ತೆಲುಗು ವಿಜ್ಞಾನ ಸಮಿತಿ 67ನೇ ಸಂಸ್ಥಾಪಕ ದಿನೋತ್ಸವ ಮತ್ತು ಪದ್ಮಭೂಷಣ , ಜ್ಞಾನಪೀಠ ಪುರಸ್ತುತರು , ಡಾ . ಶ್ರೀ ನಾರಾಯಣ ರೆಡ್ಡಿ ರವರ 88ನೇ ಜನ್ಮ ಜಯಂತಿ

ತೆಲುಗು ವಿಜ್ಞಾನ ಸಮಿತಿ ನಡೆದು ಬಂದ ದಾರಿ ತೆಲುಗು ವಿಜ್ಞಾನ ಸಮಿತಿ , ತೆಲುಗು ಭಾಷೆ ಕನ್ನಡಿಗರ ಆಶೋತ್ತರವಾಗಿರುವ ಕರ್ನಾಟಕದ ಮೊದಲ ಸಂಸ್ಥೆ , 1952 ರಲ್ಲಿ ಅಂದಿನ ಭಾರತ ಸರ್ಕಾರದ ಅಧೀನದಲ್ಲಿದ್ದ “ ಕಾಫಿ ಬೋರ್ಡ್ * ನ ಮೊದಲ ಅಧ್ಯಕ್ಷರಾದ ದಿ ಸನ್ಮಾನ್ಯ ಶ್ರೀ ತೆನ್ನೆ ವಿಶ್ವನಾಥಂ , ಶ್ರೀ ಸೂರಿ ಭಗವಂತಂ , ಶ್ರೀ ಜೋಗಾರಾವು , ತಿರುಮಲ ತಿರುಪತಿ ದೇವಸ್ಥಾನದ ಅಂದಿನ ಅಧ್ಯಕ್ಷರೂ , ಆಡಳಿತಾಧಿಕಾರಿಯೂ ಆಗಿದ್ದ ಶ್ರೀ ಸಿ . ಅನ್ನಾರಾವು ಮುಂತಾದ ಸಮಾನ ಮನಸ್ಕರಿಂದ “ ತೆಲುಗು ವಿಜ್ಞಾನ ಸಮಿತಿ ” ಎಂಬ ಕೂಸು ಸ್ಥಾಪನೆಯಾಯಿತು . ಅಂದಿನಿಂದ ಇಂದಿನವರೆಗೂ ತೆಲುಗು ಮತ್ತು ಕನ್ನಡ ಭಾಷೆ ಸಾಂಸ್ಕೃತಿಕ , ಶೈಕ್ಷಣಿಕ , ಸಾಹಿತ್ಯ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಅದರ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಾ ಬಂದಿದೆ .

ಇಂದು , ಈ ಸಂಸ್ಥೆಯು ಹೆಮ್ಮರವಾಗಿ ಬೆಳೆದು ತನ್ನ ಶಾಖೆಗಳನ್ನು ಎಲ್ಲೆಡೆ ವಿಸ್ತರಿಸಿ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಅತ್ಯುನ್ನತ ಸಾಧನೆಗೈದಿದೆ . ಈ ಎಲ್ಲದರ ಸಂಕೇತವಾಗಿ ಈ ಸಂಸ್ಥೆ ತನ್ನ 67ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿದೆ . ತೆಲುಗು ವಿಜ್ಞಾನ ಸಮಿತಿಯು , ಪ್ರತಿ ವರ್ಷವೂ , ಶೈಕ್ಷಣಿಕ , ಸಾಮಾಜಿಕ , ಸಾಹಿತ್ಯ , ರಂಗಭೂಮಿ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಮಾಡಿದವರನ್ನು ಪ್ರತಿಷ್ಠಿತ “ ಶ್ರೀ ಕೃಷ್ಣದೇವರಾಯ ಪುರಸ್ಕಾರವನ್ನು ಪ್ರಧಾನ ಮಾಡುತ್ತ ಅವರ ಸೇವೆಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ . ಪದಶ್ರೀ ಡಾ . ಎನ್ . ತಿ . ರಾಮರಾವ್ , ಪದ್ಮಭೂಷಣ ಡಾ . ಅಕ್ಕಿನೇನಿ ನಾಗೇಶ್ವರರಾವು , ಪದ್ಮವಿಭೂಷಣ ಡಾ . ಸಿ . ನಾರಾಯಣರೆಡ್ಡಿ , ಪದ್ಮಭೂಷಣ ಡಾ , ಕೆ . ಜಿ , ಯೇಸುದಾಸ್ , ಪದ್ಮಶ್ರೀ ಡಾ . ಕೆ . ವಿಶ್ವನಾಥ್ , ಪದ್ಯಭC ಡಾ . ಬಿ . ಸರೋಜಾದೇವಿ , ಪದ್ಮಭೂಷಣ ಡಾ . ಎಸ್ . ಪಿ . ಬಾಲಸುಬ್ರಮಣ್ಯಂ , ಪದ್ಮಭುಲಿಯ ಶ್ರೀಮತಿ ಬಿ . ಸುಶೀಲ , ಶ್ರೀಮತಿ ಎಸ್ . ಜಾನಕಿ , ಪದ್ಮಶ್ರೀ ಡಾ . ಎಂ . ಮೋಹನಬಾಬು . ಶ್ರೀಮತಿ ಊರ್ವಶಿ ಶಾರದ , ಪದ್ಮಶ್ರೀ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ . ಯು . ಆರ್ . ಅನಂತಮೂರ್ತಿ , ಪದ್ಮಶ್ರೀ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಡ , ಚಂದ್ರಶೇಖರ ಕಂಬಾರ , ನಿಘಂಟು ಬ್ರಹ್ಮ ಪ್ರೊ , ಡಾ . ವೆಂಕಟಸುಬ್ಬಯ್ಯ , ಪದ್ಮಶ್ರೀ ಡಾ . ಕೆ . ಎಸ್ . ನಿಸಾರ್ ಅಹಮದ್ , ಡಾ . ಹಂಪ ನಾಗರಾಜಯ್ಯ , ಪದ್ಮಶ್ರೀ ಡಾ . ಎಸ್ . ಎಲ್ . ಭೈರಪ್ಪ , ಡಾ . ಬರಗೂರು ರಾಮಚಂದ್ರಪ್ಪ , ಪದ್ಮಶ್ರೀ ಶ್ರೀಮತಿ ಭಾರತಿ ವಿಷ್ಣುವರ್ಧನ್ , ಪ್ರಖ್ಯಾತ ಶಿಕ್ಷಣ ತಜ್ಞ ಡಾ . ಎಂ . ಆರ್ , ದೊರೆಸ್ವಾಮಿ ಮತ್ತು ಇನ್ನೂ ಮುಂತಾದ ಶ್ರೇಷ್ಠ ದಿಗ್ಗಜರುಗಳು ಈ ಪುರಸ್ಕಾರಕ್ಕೆ ಪಾತ್ರರಾಗಿರುತ್ತಾರೆ . ತೆಲುಗು ವಿಜ್ಞಾನ ಸಮಿತಿಯ ಅಧ್ಯಕ್ಷರಾದ ಡಾ . ಎ . ರಾಧಾಕೃಷ್ಣ ರಾಜು ರವರು ಡಾ . ಸಿ . ಅನ್ನರಾವುರವರ ನಂತರ ಅಧ್ಯಕ್ಷ ಪದವಿಯನ್ನು ಅಲಂಕರಿಸಿ ಸಂಘದ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ . ಡಾ . ಎ . ರಾಧಾಕೃಷ್ಣ ರಾಜು ರವರ ದೇಶದ ವಿವಿಧ ಭಾಗಗಳಲ್ಲಿ ಜರುಗಿದ ಪ್ರಪಂಚ ತೆಲುಗು ಮಹಾಸಭೆಗಳ ಪ್ರಧಾನ ಕಾರ್ಯದರ್ಶಿಯಾಗಿ ಅತ್ಯುತ್ತಮ ಸೇವೆಗೈದಿದ್ದಾರೆ . ಮೊದಲ ತೆಲುಗು ಮಹಾಸಭೆ ಹೈದರಾಬಾದ್‌ನಲ್ಲಿ ಜರುಗಿದ್ದು , ತದನಂತರ ಮುಂಬೈ , ಚೆನ್ನೈ , ಬೆಂಗಳೂರು , ಹಾಗೂ ಬಹರಂಪುರ್ ಮುಂತಾದ ಕಡೆಗಳಲ್ಲಿ ಜರುಗಿದ ತೆಲುಗು ಸಮಾವೇಶಗಳ ಯಶಸ್ಸಿಗೆ ಮಹತ್ತರ ಕೊಡುಗೆ ನೀಡಿದ್ದಾರೆ . ಡಾ . ಎ . ರಾಧಾಕೃಷ್ಣ ರಾಜು ರವರು ಹೈದರಾಬಾದ್‌ನ ಪೊಟ್ಟಿ ಶ್ರೀರಾಮುಲು ತೆಲುಗು ವಿಶ್ವವಿದ್ಯಾಲಯ ಸಲಹಾ ಮಂಡಳಿ ಅಧ್ಯಕ್ಷರಾಗಿಯೂ , ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ . ಇಂದಿಗೂ ಸಹ ತೆಲುಗು ವಿಜ್ಞಾನ ಸಮಿತಿಯ ಕಾರ್ಯಚಟುವಟಿಕೆಗಳಿಗೆ ಕಾರಣೀಭೂತರಾಗಿದ್ದಾರೆ . ತೆಲುಗು ವಿಜ್ಞಾನ ಸಮಿತಿ 67ನೇ ಸಂಸ್ಥಾಪಕ ದಿನೋತ್ಸವ ಮತ್ತು ಪದ್ಮಭೂಷಣ , ಜ್ಞಾನಪೀಠ ಪುರಸ್ತುತರು , ಡಾ . ಶ್ರೀ ನಾರಾಯಣ ರೆಡ್ಡಿ ರವರ 88ನೇ ಜನ್ಮ ಜಯಂತಿ
ಆಚರಿಸುವ ಬಗ್ಗೆ ದಿನಾಂಕ 27 . 07 . 2019 ಶನಿವಾರ ಸಂಜೆ 5 . 30ಕ್ಕೆ ಶ್ರೀ ಕೃಷ್ಣದೇವರಾಯ ಕಲಾಮಂದಿರ , ವೈಯಾಲಿಕಾವಲ್‌ನಲ್ಲಿ ಆಚರಿಸಲಾಗುವುದು . ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಶ್ರೀ ರಮೇಶ್‌ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ . ಜ್ಞಾನಪೀಠ ಪುರಸ್ಕೃತರು , ಪದ್ಮಶ್ರೀ , ಕನ್ನಡದ ಹಿರಿಯ ಸಾಹಿತಿ ಡಾ . ಚಂದ್ರಶೇಖರ್ ಕಂಬಾರ ಅಧ್ಯಕ್ಷರು , ಕೇಂದ್ರ ಸಾಹಿತ್ಯ ಅಕಾಡೆಮಿ ( ನವದೆಹಲ ) ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ . ಡಾ . ಎ . ರಾಧಾಕೃಷ್ಣ ರಾಜು , ತೆಲುಗು ವಿಜ್ಞಾನ ಸಮಿತಿ , ಅಧ್ಯಕ್ಷತೆ ವಹಿಸಲಿದ್ದಾರೆ . ಆಂಧ್ರಪ್ರದೇಶ ವಿಧಾನಸಭಾ ಮಾಜಿ ಉಪಸಭಾಪತಿ ಶ್ರೀ ಮಂಡಲ ಬುದ್ಧಪ್ರಸಾದ್ ರವರು ವಿಶಿಷ್ಟ ಅತಿಥಿಯಾಗಿ ಭಾಗವಹಿಸಲಿದ್ದಾರೆ . ತೆಲುಗು ವಿಜ್ಞಾನ ವಿದ್ಯಾಸಮಿತಿ ಅಧ್ಯಕ್ಷರಾದ ಕೆ . ಮುನಿಸ್ವಾಮಿಯವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ .

ಈ ಸಂದರ್ಭದಲ್ಲಿ ಡಾ . ಶ್ರೀ ನಾರಾಯಣ ರೆಡ್ಡಿಯವರ ಸಾಹಿತಿ ಪುರಸ್ಕಾರವನ್ನು ( 2019 ) ಖ್ಯಾತ ತೆಲುಗು ಸಾಹಿತಿಗಳು ಮತ್ತು ಚಲನಚಿತ್ರ ಸಾಹಿತಿಗಳು ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಅವರಿಗೆ ಮತ್ತು ಕನ್ನಡ ಸಾಹಿತಿಗಳು ಇಂದಿನ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಕಾರ್ಯದರ್ಶಿಯವರಾದ ಮಾರ್ಕಂಡಪುರಂ ಶ್ರೀನಿವಾಸ ರವರಿಗೂ ವಿತರಿಸಲಾಗುವುದು . ಈ ಸಂದರ್ಭದಲ್ಲಿ ಶ್ರೀ ಎಸ್ . ವಿ . ರಾಮರಾವ್ , ಹೈದರಾಬಾದ್‌ ಅವರು ತಯಾರಿಸಲಾದ ಡಾ . ಸಿ . ನಾರಾಯಣರೆಡ್ಡಿಯವರ ಚಲನಚಿತ್ರವನ್ನು ಪ್ರದರ್ಶಿಸುತ್ತೇವೆ . ಅಷ್ಟೇ ಅಲ್ಲದೆ ನಾರಾಯಣ ರೆಡ್ಡಿಯವರು ರಚಿಸಿರುವ ಸಿನಿಗೀತೆಗಳನ್ನು ಖ್ಯಾತ ಹಾಡುಗಾರರು ಶ್ರೀ ನವೀನ್ ಮತ್ತು ಧನಲಕ್ಷ್ಮಿಯವರ ವೃಂದ ಪಾಲ್ಗೊಳ್ಳಲಿದೆ . ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಸಹೃದಯ ಆಹ್ವಾನವನ್ನು ಕೋರುತ್ತೇವೆ .

– ಡಾ . ಎ . ರಾಧಾಕೃಷ್ಣ ರಾಜು

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.