ಜೆ ಡಿ ( ಯು ) ಪಕ್ಷದ ಯುವ ಘಟಕದ ವತಿಯಿಂದ , ಪಕ್ಷದ ರಾಷ್ಟ್ರೀಯ ಯುವಘಟಕದ ಅಧ್ಯಕ್ಷರಾದ ಶ್ರೀ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ “ಮದ್ಯಪಾನ ತ್ಯಜಿಸಿ – ಕ್ಷೀರಪಾದ ಸೇವಿಸಿ” ರಾಷ್ಟ್ರೀಯ ಆಂದೋಲನ

ನಮ್ಮ ದೇಶದಲ್ಲಿ ಮದ್ಯಪಾನ ಮಾಡುತ್ತಿರುವುದರಿಂದ ಆಗುತ್ತಿರುವ ಅನಾಹುತಗಳು ಏನೇನೆಂಬುದು ಮದ್ಯಪಾನಿಗಳೂ ಸೇರಿದಂತೆ ಎಲ್ಲರಿಗೂ ತಿಳಿದಿರುವ ಸಂಗತಿ . ನಮ್ಮ ದೇಶದಲ್ಲಿ ರಾಜ್ಯ ಸರ್ಕಾರಗಳು ಸಂಪೂರ್ಣ ಮದ್ಯಪಾನ ನಿಷೇಧಿಸಬೇಕೆಂದು ಹಲವಾರು ಸಂಘ – ಸಂಕ್ಷಿಗಳು ಆಗ್ರಹಿಸುತ್ತಲೇ ಬರುತ್ತಿವೆ . ಈ ಹಿನ್ನೆಲೆಯಲ್ಲಿ ಮದ್ಯಪಾನದಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರಿತು , ಬಿಹಾರದಲ್ಲಿ ಆಡಳಿತದಲ್ಲಿರುವ ಶ್ರೀ ನಿತೀಶ್ ಕುಮಾರ್ ನೇತೃತ್ವದ ಜೆಡಿ ( ಯು ) ಪಕ್ಷದ ಸರ್ಕಾರವು ಈಗಾಗಲೇ ರಾಜ್ಯದಲ್ಲಿ ಮದ್ಯಪಾನವನ್ನು ನಿಷೇಧಿಸಿದೆ . ಸರ್ಕಾರದ ಈ ನಿಧ೯ರವನ್ನು ಬಿಹಾರದ ಚಿನಕೆ ಸಕಾರಾತ್ಮಕವಾಗಿ ಸ್ವಾಗತಿಸಿ ಬೆಂಬಲಿಸಿದ್ದಾರೆ . ಮದ್ಯಪಾನ ಮಾಡುವ ವ್ಯಕ್ತಿಗೆ ಆರ್ಥಿಕ ನಷ್ಟ , ಕೌಟುಂಬಿಕ ಸಮಸ್ಯೆ , ಅನಾರೋಗ್ಯದ ಹಿಂಸೆ ಮುಂತಾದ ಅಪಾರ ನಷ್ಟಗಳು ಉಂಟಾಗುತ್ತವೆ . ಮದ್ಯಪಾನದಂತಹ ದುಶ್ಚಟದ ಬಗ್ಗೆ , ಅದರಿಂದ ಮದ್ಯಪಾನಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಆಗುತ್ತಿರುವ ಬೆಲೆ ಕಟ್ಟಲಾಗದ ಹಾನಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರಿಂದ ಮದ್ಯಪಾನ ಮುಕ್ತ ಸಮಾಜ ವಿರ್ವಾಣ ಸಾಧ್ಯ .

ಈ ನಿಟ್ಟಿನಲ್ಲಿ ಜೆಡಿ ( ಯು ) ಪಕ್ಷದ ಯುವ ಘಟಕದ ವತಿಯಿಂದ , ಪಕ್ಷದ ರಾಷ್ಟ್ರೀಯ ಯುವಘಟಕದ ಅಧ್ಯಕ್ಷರಾದ ಶ್ರೀ ಸಂಜಯ್ ಕುಮಾರ್ ಅವರ ನೇತೃತ್ವದಲ್ಲಿ ದೇಶದಾದ್ಯಂತ ಇದೇ ಜುಲೈ . ೧೦ರಿಂದ ‘ ಮದ್ಯಪಾನ ತ್ಯಜಿಸಿ – ಕ್ಷೀರಪಾನ ಸೇವಿಸಿ ” ಎಂಬ ರಾಷ್ಟ್ರೀಯ ಅಂದೋಲನವನ್ನು ಹಮ್ಮಿಕೊಳ್ಳಲಾಗಿದೆ . ನಮ್ಮ ದೇಶದಲ್ಲಿ ಆರೋಗ್ಯವಂತ ಸಮಾಜ ನಿರ್ಮಿಸಲು , ಕೌಟುಂಬಿಕ ಕಲ್ಯ ಕಾಪಾಡಲು ಈ ರಾಷ್ಟ್ರೀಯ ಆಂದೋಲನಕ್ಕೆ ಜನಪರ ಸಂಘಟನೆಗಳು , ಎಲ್ಲಾ ಸಮುದಾಯದವರು ಕೈಜೋಡಿಸಬೇಕೆಂದು ನಾವು ವಿನಯಪೂರ್ವಕವಾಗಿ ಮನವಿ ಮಾಡಲಾಯಿತು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.