ಶ್ರೀ ಬಸವೇಶ್ವರ ಸುಜ್ಞಾನ ಕಲ್ಯಾಣ ಮಂಟಪದಲ್ಲಿ ವೀರಶೈವ ಅರ್ಚಕರ ಪುರೋಹಿತರ ಹಾಗೂ ಆಗಮಿಕರ ದ್ವಿತೀಯ ರಾಷ್ಟ್ರೀಯ ಮಟ್ಟದ ಸಮಾರಂಭ

ದಿನಾಂಕ : 18 . 07 . 2019 ರಿಂದ 20 . 07 . 2019 ರವರೆಗೆ 3 ದಿನಗಳ ಕಾಲ ವೈಧಿಕ ಚಾರಿಟಬಲ್ ಟ್ರಸ್ಟ್ , ಮಹಾಲಕ್ಷ್ಮಿ ಗುರುಕುಲ ( ರಿ ) ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಆಶ್ರಯದಲ್ಲಿ 3 ದಿನಗಳ ಕಾಲ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಕಲ್ಯಾಣ ಮಂಟಪದಲ್ಲಿ ವೀರಶೈವ ಅರ್ಚಕರ ಪುರೋಹಿತರ ಹಾಗೂ ಆಗಮಿಕರ ದ್ವಿತೀಯ ರಾಷ್ಟ್ರೀಯ ಮಟ್ಟದ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಡಾ . ಕೆ . ಎನ್ . ರಾಜಕುಮಾರ್ ಶಾಸ್ತಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು . 18ನೇ ತಾರೀಖು ವಿಭೂತಿಪುರ ಮಹಾಸಂಸ್ಥಾನ ಮಠದ ಸ್ವಾಮೀಜಿಗಳಾದ ಡಾ . ಮಹಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ . ಚನ್ನಗಿರಿ ತಾಲ್ಲೂಕಿನ ಶಿಲಾಮಠದ ಡಾ . ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ಮಾಡಲಿದ್ದಾರೆ . ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾದ ಡಾ . ಪ್ರಕಾಶ್ ಆರ್ . ಪಾಗೋಜಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ . ಕಾರ್ಯಾಗಾರವನ್ನು ವೀರಶೈವ ಮುಖಂಡರಾದ ವಾಗೀಶ್‌ಪ್ರಸಾದ್ ಚಾಲನೆ ನೀಡಲಿದ್ದಾರೆ . ಮಹಾರಾಷ್ಟ್ರದ ಸೊಲ್ಲಾಪುರದ ಡಾ . ಶಿವಯೋಗಿ ಹೋಳಿಮರ್ ಅಧ್ಯಕ್ಷತೆ ವಹಿಸಲಿದ್ದಾರೆ . ಶ್ರೀ ಜಾವಗಲ್ ಹೊನ್ನಪ್ಪ ಶಾಸ್ತ್ರಿಗಳು ಉಪಸ್ಥಿತರಿರುತ್ತಾರೆ . 19 ರಂದು ಜನಪ್ರಿಯ ಶಾಸಕರಾದ ವಿಜಯನಗರದ ಎಂ . ಕೃಷ್ಣಪ್ಪನವರು ಉದ್ಘಾಟಿಸಲಿದ್ದು , ನಿವೃತ್ತ ಐಎಎಸ್ ಅಧಿಕಾರಿಗಳಾದ ಡಾ . ಸಿ . ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ .

20ನೇ ತಾರೀಖು ಬೆಳಿಗ್ಗೆ 9 . 30 ಕ್ಕೆ ವಿಜಯನಗರದ ಹರಿಹರೇಶ್ವರ ಸ್ವಾಮಿ ದೇವಾಲಯದಿಂದ ಪೂರ್ಣಕುಂಭ | ಸ್ವಾಗತದೊಂದಿಗೆ ನಂದಿಧ್ವಜ , ವೀರಗಾಸೆ ಇನ್ನಿತರ ತಂಡಗಳಿಂದ ಸುಜ್ಞಾನ ಬಸವೇಶ್ವರ ಕಲ್ಯಾಣ ಮಂಟಪಕ್ಕೆ ಉಕ್ಕೇರಿ ಹಿರೆಮಠದ ಪೀಠಾಧ್ಯಕ್ಷರಾದ ಡಾ . ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ . ಯಡಿಯೂರು ಕ್ಷೇತ್ರದ ಶ್ರೀಗಳಾದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಹಾಗೂ ಬೆಳಗಾವಿ ಜಿಲ್ಲೆಯ ಮುರಗೋಡು ಮಹಾಂತ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಹಾಗೂ ಮುಡುಕುತೊರೆ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿ ಸೇರಿದಂತೆ ಕೆ . ವಿ . ವಿ ಸಂಸ್ಥೆಯ ಅಧ್ಯಕ್ಷರಾದ ಬಿ . ಎಸ್ . ಪರಮಶಿವಯ್ಯ ಅವರು ಭಾಗವಹಿಸಲಿದ್ದಾರೆ . ಅಂದಿನ ಕಾರ್ಯಕ್ರಮವನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ . ವಿ . ಗಿರೀಶ್ಚಂದ್ರ ಉದ್ಘಾಟಿಸಲಿದ್ದಾರೆ . ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ನಾಡಿನ ಸರಗೂರು ಚರಮೂರ್ತಿಗಳು ಹಾಗೂ ನಾಲ್ಕು ರಾಜ್ಯಗಳಾದ ಕರ್ನಾಟಕ , ತಮಿಳುನಾಡು , ಆಂದ್ರ , ತೆಲಂಗಾಣದಲ್ಲಿರುವ ಅರ್ಚಕರು ಮತ್ತು ಪುರೋಹಿತರು ಭಾಗವಹಿಸಲಿದ್ದಾರೆ . ವೈಧಿಕ ವಿದ್ವಾಂಸರುಗಳಿಗೆ ವೈಧಿಕ ಶಿಕಾಮಣಿ ರಾಷ್ಟ್ರೀಯ ಪ್ರಶಸ್ತಿಯನ್ನು 20 ಜನರಿಗೆ ವಿತರಿಸಲಾಗುವುದು ಎಂದು ಕೆ . ಎನ್ , ರಾಜಕುಮಾರಶಾಸ್ತ್ರಿ -ಅಧ್ಯಕ್ಷರು, ಶಿವಕುಮಾರ ಆರಾಧ್ಯ- ಕಾರ್ಯಕಾರಿ ಸಮಿತಿ ಸದಸ್ಯರು, ವೀರಪ್ಪ ದೇವರು-ಕಾರ್ಯಕಾರಿ ಸಮಿತಿ ಸದಸ್ಯರು, ಸೋಮಶೇಖರ ಗಾಂಧಿ- ಖಜಾಂಚಿ, ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.