾರ್ಮಿಕರು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದೆ . ಆದರೆ ಗುತ್ತಿಗೆದಾರರಿಂದ ಆಗುತ್ತಿರುವ ಶೋಷಣೆ ಮತ್ತು ದಬ್ಬಾಳಿಕೆಯನ್ನು ಕಂಡು ಅಂದಿನ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಮೊಟ್ಟ ಮೊದಲನೇಯದಾಗಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ ಸದರಿ ಗುತ್ತಿಗೆ ಕಾರ್ಮಿಕರಿಗೆ ನೇರವಾಗಿ ಸರ್ಕಾರದಿಂದಲೇ ವೇತನ ಪಾವತಿ ಮಾಡಿರುತ್ತಾರೆ . ಗುತ್ತಿಗೆದಾರರನ್ನು ಓಡಿಸಿರುತ್ತಾರೆ . ಗುತ್ತಿಗೆದಾರರ ಜೊತೆ ಶಾಮೀಲಾಗಿದ್ದರೆ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡುತ್ತಿರಲಿಲ್ಲಾ ಎಂಬುವುದು ಶ್ರೀ ಎನ್ . ಆರ್ . ರಮೇಶ್ ರವರು ಗಮನಿಸಬೇಕಾಗಿದೆ . ರಾಜ್ಯದಲ್ಲಿ ಶ್ರೀ ಬಿ . ಎಸ್ . ಯಡೂರಪ್ಪ ರವರು ಮುಖ್ಯಮಂತ್ರಿಗಳಾಗಿದ್ದಾಗ ಗುತ್ತಿಗೆದಾರರ ಜೊತೆ ಶಾಮೀಲಾಗಿ ಬಿ . ಬಿ . ಎಂ . ಪಿ . ಯಲ್ಲಿ ಗುತ್ತಿಗೆ ಪದ್ಧತಿಯನ್ನು 30 ವರ್ಷಕ್ಕೆ ಖಾಸಗಿ ಕಂಪನಿಗೆ ನೀಡಲು ಒಪ್ಪಂದ ಮಾಡಿಕೊಂಡಿದ್ದು , ನಂತರ ಸದರಿ ಪ್ರಕ್ರಿಯೆಯನ್ನು ರಾಜ್ಯದ ಹೈಕೋರ್ಟ್‌ ರದ್ದು ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿರುತ್ತದೆ .

ಶ್ರೀ ಸಿದ್ದರಾಮಯ್ಯ ಸರ್ಕಾರದಲ್ಲಿ ಪೌರಕಾರ್ಮಿಕರ ಸುವರ್ಣಯುಗವೆಂದರೆ ತಪ್ಪಗಲಾರದು , ಅವರ ಅಧಿಕಾರ ಅವಧಿಯಲ್ಲಿ ಈ ಕೆಳಕಂಡ ಐತಿಹಾಸಿಕ ಯೋಜನೆಗಳನ್ನು ಜಾರಿಗೊಳಿಸಿರುತ್ತಾರೆ .

1 ) ಗುತ್ತಿಗೆ ಪದ್ದತಿಯನ್ನು ರದ್ದು ಮಾಡಿ ಸದರಿ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳಿಂದ ನೇರ ವೇತನ ಪಾವತಿ .

2 ) 7800 ವೇತನವನ್ನು ಎರಡು ಪಟ್ಟು ಹೆಚ್ಚು ಮಾಡಿ 14800 ರೂ ವೇತನ ಜಾರಿ ಮಾಡಿರುವುದು .

3 ) ಬಿಸಿ ಊಟದ ಯೋಜನೆ ಜಾರಿ ಮಾಡಿರುವುದು .

4 ) ಸ್ಥಳೀಯ ಸಂಸ್ಥೆಗಳ ಎಸ್ . ಸಿ . ಪಿ . ಮತ್ತು ಟಿ . ಎಸ್ . ಪಿ . ಮೀಸಲಾತಿ ಹಣದಲ್ಲಿ ಇವರಿಗೆ ಶೇ . 20 % ಮೀಸಲು ಆದೇಶ ಮಾಡಿರುವುದು .

5 ) ಬಿ . ಡಿ . ಎ . ಕಟ್ಟಿಸಿರುವ 400 ಫ್ಲಾಟ್‌ಗಳನ್ನು ಉಚಿತವಾಗಿ ಪೌರಕಾರ್ಮಿಕರಿಗೆ ನೀಡಲು ಆದೇಶ ಮಾಡಿರುವುದು .

6 ) ಪೌರಕಾರ್ಮಿಕರಿಗೆ ವಿದೇಶ ಪ್ರವಾಸ ಯೋಜನೆ ಜಾರಿ ಮಾಡಿರುವುದು .

7 ) ಸ್ಥಳೀಯ ಸಂಸ್ಥೆಗಳಲ್ಲಿ ನಾಮನಿರ್ದೇಶನ ಸಂಬರ್ಧದಲ್ಲಿ ಈ ಜನಾಂಗದ ಒಬ್ಬರನ್ನು ನೇಮಕ ಮಾಡಲು ಆದೇಶ ಮಾಡಿರುವುದು .

8 ) ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚನೆ ಮಾಡಿರುವುದು .

ಇತ್ಯಾದಿ ಯೋಜನೆಗಳನ್ನು ಜಾರಿ ಮಾಡಿರುತ್ತಾರೆ . ಸದರಿ ಯೋಜನೆಗಳು ಭಾರತ ದೇಶದ ಯಾವುದೇ ರಾಜ್ಯದಲ್ಲಿ ಜಾರಿಯಾಗಿರುವುದಿಲ್ಲಾವೆಂದು ತಿಳಿಸುತ್ತೇನೆ .

ಸದರಿ ವಿಷಯವಾಗಿ ಶ್ರೀ ಎನ್ . ಆರ್ , ರಮೇಶ್ ರವರ ಜೊತೆ ಚರ್ಚಿಸಲು ಸಿದ್ಧನಿದ್ದೇನೆ . ಶ್ರೀ ಎನ್ . ಆರ್ . ರಮೇಶ್ ರವರು ಬ್ಲಾಕ್‌ಮೇಲ್ ಮಾಡುವುದನ್ನು ಮತ್ತು ಪೌರಕಾರ್ಮಿಕರ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು .

ನಾರಾಯಣ – ಮಾಜಿ ಅಧ್ಯಕ್ಷರು,

ಎನ್. ಪಿ. ಶ್ರೀನಿವಾಸ್,

ಸುರೇಶ್ ಬಾಬು,

ಮತ್ತು ಎಂ. ಜಿ. ಶ್ರೀನಿವಾಸ್ ಉಪಸ್ತಿತರಿದ್ದರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.