ಗುಂಪು ಹತ್ಯೆಯ ವಿರುದ್ಧ ಪಾಪ್ಯುಲರ್ ಫ್ರಂಟಿನಿಂದ ರಾಷ್ಟ್ರೀಯ ಅಭಿಯಾನ

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವು ಇಂದು ಲಿಂಚಿಸ್ಥಾನದ ಗಣರಾಜ್ಯ ಎಂಬ ಕುಖ್ಯಾತಿಗೆ ಒಳಗಾಗಿದೆ . ಧಾರ್ಮಿಕ ನಂಬಿಕೆಯ ಕಾರಣದಿಂದ ಮತ್ತು ಜಾತಿ ತಾರತಮ್ಯದ ಕಾರಣದಿಂದ ಮುಗ್ಧ ಜನರನ್ನು ಅಟ್ಟಾಡಿಸಿಕೊಂಡು ಬರ್ಬರವಾಗಿ ಹಲ್ಲೆಗೈದು ಕೊಲ್ಲುವ ಘಟನೆಗಳು ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ . ಗೋಮಾಂಸ ಸೇವಿಸಿದರು ಅಥವಾ ಗೋವನ್ನು ಕೊಂದಿದ್ದರು ಎಂಬ ಕುಲ್ಲಕ ಆರೋಪದ ಮೇಲೆ ಈ ಗುಂಪು ಹತ್ಯೆಗಳು ಹೆಚ್ಚಾಗಿ ನಡೆಯುತ್ತಿದೆ . 2014ರಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ 180ರಷ್ಟು ಗಂಭೀರ ಮತ್ತು 33 ಸಾಮಾನ್ಯ ಗುಂಪು ಹಲ್ಲೆ ಪ್ರಕರಣಗಳು ನಡೆದಿದೆ . ಅವುಗಳಲ್ಲಿ 50 ಮಂದಿಯನ್ನು ಹಾಡುಹಗಲೇ ಹತ್ಯೆಗೈಯ್ಯಲಾಗಿದೆ . ಕೆಲವರನ್ನು ಅತ್ಯಂತ ಬರ್ಬರವಾಗಿ ಜೀವಂತ ದಹಿಸಲಾಗಿದೆ . ಗುಂಪು ಹತ್ಯೆಗೆ ಒಳಗಾದವರಲ್ಲಿ ಶೇ56 ರಷ್ಟು ಬಡ ಮುಸ್ಲಿಮರು ಮತ್ತು ಶೇ 44 ರಷ್ಟು ಹಿಂದುಳಿದ ಜಾತಿಯವರಾಗಿದ್ದಾರೆ . ಬಿಜೆಪಿ ಆಡಳಿತದ 2ನೇ ಅವಧಿಯಲ್ಲಿ ಈ ಗುಂಪು ಹತ್ಯೆಯು ಮತ್ತಷ್ಟು ಬರ್ಬರತೆಯನ್ನು ತಾಳಿದೆ . ಬುಡಕಟ್ಟು ರಾಜ್ಯವಾಗಿರುವ ಜಾರ್ಖಂಡ್ ಗುಂಪು ಹತ್ಯೆಗೆ ಕುಖ್ಯಾತಿಯನ್ನು ಪಡೆದಿದೆ . ಅಲೀಮುದ್ದೀನ್ ಅನ್ಸಾರಿ ಯಿಂದ ಹಿಡಿದು ಇತ್ತೀಚಿಗಿನ ತಬ್ರೇಝಲ್ ಅನ್ಸಾರಿಯ ಹತ್ಯೆಯ ವರೆಗೆ ಅದರ ಪಟ್ಟಿ ಮುಂದುವರಿದಿದೆ . ತಬ್ರೇಝ್ ಅನ್ಸಾರಿಯನ್ನು ಕಟ್ಟಿಹಾಕಿ ಹಲವು ತಾಸುಗಳ ಕಾಲ ಬರ್ಬರವಾಗಿ ಚಿತ್ರಹಿಂಸೆ ನೀಡಿ ‘ ಜೈ ಶ್ರೀ ರಾಮ್ , ಜೈ ಹನುಮಾನ್ ‘ ಎಂದು ಹೇಳುವಂತೆ ಬಲವಂತ ಪಡಿಸುತ್ತಿರುವ ದೃಶ್ಯವು ಪಾರ್ಲಿಮೆಂಟಿನಲ್ಲಿ ಮುಸ್ಲಿಂ ಸಂಸದರೊಬ್ಬರು ಪ್ರಮಾಣವಚನ ಸ್ವೀಕರಿಸುವಾಗ ಮೊಳಗಿದ ‘ ಜೈ ಶ್ರೀ ರಾಮ್ ‘ ಘೋಷಣೆಯಿಂದ ಪ್ರೇರಣೆಗೊಂಡಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ . ಇದು ದೇಶದ ಅಲ್ಪ ಸಂಖ್ಯಾತ , ದಲಿತ ಮತ್ತು ಹಿಂದುಳಿದ ಸಮುದಾಯಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಮಾಡಿದೆ . ಆದುದರಿಂದ ಈ ರೀತಿಯ ಗುಂಪು ಹತ್ಯೆ ನಡೆಸುವ ಫ್ಯಾಶಿಸ್ಟ್ ಶಕ್ತಿಗಳನ್ನು ಕಾನೂನಿನ ಅಡಿಯಲ್ಲಿ ಪ್ರತಿರೋಧಿಸಿ ದೇಶದ ಜನರ ಮನಸ್ಸಿನಲ್ಲಿ ನಿರ್ಭೀತಿ ಮತ್ತು ಸ್ವಾಭಿಮಾನವನ್ನು ಸೃಷ್ಟಿಮಾಡಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ “ ನಿರ್ಭೀತಿಯಿಂದ ಜೀವಿಸಿ . ಘನತೆಯಿಂದ ಜೀವಿಸಿ ” ಎಂಬ ಘೋಷಣೆಯೊಂದಿಗೆ 2019 ಜುಲೈ 15ರಿಂದ ಆಗಸ್ಟ್ 31ರ ವರೆಗೆ ರಾಷ್ಟ್ರೀಯ ಅಭಿಯಾನವನ್ನು ಹಮ್ಮಿಕೊಂಡಿದೆ . ಇದರ ಅಂಗವಾಗಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಾರ್ವಜನಿಕ ಸಭೆ , ಕಾರ್ನರ್ ಮೀಟಿಂಗ್ , ಬೀದಿನಾಟಕ , ಭಿತ್ತಿಪತ್ರ , ಕರಪತ್ರ ವಿತರಣೆ , ಸೆಮಿನಾರ್ ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ . ಈ ಕಾರ್ಯಕ್ರಮಗಳಲ್ಲಿ ರಾಜ್ಯದ ಜನತೆ ಹೆಚ್ಚಿನ ಸಂಖ್ಯೆಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಈ ಮೂಲಕ ವಿನಂತಿಸುತ್ತೇವೆ .

ಪತ್ರಿಕಾ ಗೋಷ್ಠಿಯಲ್ಲಿ : 1 . ಅಬ್ದುಲ್ ರಜಾಕ್‌ ಕೆಮ್ಮಾರ ( ರಾಜ್ಯ ಕಾರ್ಯದರ್ಶಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ) * 2 . ಶಾಫಿ ಬೆಳ್ಳಾರೆ ( ರಾಜ್ಯ ಸಮಿತಿ ಸದಸ್ಯರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ) 3 . ಫಾರೂಕ್ ರಾಮನಗರ ( ರಾಜ್ಯ ಸಮಿತಿ ಸದಸ್ಯರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ) – : 4 . ವಾಜಿದ್ ಬೆಂಗಳೂರು ( ಜಿಲ್ಲಾಧ್ಯಕ್ಷರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಂಗಳೂರು )ಉಪಸ್ಥಿತರಿದ್ದರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.