” ಮದ್ಯಪಾನ ತ್ಯಜಿಸಿ ಕ್ಷೀರಪಾನ ಸೇವಿಸಿ ” ಎಂಬ ರಾಷ್ಟ್ರೀಯ ಆಂದೋಲನ

ಜನತಾದಳ ( ಸಂಯುಕ್ತ ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ . ವಿ . ಶಿವರಾಂ ನೇತೃತ್ವದ ಪತ್ರಿಕಾ ಗೋಷ್ಠಿ

ನಮ್ಮ ದೇಶದಲ್ಲಿ ಬನರು ಮದ್ಯಪಾನ ಮಾಡುತ್ತಿರುವುದರಿಂದ ಆಗುತ್ತಿರುವ ಅನಾಹುತಗಳು ಏನೇನೆಂಬುದು ಮದ್ಯಪಾನಿಗಳೂ ಸೇರಿದಂತೆ ಎಲ್ಲರಿಗೂ ಶಿಳಿದಿರುವ ಸಂಗತಿ . ನಮ್ಮ ದೇಶದಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ಮದ್ಯಪಾನ ನಿಷೇಧಿಸಬೇಕೆಂದು ಹಲವಾರು ಸಂಘಸಂಸ್ಥೆಗಳು ಆಗ್ರಹಿಸುತ್ತಲೇ ಬರುತ್ತಿವೆ . ಈ ಹಿನ್ನಲೆಯಲ್ಲಿ ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮವನ್ನು ಅರಿತ , ಬಿಹಾರದಲ್ಲಿ ಆಡಳಿತದಲ್ಲಿರುವ ಶ್ರೀ ನಿತೀಶ್‌ಕುಮಾರ್ ನೇತೃತ್ವದ ಜೆಡಿ ( ಯು ) ಪಕ್ಷದ ಸರ್ಕಾರವು ಈಗಾಗಲೇ ಮದ್ಯಪಾನವನ್ನು ನಿಷೇಧಿಸಿದೆ . ಸರ್ಕಾರದ ಈ ನಿರ್ಧಾರವನ್ನು ಬಿಹಾರದ ಜನತೆ ಸಕಾರಾತ್ಮಕವಾಗಿ ಸ್ವಾಗತಿಸಿ ಬೆಂಬಲಿಸಿದ್ದಾರೆ . ಮದ್ಯಪಾನ ಮಾಡುವ ವ್ಯಕ್ತಿಗೆ ಆರ್ಥಿಕ ನಷ್ಟ , ಕೌಟುಂಬಿಕ ಸಮಸ್ಯೆ , ಅನಾರೋಗ್ಯದ ಹಿಂಸೆ ಮುಂತಾದ ಅಪಾರ ನಷ್ಟಗಳು ಉಂಟಾಗುತ್ತಿವೆ : ಮದ್ಯಪಾನದಂತಹ ಈ ದುಶ್ಚಟದ ಬಗ್ಗೆ , ಅದರಿಂದ ಮದ್ಯಪಾನಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಆಗುತ್ತಿರುವ ಬೆಲೆ ಕಟ್ಟಲಾಗದ ಹಾನಿಗಳ ಬಗ್ಗೆ ಜನಗಳಲ್ಲಿ ಜಾಗೃತಿ ಮೂಡಿಸುವುದರಿಂದ ಮದ್ಯಪಾನ ಮುಕ್ತ ಸಮಾಜ ನಿರ್ಮಾC೮ ಸಾಧ್ಯ . ಈ ನಿಟ್ಟಿನಲ್ಲಿ ಜೆಡಿ ( ಯು ) ಪಕ್ಷದ ಯುವ ಘಟಕದ ವತಿಯಿಂದ ಜೆಡಿಯು ಪಕ್ಷದ ರಾಷ್ಟ್ರೀಯ ಯುವಘಟಕದ ಅಧ್ಯಕ್ಷರಾದ ಶ್ರೀ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ ದೇಶದಾದ್ಯಂತ ಇದೇ ಜುಲೈ ೨೦ರಿಂದ ” ಮದ್ಯಪಾನ ತ್ಯಜಿಸಿ ಕ್ಷೀರಪಾನ ಸೇವಿಸಿ ” ಎಂಬ ರಾಷ್ಟ್ರೀಯ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ . ಜೆಡಿ ( ಯು ) ಪಕ್ಷದ ಕರ್ನಾಟಕ ರಾಜ್ಯ ಯುವ ಘಟಕವು ಜುಲೈ ೨೦Oಂದು ಬೆಂಗಳೂರು ನಗರದ ಬೆಳಿಗ್ಗೆ 6 ಗಂಟೆಯಿಂದ ಒಂದು ದಿನ ” ಮದ್ಯಪಾನ ತ್ಯಜಿಸಿ – ಕ್ಷೀರಪಾನ ಸೇವಿಸಿ ” ಜನಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ .

ಈ ಕಾರ್ಯಕ್ರಮದಲ್ಲಿ ಜೆಡಿ ( ಯು ) ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ನಮ್ಮ ಮದ್ಯಪಾನ ವಿರೋಧಿ ಜನಜಾಗೃತಿ ಆಂದೋಲನಕ್ಕೆ ಮದ್ಯಪಾನ ನಿಷೇಧವನ್ನು ಆಗ್ರಹಿಸುತ್ತಿರುವ ಸಂಘ – ಸಂಸ್ಥೆಗಳು , ಮದ್ಯಪಾನ ವಿರೋಧಿಸುತ್ತಿರುವ ಸಾರ್ವಜನಿಕರು ಮತ್ತು ಮದ್ಯಪಾನ ತ್ಯಜಿಸಬೇಕೆಂದು ಬಯಸುವವರು ಭಾಗವಹಿಸಿ ಈ ಆಂದೋಲನ ಯಶಸ್ವಿಯಾಗುವಂತೆ ನಮಗೆ ಸಹಕಾರ ನೀಡಬೇಕೆಂದು ನಾನು ವಿನಂತಿಸಿಕೊಳ್ಳುತ್ತಿದ್ದೇನೆ . ನಮ್ಮ ರಾಜ್ಯದಲ್ಲಿ ಹಲವು ವರ್ಷಗಳ ಹಿಂದೆ ಸಾರಾಯಿ ವಿರುದ್ದ ರಾಜ್ಯದಾದ್ಯಂತ ಜನಾಂದೋಲನ ನಡೆದಿದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಸಾರಾಯಿ ನಿಷೇಧ ಜಾರಿಗೆ ತಂದಿದ್ದು ಜನತೆಗೆ ತಿಳಿದಿದೆ . ಹಾಗೆಯೇ ನಮ್ಮ ಈ ಮದ್ಯಪಾನ ವಿರೋಧಿ ಆಂದೋಲನವು ರಾಜ್ಯದಾದ್ಯಂತ ಪರಿಣಾಮಕಾರಿಯಾಗಿ ರೂಪುಗೊಂಡಲ್ಲಿ , ನಮ್ಮ ರಾಜ್ಯ ಸರ್ಕಾರವೂ ಎಚ್ಚೆತ್ತು ಮದ್ಯಪಾನ ನಿಷೇಧ ಜಾರಿಗೆ ತರವುದಕ್ಕೆ ಪ್ರೇರಣೆ ಯಾಗುತ್ತದೆ .

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು : ೧ . ಕೆ . ಶೇಖರಪ್ಪ , ರಾಷ್ಟ್ರೀಯ ಕಾರ್ಯದರ್ಶಿ , ಯುವ ಜೆಡಿ ( ಯು )

೨ . ಮಂಜುನಾಥ್ ಎಚ್ . , ಕಾರ್ಯಕಾರಿಣಿ ಸದಸ್ಯರು , ರಾಜ್ಯ ಯುವ ಘಟಕ

೩ . ಗೀತಾಂಜಲಿ , ಉಪಾಧ್ಯಕ್ಷರು , ಬೆಂಗಳೂರು ಮಹಾನಗರ ಜೆಡಿ ( ಯು )

೪ . ಎಸ್ . ಆರ್ . ಸಂಜಯ್‌ಕುಮಾರ್ , ಅಧ್ಯಕ್ಷರು , ಬೆಂಗಳೂರು ಮಹಾನಗರ ಯುವ ಘಟಕ

೫ . ಜಮಾನುಲ್ಲಾ ಖಾನ್ , ಅಧ್ಯಕ್ಷರು , ಅಲ್ಪಸಂಖ್ಯಾತ ಘಟಕ , ಬೆಂಗಳೂರು ನಗರ

೬ . ಮಂಜುಳಾ ರೆಡ್ಡಿ , ಜೆಡಿ ( ಯು ) ಮುಖಂಡರು ‘

೭ . ಬಿ . ದೀಪಕ್‌ಕುಮಾರ್ , ಸಂಘಟನಾ ಕಾರ್ಯದರ್ಶಿ , ಯುವ ಜೆಡಿ ( ಯು ) ೮ . ಅಣ್ಣಪ್ಪ ರಾಜ್ಯ ಕಾರ್ಯದರ್ಶಿ , ಜೆಡಿ ( ಯು ) ಭಾಗವಹಿಸಿದರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.