ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ೧೪ನೆಯ ಕನ್ನಡ ಸಾಹಿತ್ಯ ಸಮ್ಮೇಳನ

೨೦೧೬ರ ಮಾರ್ಚಿ ತಿಂಗಳಿನಿಂದ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವ ವಹಿಸಿಕೊಂಡ ನಾವು ಅತ್ಯಂತ ಪ್ರಾಮಾಣಿಕವಾಗಿ ಕನ್ನಡದ ಅಸ್ಮಿತೆಯನ್ನು ಕಾಪಾಡುವ , ಕನ್ನಡ , ಕನ್ನಡತನವನ್ನುಳಿಸಿ ಬೆಳೆಸುವ ಕಾಯಕದಲ್ಲಿ ಕ್ರಿಯಾಶೀಲರಾಗಿದ್ದೇವೆ . ೨೦೧೩ರ ಅಕ್ಟೋಬರ್‌ನಲ್ಲಿ ಪುರಭವನ , ೨೦೧೨ರ ಏಪ್ರಿಲ್‌ನಲ್ಲಿ ವಿಜಯನಗರ , ೨೦೧೨ಡಿಸೆಂಬರ್‌ನಲ್ಲಿ ಕರ್ನಾಟಕ ಗಡಿ ಭಾಗವಾದ ಚಂದಾಪುರದಲ್ಲಿ , ೨೦೧೮ರ ಮಾರ್ಚಿನಲ್ಲಿ ಮಾಗಡಿ ರಸ್ತೆಯ ಸೀಗೆಹಳ್ಳಿಗೇಟ್ ಬಳಿ ಹೀಗೆ ನಾಲ್ಕು ಸಮ್ಮೇಳನಗಳನ್ನು ನಡೆಸಿರುತ್ತೇವೆ . ಪ್ರಸ್ತುತ ೫ನೇ ಸಮ್ಮೇಳನವಾಗಿ ರಂಗಭೂಮಿಯ ಕಲಾವಿದರಿಗೆ ಪ್ರಾಧಾನ್ಯತೆಯನ್ನು ನೀಡಿ ೧೪ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಜುಲೈ ೧೩ / ೧೪ರ ಎರಡು ದಿನಗಳ ಕಾಲ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ . ಈ ನಾಡಿನ ಹೆಸರಾಂತ ಸಾಹಿತಿ ರಂಗನಟ ಹಾಗೂ ಚಿತ್ರ ನಟರಾದ ಶ್ರೀ ಎಚ್ . ಜಿ ಸೋಮಶೇಖರ್‌ರಾವ್ ಅವರು ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿರುತ್ತಾರೆ .

ಜುಲೈ ೧೩ರ ರಂದು ಬೆಳಗ್ಗೆ ೮ . ೦೦ ಗಂಟೆಗೆ ನ್ಯಾಷನಲ್ ಕಾಲೇಜ್ ಮೆಟ್ರೋ ನಿಲ್ದಾಣ , ಕೆ . ಆರ್ ರಸ್ತೆ , ಬಸವನಗುಡಿ ಇಲ್ಲಿನ ನಗರಜಿಲ್ಲಾ ಕ . ಸಾ . ಪ . ದ ಹೊಸ ನಿವೇಶನದಲ್ಲಿನ ಭುವನೇಶ್ವರಿ ಪ್ರತಿಮೆಯ ಬಳಿ ಬೆಂಗಳೂರು ಲೋಕಸಭಾಕ್ಷೇತ್ರದ ಸಂಸದರಾದ ಎಲ್ . ಎಸ್ . ತೇಜಸ್ವಿಸೂರ್ಯ ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ . ಅಲ್ಲಿಂದ ಸಮ್ಮೇಳನಾಧ್ಯಕ್ಷರ ಸಾರೋಟಿನ ಜೊತೆಯಲ್ಲಿ ಕಿಮ್ಸ್ ವೃತ್ತದ ಕೆಂಪೇಗೌಡ ಪ್ರತಿಮೆ ನಾಷನಲ್ ಕಾಲೇಜ್ ವೃತ್ತದ ಬಿ . ಎಂ . ಶ್ರೀ ಪ್ರತಿಮೆ , ಲಾಲ್ ಬಾಗ್ ಪಶ್ಚಿಮ ದ್ವಾರದ ಕುವೆಂಪು ಪ್ರತಿಮೆ , ಸಜ್ಜನ್‌ ರಾವ್ ವೃತ್ತದ ಅ . ನ . ಕೃ ಪ್ರತಿಮೆ , ಹಾಗೂ ಮಿನರ್ವ ವೃತ್ತ , ಜೆ . ಸಿ . ರಸ್ತೆಯ ಮಾರ್ಗವಾಗಿ ಮೆರವಣಿಗೆ ರವೀಂದ್ರ ಕಲಾಕ್ಷೇತ್ರ ತಲುಪುವುದು .

ಈ ಸಮ್ಮೇಳನದಲ್ಲಿ ರಾಜಕೀಯ ಧುರೀಣರು , ರಂಗಭೂಮಿಯ ತಂತ್ರಜ್ಞರು , ನಟರು , ನಾಟಕಕಾರರು , ಪ್ರಸಾಧನಾ ಕಲಾವಿದರು , ಮುಂತಾದ ನಾಟಕ ರಂಗದ ದಿಗ್ಗಜರು ಭಾಗವಹಿಸಲಿದ್ದಾರೆ . ಈ ಸಮ್ಮೇಳನವನ್ನು ನಾಡೋಜ ಡಾ . ಬರಗೂರು ರಾಮಚಂದ್ರಪ್ಪನವರು ಉದ್ಘಾಟಿಸಲಿದ್ದಾರೆ . ಮೂರು ವಿಚಾರ ಗೋಷ್ಠಿಗಳು , ಕವಿಗೋಷ್ಠಿ , ನಾಲ್ಕು ನಾಟಕಗಳು , ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯ ಮೇಲೆ ಅನಾವರಣಗೊಳ್ಳಲಿವೆ . ಈ ಸಮ್ಮೇಳನ ಸಂಪೂರ್ಣವಾಗಿ ರಂಗಭೂಮಿಗೆ ಮೀಸಲಾಗಿರುತ್ತದೆ . ಹಿರಿಯ ರಂಗಕರ್ಮಿಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸೇವಾರತ್ನ ಪ್ರಶಸ್ತಿಯನ್ನಿತ್ತು ಗೌರವಿಸಲಾಗುತ್ತಿದೆ .

— ಶ್ರೀ. ಮಾಯಣ್ಣ
ಅಧ್ಯಕ್ಷರು – ಬೆಂ.ನ.ಜಿ.ಕ.ಸಾ.ಪ

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.